For Quick Alerts
ALLOW NOTIFICATIONS  
For Daily Alerts

ಉಡಾನ್ ಪ್ಲಾಟ್‌ಫಾರಂಗೆ 150 ಮುಂಚೂಣಿಯ ಬ್ರಾಂಡ್‌ಗಳು ಸೇರ್ಪಡೆ

|

ಬೆಂಗಳೂರು, ಸೆಪ್ಟೆಂಬರ್ 8: ಭಾರತದ ಅತ್ಯಂತ ದೊಡ್ಡ ಬಿಸಿನೆಸ್-ಟು-ಬಿಸಿನೆಸ್(ಬಿ2ಬಿ) ಇ-ಕಾಮರ್ಸ್ ಪ್ಲಾಟ್‌ಫಾರಂ ಉಡಾನ್ ಕಳೆದ ಆರು ತಿಂಗಳಲ್ಲಿ 150ಕ್ಕೂ ಹೆಚ್ಚು ಫಾಸ್ಟ್-ಮೂವಿಂಗ್ ಕನ್ಸೂಮರ್ ಗೂಡ್ಸ್(ಎಫ್‌ಎಂಸಿಜಿ) ಬ್ರಾಂಡ್‌ಗಳು ಪ್ಲಾಟ್‌ಫಾರಂಗೆ ಸೇರಿವೆ ಎಂದು ಪ್ರಕಟಿಸಿದೆ.

ಈ ಪ್ರತಿಷ್ಠಿತ ಬ್ರಾಂಡ್‌ಗಳು ದೇಶಾದ್ಯಂತ ಉಡಾನ್‌ನ ಸದೃಢ ಜಾಲದಿಂದ ಹಾಗೂ ಕಂಪನಿಯು ಸಣ್ಣ ವ್ಯಾಪಾರಿಗಳು ಮತ್ತು ಕಿರಾಣಿ ಅಂಗಡಿಗಳೊಂದಿಗೆ ಹೊಂದಿರುವ ದೀರ್ಘಾವಧಿ ಬಾಂಧವ್ಯದ ಪ್ರಯೋಜನ ಪಡೆಯುತ್ತವೆ. ಈ ಬ್ರಾಂಡ್‌ಗಳ ಸೇರ್ಪಡೆಯೊಂದಿಗೆ ಉಡಾನ್ ಈಗ ತನ್ನ ಪ್ಲಾಟ್‌ಫಾರಂನಲ್ಲಿ ಭಾರತದಾದ್ಯಂತ ಸಣ್ಣ ವ್ಯಾಪಾರಿಗಳು ಮತ್ತು ಕಿರಾಣಿ ಅಂಗಡಿಗಳ 250ಕ್ಕೂ ಹೆಚ್ಚು ಬ್ರಾಂಡ್‌ಗಳ ಸೇವೆ ಒದಗಿಸಲು ಸಾಧ್ಯವಾಗಿದೆ.

ಕಳೆದ ಆರು ತಿಂಗಳಲ್ಲಿ ಉಡಾನ್ ಪ್ಲಾಟ್‌ಫಾರಂನ ಅಗತ್ಯ ವಸ್ತುಗಳ ವಿಭಾಗದಲ್ಲಿ ಸಿಪ್ಲಾ ಹೆಲ್ತ್, ಪರ್ಫೆಟ್ಟಿ ವನ್ ಮೆಲ್ಲೆ, ರೇನಾಲ್ಡ್ಸ್, ಪಿಡಿಲೈಟ್ ಇತ್ಯಾದಿ ಒಳಗೊಂಡಿದ್ದು ಈ ಪ್ಲಾಟ್‌ಫಾರಂನಲ್ಲಿ ಕೈಗೆಟುಕುವ ದರಗಳಲ್ಲಿ ಉತ್ಪನ್ನಗಳು ಲಭ್ಯವಾಗುವಂತೆ ಮಾಡಿದೆ. ಎಫ್‌ಎಂಸಿಜಿ ವಿಭಾಗವು ಪ್ರಸ್ತುತ 1200 ನಗರಗಳಿಂದ 1500ನಗರಗಳಿಗೆ ವಿಸ್ತರಿಸುವ ಯೋಜನೆ ಹೊಂದಿದ್ದು ಬ್ರಾಂಡ್‌ಗಳು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಇ-ಕಾಮರ್ಸ್ ವ್ಯಾಪ್ತಿಯ ಅನುಕೂಲಗಳನ್ನು ಪಡೆಯಲು ಅವಕಾಶ ಕಲ್ಪಿಸಿದೆ.

