For Quick Alerts
ALLOW NOTIFICATIONS  
For Daily Alerts

100 ಕೋಟಿ ಆದಾಯದ ಅಮೆರಿಕಾ ಕಂಪನಿಯಿಂದ 36 ಲಕ್ಷ ಕೋಟಿ ಹೂಡಿಕೆಯ ಆಫರ್

|

ಕೇವಲ 19 ಉದ್ಯೋಗಿಗಳನ್ನು ಹೊಂದಿರುವ , 15 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ ಹೊಂದಿರುವ ಹಾಗೂ ಒಂದು ಪುಟದ ವೆಬ್‌ಸೈಟ್ ಅನ್ನು ಹೊಂದಿರುವ ಕಂಪನಿಯು 500 ಬಿಲಿಯನ್ ಡಾಲರ್ ಅನ್ನು ಭಾರತದ ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ (ಎನ್‌ಐಪಿ) ಗೆ ಹೂಡಿಕೆ ಮಾಡಲು ಬಯಸಿದೆ.

 

ಭಾರತದ ರೂಪಾಯಿಗಳಲ್ಲಿ ಬರೋಬ್ಬರಿ 36 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಹೂಡಿಕೆ ಮಾಡಲು ಬಯಸಿರುವ ಕಂಪನಿಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಆದರೆ ಈ ಕಂಪನಿಯು ಒಂದು ಪುಟದ ವೆಬ್‌ಸೈಟ್‌ ಅನ್ನು ಹೊಂದಿದೆ.

 
 100 ಕೋಟಿ ಆದಾಯದ ಅಮೆರಿಕಾ ಕಂಪನಿಯಿಂದ 36 ಲಕ್ಷ ಕೋಟಿ ಹೂಡಿಕೆಯ ಆಫರ್

ಲ್ಯಾಂಡಮಸ್ ರಿಯಾಲ್ಟಿ ವೆಂಚರ್ಸ್ ಹೆಸರಿನ ಕಂಪನಿಯು ಜಾಹೀರಾತುಗಳ ಮೂಲಕ ಮತ್ತು ಅದರ ವೆಬ್‌ಸೈಟ್‌ನಲ್ಲಿ ಹೇಳಿಕೆಗಳನ್ನು ಬಿಡುಗಡೆ ಮಾಡಿದೆ.

'' ಭಾರತದ ಮರುನಿರ್ಮಾಣ ಮಾಡುವ ಕೇಂದ್ರದ ಪ್ರಯತ್ನಕ್ಕೆ ಹಾಗೂ ದೇಶದ ಅರ್ಥ ವ್ಯವಸ್ಥೆಯನ್ನು ಐದು ಶತಕೋಟಿ ಡಾಲರ್ ಅರ್ಥವ್ಯವಸ್ಥೆಯನ್ನಾಗಿಸಿರುವ ಗುರಿಗೆ ಕೈಜೋಡಿಸುವ ಉದ್ದೇಶ ಇದೆ'' ಎಂದು ಲ್ಯಾಂಡಮಸ್ ರಿಯಾಲ್ಟಿ ಸಮೂಹದ ಅಧ್ಯಕ್ಷ ಪ್ರದೀಪ್ ಕುಮಾರ್ ಸತ್ಯಪ್ರಕಾಶ್ ಹೇಳಿದ್ದಾರೆ.

ಈ ಕಂಪನಿಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಕಂಪನಿಯ ವೆಬ್‌ಸೈಟ್‌ನಲ್ಲಿ ಕೂಡ ಹೆಚ್ಚಿನ ವಿವರಗಳನ್ನು ತಿಳಿಸಲಾಗಿಲ್ಲ. ಈ ಕಂಪನಿಯ ವೆಬ್‌ಸೈಟ್ ಅನ್ನು 2015ರಲ್ಲಿ ಕರ್ನಾಟಕದ ಶಿವನ್ ಚೆಟ್ಟಿ ಗಾರ್ಡನ್ಸ್‌ನಲ್ಲಿ ಮುಖ್ಯ ಕಚೇರಿ ಹೊಂದಿರುವ ಯುನೈಟೆಡ್ ಲ್ಯಾಂಡ್ ಬ್ಯಾಂಕ್ ಮೂಲಕ ನೋಂದಾಯಿಸಲಾಗಿದೆ ಎಂದು ತಿಳಿದುಬಂದಿದೆ. ಈ ವೆಬ್‌ಸೈಟ್ ಪ್ರಕಾರ ಕಂಪನಿಯ ವಿಳಾಸವು ಅಮೆರಿಕಾದ ನ್ಯೂಜೆರ್ಸಿಯಲ್ಲಿದೆ.

ಭಾರತದಲ್ಲಿ ಭೂಬ್ಯಾಂಕ್ ಸೃಷ್ಟಿಸುವ ಉದ್ದೇಶದಿಂದ ಈ ಕಂಪನಿಯನ್ನು ಹುಟ್ಟುಹಾಕಲಾಗಿದೆ ಎಂದು ಝೂಮ್ಇನ್ಫೊ ಹೇಳಿದೆ. ಕಂಪನಿಯ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಇಮೇಲ್ ವಿಳಾಸಕ್ಕೆ ಕಳುಹಿಸಲಾದ ಇಮೇಲ್‌ಗೆ ಉತ್ತರಿಸಲಾಗಲಿಲ್ಲ. ಇಮೇಲ್ ಸಂಸ್ಥೆಯ ಬಗ್ಗೆ ಮಾಹಿತಿ, ಅದರ ಹಣದ ಮೂಲ, ಪ್ರವರ್ತಕರು ಮತ್ತು ಅದರ ಬೆಂಬಲಿಗರ ಮಾಹಿತಿ, ಆದಾಯ ಮತ್ತು ಜಾಹೀರಾತನ್ನು ನೀಡುವ ಉದ್ದೇಶದ ಬಗ್ಗೆ ಮಾಹಿತಿ ಕೇಳಲಾಗಿದೆ.

English summary

One Page Website Firm Landomus Realty Offers $500 Billion Investment

An obscure US-based firm with just 19 employees, USD 15 million in revenue and hosting just a one-page website wants to invest USD 500 billion in equity into India's National Infrastructure Pipeline (NIP).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X