For Quick Alerts
ALLOW NOTIFICATIONS  
For Daily Alerts

NMC ಹೆಲ್ತ್ ಸ್ಥಾಪಕ BR ಶೆಟ್ಟಿ ಯುಎಇಗೆ ತೆರಳದಂತೆ ತಡೆದ ವಲಸೆ ಅಧಿಕಾರಿಗಳು

|

ಎನ್ ಎಂಸಿ ಹೆಲ್ತ್ ಸ್ಥಾಪಕ ಬಿ.ಆರ್. ಶೆಟ್ಟಿ ಅವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ತೆರಳದಂತೆ ವಲಸೆ ಅಧಿಕಾರಿಗಳು ಶನಿವಾರ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆದಿದ್ದಾರೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ಭಾನುವಾರ ತಿಳಿಸಿದ್ದಾರೆ.

 

ಬಿ.ಆರ್. ಶೆಟ್ಟಿ ಶನಿವಾರ ಹೇಳಿಕೆಯೊಂದನ್ನು ನೀಡಿ, ಯುಎಇಗೆ ಮರಳುವ ಯೋಜನೆ ಇದೆ ಎಂದು ಹೇಳಿದ್ದರು. ಆಸ್ಪತ್ರೆಯ ಸಾಲವು ವಿಪರೀತ ಹೆಚ್ಚಾಗಿರುವುದನ್ನು ಮುಚ್ಚಿಟ್ಟು, ಆ ದೇಶವನ್ನು ಬಿಟ್ಟು ಬರಲಾಗಿದೆ ಎಂಬ ಆರೋಪವನ್ನು ಅವರು ನಿರಾಕರಿಸಿದ್ದರು. ಇನ್ನು ಬಿ.ಆರ್. ಶೆಟ್ಟಿ ಅವರ ಪತ್ನಿಗೆ ಅಬುಧಾಬಿಗೆ ಪ್ರಯಾಣಿಸಲು ಅನಮತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

 

ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ 'ಗೋಲ್ಡನ್' ವೀಸಾ ಹತ್ತು ವರ್ಷಕ್ಕೆಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ 'ಗೋಲ್ಡನ್' ವೀಸಾ ಹತ್ತು ವರ್ಷಕ್ಕೆ

"ನಮ್ಮ ಬಳಿ ಕೆಲವು ಸೂಚನೆಗಳಿವೆ, ಆದ್ದರಿಂದ ಈ ಸಮಯದಲ್ಲಿ ಪ್ರಯಾಣಿಸಲು ಬಿಡುವುದಕ್ಕೆ ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಿದೆವು," ಎಂಬ ಮಾಹಿತಿಯನ್ನು ಮೂಲಗಳು ನೀಡಿವೆ. ಇನ್ನೂ ಮುಂದುವರಿದು, ಶೆಟ್ಟಿ ಅವರನ್ನು ವಶಕ್ಕೆ ಏನೂ ಪಡೆದಿಲ್ಲ ಅಂತಲೂ ತಿಳಿಸಲಾಗಿದೆ.

BR ಶೆಟ್ಟಿ ಯುಎಇಗೆ ತೆರಳದಂತೆ ತಡೆದ ವಲಸೆ ಅಧಿಕಾರಿಗಳು

ಮೊಬೈಲ್ ಫೋನ್ ಗೆ ಸಂಪರ್ಕಿಸಿದಾಗ ಪ್ರತಿಕ್ರಿಯೆಗೆ ಶೆಟ್ಟಿ ಅವರು ಲಭ್ಯರಾಗಿಲ್ಲ. ಶನಿವಾರ ಶೆಟ್ಟಿ ಅವರು ನೀಡಿದ ಹೊರತಾಗಿ ಬೇರ್ಯಾವ ಹೇಳಿಕೆ ನೀಡಲು ವಕ್ತಾರರು ನಿರಾಕರಿಸಿದ್ದಾರೆ. ಇನ್ನು ಬೆಂಗಳೂರಿನ ವಲಸೆ ಅಧಿಕಾರಿಗಳು ಪ್ರತಿಕ್ರಿಯೆಗೆ ತಕ್ಷಣಕ್ಕೆ ಲಭ್ಯರಾಗಿಲ್ಲ.

ಎನ್ ಎಂಸಿಗೆ ಅಂದಾಜು ಆರುನೂರಾ ಅರವತ್ತು ಕೋಟಿ ಅಮೆರಿಕನ್ ಡಾಲರ್ ಗೂ ಹೆಚ್ಚು ಸಾಲ ಇದೆ ಎಂಬುದು ಬಯಲಾದ ಮೇಲೆ ಕಳೆದ ಏಪ್ರಿಲ್ ನಲ್ಲಿ ಸಂಸ್ಥೆ ಆಡಳಿತಾಧಿಕಾರಿ ಕೈಗೆ ಹೋಯಿತು. ಶೆಟ್ಟಿ ಅವರು ಭಾರತದಲ್ಲೂ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಒಪ್ಪಂದದಿಂದ ಹಿಂದೆ ಸರಿದ ಕಾರಣಕ್ಕೆ ಬ್ಯಾಕ್ ಆಫ್ ಬರೋಡ ಮೊಕದ್ದಮೆ ದಾಖಲಿಸುತ್ತಿದೆ.

English summary

NMC Founder BR Shetty Stopped At BIAL From Flying To UAE: Sources

NMC founder stopped at BIAL from flying to UAE on Saturday, according to sources. Here is the details.
Story first published: Sunday, November 15, 2020, 21:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X