For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಡೇಟಾ ಬೆಲೆ ಕಡಿಮೆ, ಜಿಯೋ ಯತ್ನಕ್ಕೆ ನೆಟ್‌ಫ್ಲಿಕ್ಸ್ ಸಿಇಒ ಹೊಗಳಿಕೆ

|

ನವದೆಹಲಿ, ಫೆಬ್ರವರಿ 14: ಭಾರತದಲ್ಲಿ ಡೇಟಾ ಬೆಲೆಗಳನ್ನು ಅನಿರೀಕ್ಷಿತ ಮಟ್ಟಕ್ಕೆ ಇಳಿಸುವ ಮೂಲಕ ಸ್ಟ್ರೀಮಿಂಗ್ ಸೇವೆಗಳ ಯಶಸ್ಸಿಗೆ ಕಾರಣವಾಗಿದ್ದಕ್ಕಾಗಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋದ ಪ್ರಯತ್ನಗಳನ್ನು ನೆಟ್‌ಫ್ಲಿಕ್ಸ್ ಸಿಇಒ ರೀಡ್ ಹೇಸ್ಟಿಂಗ್ಸ್ ಶ್ಲಾಘಿಸಿದ್ದಾರೆ ಎಂದು ಫಾರ್ಚೂನ್ ಇಂಡಿಯಾ ವರದಿ ಮಾಡಿದೆ.

 

"ಭಾರತದಲ್ಲಿ ಆದಂತೆ ವಿಶ್ವದ ಬೇರೆಲ್ಲಿಯೂ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಡೇಟಾ ಬೆಲೆಗಳು ಅತ್ಯಧಿಕ ಮಟ್ಟದಿಂದ ಅತ್ಯಂತ ಕಡಿಮೆ ಮಟ್ಟಕ್ಕೆ ಬದಲಾಗಿಲ್ಲ. ವಾಸ್ತವವಾಗಿ, ರಿಲಯನ್ಸ್ ಜಿಯೋ ತಂದ ಈ ಪರಿವರ್ತನೆ ಇಲ್ಲದಿದ್ದರೆ, ನೆಟ್‌ಫ್ಲಿಕ್ಸ್‌ನ ವ್ಯವಹಾರವು ಭಾರತದಲ್ಲಿ ನಡೆಯುತ್ತಲೇ ಇರಲಿಲ್ಲ," ಎಂದು ಹೇಸ್ಟಿಂಗ್ಸ್ ಹೇಳಿದ್ದಾರೆ.

 

"ನಾವು ಕಂಟೆಂಟ್‌ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ ಸಮಯದಲ್ಲೇ ಇತರರು ಅಂತರಜಾಲವನ್ನು ಪರಿವರ್ತಿಸಲು ಹೂಡಿಕೆ ಮಾಡುತ್ತಿದ್ದದ್ದು ನಮ್ಮ ಅದೃಷ್ಟ" ಎಂದು ಅವರು ಹೇಳಿದ್ದಾರೆ.

ಡೇಟಾ ಬೆಲೆ ಕಡಿಮೆಗೆ ಜಿಯೋ ಯತ್ನ ಹೊಗಳಿದ ನೆಟ್‌ಫ್ಲಿಕ್ಸ್ ಸಿಇಒ

ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ ಅವರು, "ನಾವು ಪ್ರತಿವರ್ಷವೂ ಬೆಳೆಯುತ್ತಿದ್ದೇವೆ, ನಾವು ನಮ್ಮ ತಂಡವನ್ನು ಕಟ್ಟುತ್ತಿದ್ದೇವೆ, ಕಂಟೆಂಟ್ ಅನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, ಸೇಕ್ರೆಡ್ ಗೇಮ್ಸ್ ಇರಲಿ, ಎಕೆ ವರ್ಸಸ್ ಎಕೆ ಇರಲಿ, ವಿವಿಧ ಬಗೆಯ ಹೆಚ್ಚುಹೆಚ್ಚಿನ ಕಂಟೆಂಟ್‌ನೊಂದಿಗೆ ಯಾವುದು ಕೆಲಸ ಮಾಡುತ್ತದೆಂದು ಅರಿತುಕೊಳ್ಳುತ್ತಿದ್ದೇವೆ. ನಾವು ಇನ್ನೂ ಕಲಿಕೆಯ ಹಂತದಲ್ಲಿದ್ದೇವೆ. ನಾವು ಭಾರತದಲ್ಲಿ ಎಲ್ಲಿಗೆ ತಲುಪಬೇಕು ಎನ್ನುವುದಕ್ಕೆ ಇದು ಕೇವಲ ಆರಂಭ ಅಷ್ಟೇ," ಎಂದು ಹೇಳಿದ್ದಾರೆ.

