For Quick Alerts
ALLOW NOTIFICATIONS  
For Daily Alerts

ಬಜಾಜ್ ಪಲ್ಸರ್ NS125 ಭಾರತದಲ್ಲಿ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ಏನು?

|

ಬಹಳ ಜನಪ್ರಿಯ ಬೈಕ್‌ಗಳಲ್ಲಿ ಒಂದಾದ ಬಜಾಜ್ ಪಲ್ಸರ್ ಹೊಸ ಆವೃತ್ತಿಯ ಬೈಕ್ ಭಾರತದಲ್ಲಿ ಬಿಡುಗಡೆಗೊಂಡಿದೆ. ಬಜಾಜ್ ಪಲ್ಸರ್ ಎನ್ಎಸ್ 125 ಸಿಸಿ ಸ್ಪೋರ್ಟಿ ಲುಕ್ ಅನ್ನು ಹೊಂದಿದ್ದು, ಗ್ರಾಹಕರನ್ನು ಸೆಳೆಯುತ್ತಿದೆ.

ಬಜಾಜ್ ಪಲ್ಸರ್ ಎನ್ಎಸ್ 125 ಅನ್ನು 93,690 ರೂ.ಗಳ ಬೆಲೆಯಲ್ಲಿ (ದೆಹಲಿ ಎಕ್ಸ್‌ ಶೋ ರೂಮ್) ಪರಿಚಯಿಸಲಾಗಿದ್ದು, ಈ ಬೈಕು ಎನ್ಎಸ್ ಶ್ರೇಣಿಯಲ್ಲಿನ ಚಿಕ್ಕ ಮಾದರಿಯಾಗಿದೆ. ಈ ಬೈಕು ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.

ಬಜಾಜ್ ಪಲ್ಸರ್ NS125 ಭಾರತದಲ್ಲಿ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ಏನು?

ಬಜಾಜ್ ಪಲ್ಸರ್ ಎನ್ಎಸ್ 125 ಸಿಸಿ ಬಿಎಸ್ 6 ಡಿಟಿಎಸ್-ಐ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ, ಇದು 12 ಬಿಹೆಚ್‌ಪಿ ಶಕ್ತಿಯನ್ನು ಮತ್ತು ಅದರ ವಿಭಾಗದಲ್ಲಿ ಗರಿಷ್ಠ 11 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಒದಗಿಸುತ್ತದೆ.

ಬಜಾಜ್ ಹೊಸ 125 ಸಿಸಿ ಬೈಕನ್ನು ನಾಲ್ಕು ವಿಭಿನ್ನ ಬಣ್ಣಗಳ ಆಯ್ಕೆಗಳಲ್ಲಿ ನೀಡಲಾಗಿದೆ. ಅವುಗಳೆಂದರೆ, ಬೀಚ್ ಬ್ಲೂ, ಫಿಯರಿ ಆರೆಂಜ್, ಬರ್ನ್ಟ್ ರೆಡ್, ಮತ್ತು ಪ್ಯೂಟರ್ ಗ್ರೇ ಆಗಿದೆ.

ಪಲ್ಸರ್ ಎನ್ಎಸ್ ಶ್ರೇಣಿಯನ್ನು ಮೊದಲು ಬಜಾಜ್ ಪಲ್ಸರ್ ಎನ್ಎಸ್ 200 ನೊಂದಿಗೆ ಪ್ರಾರಂಭಿಸಲಾಯಿತು, ನಂತರ ಎನ್ಎಸ್ 160 ಹಾಗೂ ಇತ್ತೀಚೆಗೆ ಎನ್ಎಸ್ 125 ಬಿಡುಗಡೆಗೊಂಡಿದ್ದು ಗ್ರಾಹಕರು ಹೆಚ್ಚು ಭರವಸೆ ಇರಿಸಿದ್ದಾರೆ.

ಈ ಬೈಕ್‌ನಲ್ಲಿ ಟ್ವಿನ್ ಸ್ಟ್ರಿಪ್ ಎಲ್ಇಡಿ ಟೈಲ್ ಲ್ಯಾಂಪ್, 5 ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗಿದೆ. ಬ್ರೇಕಿಂಗ್‌ಗಾಗಿ, ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ, ಅದರಲ್ಲಿ 12 ಲೀಟರ್ ಇಂಧನ ಟ್ಯಾಂಕ್ ನೀಡಲಾಗಿದೆ. ಈ ಬೈಕ್‌ನ ತೂಕ 144 ಕೆಜಿ, ಈ ಬೈಕ್‌ಗೆ 179 ಎಂಎಂ ಮತ್ತು 1353 ಎಂಎಂ ವೀಲ್‌ಬೇಸ್‌ನ ಗ್ರೌಂಡ್ ಕ್ಲಿಯರೆನ್ಸ್ ಇದೆ.

English summary

New Bajaj Pulsar NS 125 Launched In India: Check Price And Features

Bajaj Auto has launched the 2021 Pulsar NS 125 in India. Bike price , specs, features etc Here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X