For Quick Alerts
ALLOW NOTIFICATIONS  
For Daily Alerts

ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಯಾವ ನಗರದಲ್ಲಿ ಎಷ್ಟು?

|

ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಅಯ್ಯೋ, ಏನಪ್ಪಾ ಇದು ಸಿಕ್ಕಾಪಟ್ಟೆ ಖರ್ಚು ಎಂದು ನಿಡುಸುಯ್ಯುತ್ತಿದ್ದವರಿಗೆ ಗುಡ್ ನ್ಯೂಸ್ ಇದೆ. ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಮೇ ತಿಂಗಳಿಗೆ ಸಿಕ್ಕಾಪಟ್ಟೆ ಇಳಿಕೆಯಾಗಿದೆ. ಎಷ್ಟು ಕಡಿಮೆಯಾಗಿದೆ, ಯಾವ ನಗರದಲ್ಲಿ ಎಷ್ಟು ರೇಟ್ ಎಲ್ಲ ಡೀಟೇಲ್ಸ್ ಇಲ್ಲಿದೆ.

ದೆಹಲಿಗೆ ಅನ್ವಯ ಆಗುವಂತೆ ಎಲ್ ಪಿಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 162.5 ರುಪಾಯಿಗಳ ಭಾರೀ ಇಳಿಕೆಯಾಗಿದೆ. ದೇಶದ ಇತರ ಭಾಗಗಳಲ್ಲೂ ತೈಲ ಮಾರ್ಕೆಟಿಂಗ್ ಕಂಪೆನಿಗಳು ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ ಮಾಡಿವೆ. ಮೇ 1ನೇ ತಾರೀಕಿನಿಂದಲೇ 14.2 ಕೇಜಿ ತೂಕದ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯು 581.50 ಆಗಲಿದೆ. ಈ ತನಕ ಬೆಲೆಯು 744 ರುಪಾಯಿ ಇತ್ತು.

ಬೆಂಗಳೂರಿನಲ್ಲಿ 585ಕ್ಕೆ ಇಳಿದಿದೆ

ಬೆಂಗಳೂರಿನಲ್ಲಿ 585ಕ್ಕೆ ಇಳಿದಿದೆ

ಬೆಂಗಳೂರಿನಲ್ಲಿ 744 ರುಪಾಯಿ ಇದ್ದ ದರವು 585ಕ್ಕೆ ಇಳಿದಿದೆ. ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಸಿಲಿಂಡರ್ ದರವು ಕ್ರಮವಾಗಿ 579, 584.50 ಹಾಗೂ 569.50 ಆಗಲಿದೆ. ಜಾಗತಿಕ ಇಂಧನ ಮಾರ್ಕೆಟ್ ನಲ್ಲಿ ಭಾರೀ ಬೆಲೆ ಇಳಿಕೆ ಆಗಿರುವುದರಿಂದ ಎಲ್ ಪಿಜಿ ದರವೂ ಇಳಿದಿದೆ. ಕಳೆದ ಎರಡು ತಿಂಗಳಿಂದ ಬೆಲೆ ಇಳಿಯುವ ಮೊದಲು ಆಗಸ್ಟ್ 2019ರಿಂದ ಏರಿಕೆ ದಾಖಲಿಸುತ್ತಲೇ ಸಾಗಿತ್ತು.

ಎಂಟು ಕೋಟಿ ಮಂದಿಗೆ ಉಚಿತ ಸಿಲಿಂಡರ್ ಘೋಷಣೆ

ಎಂಟು ಕೋಟಿ ಮಂದಿಗೆ ಉಚಿತ ಸಿಲಿಂಡರ್ ಘೋಷಣೆ

ಲಾಕ್ ಡೌನ್ ಘೋಷಣೆಯಾದ ಮೇಲೆ ಜನರು ಗಾಬರಿಯಿಂದ ಸಿಲಿಂಡರ್ ಖರೀದಿಯನ್ನು ಗ್ರಾಹಕರು ಹೆಚ್ಚು ಮಾಡಿದ್ದರು. ಇನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಎಂಟು ಕೋಟಿ ಫಲಾನುಭವಿಗಳಿಗೆ 3 ಎಲ್ ಪಿಜಿ ಸಿಲಿಂಡರ್ ಉಚಿತವಾಗಿ ವಿತರಿಸುವ ಘೋಷಣೆ ಮಾಡಿದೆ. ಏಪ್ರಿಲ್- ಮೇ- ಜೂನ್ ತಿಂಗಳಲ್ಲಿ ಉಚಿತವಾಗಿ ಸಿಲಿಂಡರ್ ನೀಡಲಾಗುತ್ತದೆ. ಈ ಯೋಜನೆ ಅಡಿ ಈಗಾಗಲೇ ದೇಶದಾದ್ಯಂತ 11 ಲಕ್ಷ ಸಿಲಿಂಡರ್ ಉಚಿತವಾಗಿ ವಿತರಿಸಲಾಗಿದೆ.

ಯಾವ ನಗರದಲ್ಲಿ ಎಷ್ಟು ಬೆಲೆ?

ಯಾವ ನಗರದಲ್ಲಿ ಎಷ್ಟು ಬೆಲೆ?

ಕಳೆದ ತಿಂಗಳು ಸಿಲಿಂಡರ್ ಬೆಲೆಯನ್ನು 61.5 ರುಪಾಯಿಯಷ್ಟು ಇಳಿಸಲಾಗಿತ್ತು. ಆ ಮೂಲಕ ಸಿಲಿಂಡರ್ ದರಗಳು ಇಂತಿದ್ದವು: ದೆಹಲಿ 744, ಮುಂಬೈ 714.5, ಕೋಲ್ಕತ್ತಾ 774.5, ಚೆನ್ನೈನಲ್ಲಿ 761.5 ಆಗಿತ್ತು. ಲಾಕ್ ಡೌನ್ ಅವಧಿಯಲ್ಲಿ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ದೇಶದ ಎಲ್ಲ ಭಾಗಗಳಲ್ಲಿಯೂ ಸಿಲಿಂಡರ್ ತಲುಪಿಸುವುದಾಗಿ ತೈಲ ಮಾರ್ಕೆಟಿಂಗ್ ಕಂಪೆನಿಗಳು ಹೇಳಿವೆ.

English summary

Non Subsidised LPG Cylinder Price Slashed By 162 Rupees

Non subsidised LPG cylinder price slashed by 162.5 rupees in Delhi from May 1. Here is the complete details of other part of India.
Story first published: Friday, May 1, 2020, 14:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X