ಉಡಾನ್ ಪ್ಲಾಟ್‌ಫಾರಂಗೆ 150 ಮುಂಚೂಣಿಯ ಬ್ರಾಂಡ್‌ಗಳು ಸೇರ್ಪಡೆ

ಉಡಾನ್‌ನ ಎಫ್‌ಎಂಸಿಜಿ ಬಿಸಿನೆಸ್ ಮುಖ್ಯಸ್ಥ ವಿನಯ್ ಶ್ರೀವಾಸ್ತವ, ''ಭಾರತದಾದ್ಯಂತ ಡಿಜಿಟೈಸೇಷನ್ ಮತ್ತು ತಂತ್ರಜ್ಞಾನ ಅಳವಡಿಕೆಯು ಮುಂಚೂಣಿಯ ಎಫ್‌ಎಂಸಿಜಿ ಬ್ರಾಂಡ್‌ಗಳಿಗೆ ತಮ್ಮ ವಿತರಣೆಯ ಜಾಲವನ್ನು ವೆಚ್ಚ ಉಳಿಸುವ ಮಾದರಿಯಲ್ಲಿ ವಿಸ್ತರಿಸಿಕೊಳ್ಳಲು ನೆರವಾಗಿದೆ. ಈ ಬದಲಾವಣೆಯನ್ನು ಮುನ್ನಡೆಸಲು ಮತ್ತು ಈ ಬ್ರಾಂಡ್‌ಗಳಿಗೆ ಆದ್ಯತೆಯ ಪಾಲುದಾರನಾಗಲು ಹಾಗೂ ಭಾರತದಾದ್ಯಂತ ರೀಟೇಲರ್‌ಗಳಿಗೆ ಅಪಾರ ಅವಕಾಶ ಪಡೆದುಕೊಳ್ಳಲು ನೆರವಾಗಲು ನಾವು ಬಹಳ ಸಂತೋಷ ಹೊದಿದ್ದೇವೆ. ಹೆಚ್ಚು ರಾಷ್ಟ್ರೀಯ ಮತ್ತು ಪ್ರಾದೇಶಿಕ ಬ್ರಾಂಡ್‌ಗಳು ಅವರ ವಹಿವಾಟು ವೃದ್ಧಿಸಿಕೊಳ್ಳಲು ಸಾಧ್ಯವಾಗುವಂತೆ ಮಾಡಲು ಮತ್ತು ಸಣ್ಣ ವ್ಯಾಪಾರಿಗಳು ಮತ್ತು ಕಿರಾಣಿ ಅಂಗಡಿಗಳಿಗೆ ಕೈಗೆಟುಕುವ ಹಾಗೂ ಪಾರದರ್ಶಕ ಬೆಲೆಗಳಲ್ಲಿ ಈ ಶ್ರೇಣಿಯ ಉತ್ಪನ್ನಗಳನ್ನು ದೊರೆಯುವಂತೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ'' ಎಂದರು.

ಉಡಾನ್ ಪ್ರಸ್ತುತ 3 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ಹೊಂದಿದೆ ಮತ್ತು ದೇಶದ 1200+ ನಗರಗಳಲ್ಲಿ 25-30,000 ಮಾರಾಟಗಾರರು 12,000ಕ್ಕೂ ಹೆಚ್ಚು ಪಿನ್ ಕೋಡ್‌ಗಳ ವ್ಯಾಪ್ತಿ ಹೊಂದಿದೆ. ಈ ಪ್ಲಾಟ್‌ಫಾರಂನಲ್ಲಿ 3 ಮಿಲಿಯನ್‌ಗೂ ಹೆಚ್ಚು ರೀಟೇಲರ್‌ಗಳು, ಕೆಮಿಸ್ಟರು, ಕಿರಾಣಿ ಅಂಗಡಿಗಳು, ರೈತರು ಇತ್ಯಾದಿ ಒಳಗೊಂಡಿದ್ದು ಪ್ರತಿ ತಿಂಗಳು 5 ಮಿಲಿಯನ್‌ಗೂ ಹೆಚ್ಚು ವಹಿವಾಟು ನಡೆಸುವ ಮೂಲಕ ಮುಂಚೂಣಿಯ ಬಿ2ಬಿ ಇಕಾಮರ್ಸ್ ಉದ್ಯಮವಾಗಿಸಿದೆ.

English summary

Over 150 FMCG Brands Added To Udaan Platform

The platform's FMCG category will now have over 250 brands, serving small retailers and kirana stores across the country.
Story first published: Thursday, September 8, 2022, 15:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X