For Quick Alerts
ALLOW NOTIFICATIONS  
For Daily Alerts

ಎಚ್ ಡಿಎಫ್ ಸಿ ಬ್ಯಾಂಕ್ ಹೊಸ ಡಿಜಿಟಲ್ ವ್ಯವಹಾರ, ಕ್ರೆಡಿಟ್ ಕಾರ್ಡ್ ಗೆ ತಡೆ

By ಅನಿಲ್ ಆಚಾರ್
|

ಎಚ್ ಡಿಎಫ್ ಸಿ ಬ್ಯಾಂಕ್ ಷೇರು ಗುರುವಾರದಂದು (ಡಿಸೆಂಬರ್ 3, 2020) 1 ಪರ್ಸೆಂಟ್ ಗೂ ಹೆಚ್ಚು ಇಳಿಕೆ ಕಂಡಿದೆ. ತಾತ್ಕಾಲಿಕವಾಗಿ ಯಾವುದೇ ಹೊಸ ಡಿಜಿಟಲ್ ಬಿಜಿನೆಸ್ ಆರಂಭ ಮಾಡಬಾರದು ಮತ್ತು ಹೊಸ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಸೋರ್ಸಿಂಗ್ ಮಾಡಬಾರದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ತಿಳಿಸಿರುವ ಹಿನ್ನೆಲೆಯಲ್ಲಿ ಷೇರಿನ ಬೆಲೆ ಇಳಿದಿದೆ.

ಎಚ್ ಡಿಎಫ್ ಸಿ ಬ್ಯಾಂಕ್ ಡೇಟಾ ಕೇಂದ್ರದಲ್ಲಿ ತೊಂದರೆಯಾಗಿ, ಹಲವು ಗಂಟೆಗಳ ಕಾಲ ಯೂನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ), ಎಟಿಎಂಗಳು ಹಾಗೂ ಕಾರ್ಡ್ ಚಾನೆಲ್ ಗಳ ಸೇವೆ ವ್ಯತ್ಯಯ ಆಗಿದ್ದರ ಹಿಂದಿನ ಕಾರಣವನ್ನು ಆರ್ ಬಿಐನಿಂದ ಕೇಳಲಾಗಿದೆ.

ದೇಶದ ಪ್ರಮುಖ ಕ್ರೆಡಿಟ್ ಬ್ಯುರೋದಿಂದ ಎಚ್ ಡಿಎಫ್ ಸಿ ಬ್ಯಾಂಕ್ ವಿರುದ್ಧ ದೂರುದೇಶದ ಪ್ರಮುಖ ಕ್ರೆಡಿಟ್ ಬ್ಯುರೋದಿಂದ ಎಚ್ ಡಿಎಫ್ ಸಿ ಬ್ಯಾಂಕ್ ವಿರುದ್ಧ ದೂರು

ಆರ್ ಬಿಐ ಆದೇಶದ ಪ್ರಕಾರ, ಬ್ಯಾಂಕ್ ನಿಂದ ತಾತ್ಕಾಲಿಕವಾಗಿ ಎಲ್ಲ ಡಿಜಿಟಲ್ 2.0 (ಇನ್ನೂ ಶುರು ಆಗಬೇಕು) ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು. ಡಿಜಿಟಲ್ ವ್ಯವಹಾರ ಆರಂಭಿಸಬೇಕಾದ ಎಲ್ಲವನ್ನೂ ನಿಲ್ಲಿಸಲು ಸೂಚಿಸಲಾಗಿದೆ. ಐಟಿ ಅಪ್ಲಿಕೇಷನ್ ಮತ್ತು ಹೊಸ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಸೋರ್ಸಿಂಗ್ ನಿಲ್ಲಿಸಲು ಸಹ ತಿಳಿಸಲಾಗಿದೆ.

HDFC ಬ್ಯಾಂಕ್ ಹೊಸ ಡಿಜಿಟಲ್ ವ್ಯವಹಾರ, ಕ್ರೆಡಿಟ್ ಕಾರ್ಡ್ ಗೆ ತಡೆ

ಆದೇಶದ ಪ್ರಕಾರ, ಏನೇನು ಸಮಸ್ಯೆ ಆಗಿದೆ ಎಂಬ ಬಗ್ಗೆ ಬ್ಯಾಂಕ್ ಮಂಡಳಿಯಿಂದ ಪರೀಕ್ಷೆ ನಡೆಸಿ, ಉತ್ತರದಾಯಿತ್ವವನ್ನು ನಿಗದಿ ಮಾಡಲಾಗುತ್ತದೆ.

English summary

RBI Halts HDFC Bank's Digital Activities & Issue of New Credit Cards

HDFC Bank new digital launch and sourcing of new credit card customers halt by RBI order. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X