For Quick Alerts
ALLOW NOTIFICATIONS  
For Daily Alerts

ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಇನ್ಷೂರೆನ್ಸ್ ಕಂಪೆನಿಗೆ 4,108 ಕೋಟಿ ರು. ನಷ್ಟ

|

ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಇನ್ಷೂರೆನ್ಸ್ ಕಂಪೆನಿ ಲಿಮಿಟೆಡ್ ಕಳೆದ ಆರ್ಥಿಕ ವರ್ಷದಲ್ಲಿ 4,108 ಕೋಟಿ ರುಪಾಯಿ ನಿವ್ವಳ ನಷ್ಟ ಕಂಡಿದೆ. ಇದರಿಂದಾಗಿ ಕಂಪೆನಿಯ ನಿವ್ವಳ ಮೌಲ್ಯ ಹಾಗೂ ಆಸ್ತಿಯ ಮೇಲೆ ಪರಿಣಾಮ ಆಗುತ್ತಿದೆ ಎಂದು ಕಂಪೆನಿಯ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ತಜಿಂದರ್ ಮುಖರ್ಜಿ ಅವರು ಕಂಪೆನಿಯ ಸಿಬ್ಬಂದಿಗೆ ಬರೆದಿರುವ ಪತ್ರದಲ್ಲಿ, 2019- 20ರ ಅಂತಿಮ ಲೆಕ್ಕಾಚಾರವನ್ನು ಆಡಳಿತ ಮಂಡಳಿಯು ಸೆಪ್ಟೆಂಬರ್ 26ರಂದು ಒಪ್ಪಿದೆ. ನೀವೆಲ್ಲ ನೋಡಿದ್ದೀರಿ, ಕಂಪೆನಿಗೆ 4108 ಕೋಟಿ ನಿವ್ವಳ ನಷ್ಟವಾಗಿದೆ. ಇದರಿಂದ ಕಂಪೆನಿಯ ನಿವ್ವಳ ಮೌಲ್ಯ ಹಾಗೂ ಆಸ್ತಿ ಮೇಲೆ ಗಂಭೀರ ಪರಿಣಾಮ ಆಗುತ್ತದೆ ಎಂದಿದ್ದಾರೆ.

ಮೋಟಾರ್, ಆರೋಗ್ಯ ಮತ್ತು ಬೆಳೆ ವಿಮೆ ಕ್ಲೇಮ್ ಹೆಚ್ಚಿನ ಪ್ರಮಾಣದಲ್ಲಿ ಬಂದಿರುವುದು, ಐಬಿಎನ್ ಆರ್ ಪ್ರಾವಿಷನ್ ನಲ್ಲಿ ಹೆಚ್ಚಳ (ಕ್ಲೇಮ್ ಗಳು ಸಂಭವಿಸಿದ್ದು ಪಾಲಿಸಿದಾರರು ವರದಿ ಮಾಡಿಲ್ಲದ ಮೊತ್ತ) ಹಾಗೂ ಉದ್ಯೋಗಿಗಳ ಭವಿಷ್ಯದ ಪೆನ್ಷನ್ ಜವಾಬ್ದಾರಿಗೆ ಪ್ರಾವಿಷನ್ ಇವೆಲ್ಲವೂ ಸೇರಿ ನಷ್ಟದ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಅವರು ತಿಳಿಸಿದ್ದಾರೆ.

ನ್ಯಾಷನಲ್ ಇನ್ಷೂರೆನ್ಸ್ ಕಂಪೆನಿಗೆ 4,108 ಕೋಟಿ ರು. ನಷ್ಟ

ಈ ನಷ್ಟಗಳ ಹೊರತಾಗಿಯೂ ಕಂಪೆನಿಯು ಯಾವುದೇ ನಗದು ಸಮಸ್ಯೆ ಎದುರಿಸುತ್ತಿಲ್ಲ. ಕ್ಲೇಮೆಂಟ್ ಗಳು, ಉದ್ಯೋಗಿಗಳು ಮತ್ತು ಮಾರಾಟಗಾರರಿಗೆ ಹಣ ಬಿಡುಗಡೆ ಸರಿಯಾದ ಸಮಯಕ್ಕೆ ಆಗುತ್ತಿದೆ ಎಂದು ಹೇಳಿದ್ದಾರೆ.

ಮುಖರ್ಜಿ ಮಾತನಾಡಿ, 2018- 19ನೇ ಸಾಲಿಗೆ ಹೋಲಿಸಿದಲ್ಲಿ ಉದ್ಯೋಗಿಗಳ ಪೆನ್ಷನ್ ಜವಾಬ್ದಾರಿಗಳಿಗೆ 2019- 20ರಲ್ಲಿ ಹೆಚ್ಚುವರಿಯಾಗಿ 1430 ಕೋಟಿ ರುಪಾಯಿಯನ್ನು ಮೀಸಲಿರಿಸಲಾಗಿದೆ. 2020ರಲ್ಲಿ ಸರ್ಕಾರದಿಂದ ನ್ಯಾಷನಲ್ ಇನ್ಷೂರೆನ್ಸ್ ಗೆ 1675 ಕೋಟಿ ಬಂಡವಾಳ ಪೂರೈಸಲಾಗಿದೆ. ಈ ವರ್ಷ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು, ಸಾಧನೆ ಆಧಾರದಲ್ಲಿ ಇನ್ನಷ್ಟು ಬಂಡವಾಳ ಪೂರೈಸಲಾಗುತ್ತದೆ ಎಂದು ಮುಖರ್ಜಿ ತಿಳಿಸಿದ್ದಾರೆ.

English summary

National Insurance Company Posts 4108 Crore Net Loss For FY 2019- 20

Government owned National Insurance company post 4108 crore net loss for financial year 2019- 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X