"ನೀವು ಅಂತರಜಾಲದಲ್ಲಿರುವ ಹಲವು ಮಾರುಕಟ್ಟೆಗಳನ್ನು ನೋಡಿದರೆ, ಹಲವು ವಿಭಿನ್ನ ಸಂಸ್ಥೆಗಳೊಂದಿಗೆ ಅದು ಸಾಕಷ್ಟು ಛಿದ್ರಗೊಂಡಿದೆ. ಯಾವುದೇ ದೇಶದಲ್ಲಿ ಒಂದು ಟೀವಿ ಕೇಂದ್ರವನ್ನು ರೂಪಿಸುವುದು ಎಷ್ಟು ಕಷ್ಟ ಎಂದು ಯೋಚಿಸಿ. ವೀಡಿಯೊ ವೆಬ್‌ಸೈಟ್ ರಚಿಸುವುದು ಅದಕ್ಕಿಂತ ಬಹಳ ಸುಲಭ. ಹಾಗಾಗಿ, ಅಲ್ಲಿ ಬಹಳಷ್ಟು ಆಯ್ಕೆಗಳಿರುತ್ತವೆಂದು ನಾನು ಭಾವಿಸುತ್ತೇನೆ,"ಎಂದು ಅವರು ಹೇಳಿದ್ದಾರೆ.

ಪ್ರೇಕ್ಷಕರು ಸಿನೆಮಾ ಹಾಲ್‌ಗಳಿಗೆ ಭೇಟಿ ನೀಡಲು ಸಾಧ್ಯವಾಗದ ಮತ್ತು ಚಿತ್ರಮಂದಿರಗಳಲ್ಲಿ ಪ್ರವೇಶದ ಹಕ್ಕುಗಳನ್ನು ಸಹ ನಿರ್ಬಂಧಿಸಲಾಗಿರುವ ಕೋವಿಡ್-19 ಜಾಗತಿಕ ಸೋಂಕಿನ ಸಂದರ್ಭದ ಕುರಿತು, "ನಮ್ಮ ಸದಸ್ಯರನ್ನು ಸಂತೋಷಪಡಿಸುವುದರ ಕಡೆಗೇ ನಮ್ಮ ಹೆಚ್ಚಿನ ಗಮನ ಕೇಂದ್ರೀಕೃತವಾಗಿದೆ. ಆದ್ದರಿಂದ, ವಿಶೇಷವಾಗಿ ಕೋವಿಡ್-19 ಸಂದರ್ಭದಲ್ಲಿ, ಚಿತ್ರಮಂದಿರಕ್ಕೆ ಹೋಗಬಹುದಾಗಿದ್ದ ಚಲನಚಿತ್ರಗಳನ್ನು ಖರೀದಿಸುವ ಅವಕಾಶ ನಮಗೆ ಸಿಕ್ಕಿದರೆ, ಅದು ನಿಜಕ್ಕೂ ಅರ್ಥಪೂರ್ಣ. ಮೂಲತಃ, ನಮ್ಮ ಸದಸ್ಯರ ಪರವಾಗಿ, ಅವರು ಇಷ್ಟಪಡುವ ಕಂಟೆಂಟ್ ಅನ್ನು ಒದಗಿಸಲು ನಾವು ಖರ್ಚು ಮಾಡಲು ಬಯಸುತ್ತೇವೆ. ಹಾಗೆ ಮಾಡಿದಾಗ ನಾವು ಬೆಳೆಯುತ್ತೇವೆ. ನಮ್ಮದೇ ಅದ ಕಂಟೆಂಟ್ ಅನ್ನು ಅಭಿವೃದ್ಧಿಪಡಿಸುವುದರ ಬಗ್ಗೆ ನಾವು ಹೆಚ್ಚು ಉತ್ಸುಕರಾಗಿದ್ದೇವೆ ಮತ್ತು ಅದು ನಮಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ," ಎಂದು ಅವರು ಹೇಳಿದರು.

English summary

Netflix CEO lauds Reliance Jio's efforts for sharp fall in data prices in India

Netflix CEO lauds Mukesh Ambani's Reliance Jio's efforts for sharp fall in data prices in India
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X