For Quick Alerts
ALLOW NOTIFICATIONS  
For Daily Alerts

ನಾಸಿಕ್ ರೈಲು ನಿಲ್ದಾಣದಲ್ಲಿ "ಆಕ್ಸಿಜನ್ ಪಾರ್ಲರ್": ಏನಿದು ಆಕ್ಸಿಜನ್ ಪಾರ್ಲರ್?

|

ಇದೊಂದು ವಿಭಿನ್ನ ಪ್ರಯತ್ನ. ಆದರೆ ಇಂಥ ಪರಿಸ್ಥಿತಿ ಬಂತಲ್ಲ ಎಂದು ಬೇಸರಿಸಿಕೊಂಡರೆ ಏನೂ ಮಾಡುವುದಕ್ಕೆ ಆಗಲ್ಲ. ದಿನದಿನಕ್ಕೂ ವಾಯು ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಸಿಕ್ ನ ರೈಲು ನಿಲ್ದಾಣದಲ್ಲಿ "ಆಕ್ಸಿಜನ್ ಪಾರ್ಲರ್" ತೆರೆಯಲಾಗಿದೆ. ಆಕ್ಸಿಜನ್ ಅಂದರೆ ಆಮ್ಲಜನಕ. ಇನ್ನು ಪಾರ್ಲರ್ ಅಂದರೆ ನಿಮಗೆ ಗೊತ್ತೇ ಇರುತ್ತದೆ.

ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಶುದ್ಧ ಗಾಳಿ ಉಸಿರಾಡುವ ಅನುಭವ ದೊರೆಯಲಿ ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಭಾರತೀಯ ರೈಲ್ವೆ ಜತೆ ಏರೋ ಗಾರ್ಡ್ ಸಹಯೋಗ ವಹಿಸಿದೆ. ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಶಿಫಾರಸಿನ ಮೇಲೆ ಈ "ಆಕ್ಸಿಜನ್ ಪಾರ್ಲರ್" ಆಧಾರಗೊಂಡಿದೆ ಎಂದು ಏರೋ ಗಾರ್ಡ್ ನ ಸಹ ಸಂಸ್ಥಾಪಕ ಅಮಿತ್ ಅಮೃತ್ ಕರ್ ತಿಳಿಸಿದ್ದಾರೆ.

"1989ರಲ್ಲಿ ನಾಸಾದಿಂದ ಅಧ್ಯಯನ ನಡೆದಿತ್ತು. ಆಗ ಕೆಲವು ಸಸ್ಯಗಳನ್ನು ಗುರುತಿಸಲಾಯಿತು. ಅವುಗಳು ಗಾಳಿಯಲ್ಲಿನ ಐದು ಹಾನಿಕಾರಕ ಅಂಶಗಳನ್ನು ಹೀರಿಕೊಳ್ಳುತ್ತವೆ. ಅವುಗಳ ಪೈಕಿ ಹಲವನ್ನು ನಾವು ಬೆಳೆಸಿದ್ದೇವೆ. ಆ ಸಸ್ಯಗಳು ಇರುವ ಸುತ್ತಲ 10X10 ಜಾಗವನ್ನು ಶುದ್ಧಗೊಳಿಸುತ್ತವೆ" ಎಂದಿದ್ದಾರೆ.

ನಾಸಿಕ್ ರೈಲು ನಿಲ್ದಾಣದಲ್ಲಿ

"ಇಲ್ಲಿ 1500 ಸಸ್ಯಗಳಿವೆ. ಇವುಗಳು ನೇರವಾಗಿ ಹಾಗೂ ಪರಿಣಾಮಕಾರಿಯಾಗಿ ರೈಲು ನಿಲ್ದಾಣದ ಮಾಲಿನ್ಯವನ್ನು ಕಡಿಮೆ ಮಾಡುತ್ತವೆ ಹಾಗೂ ಜನರು ಶುದ್ಧ ಗಾಳಿ ಉಸಿರಾಡಲು ಅವಕಾಶ ಆಗುತ್ತದೆ" ಎಂದು ಅವರು ಹೇಳಿದ್ದಾರೆ. ಇದೇ ರೀತಿ ಎಲ್ಲ ರೈಲು ನಿಲ್ದಾಣಗಳಲ್ಲಿ, ಜತೆಗೆ ಪ್ರತಿ ಮನೆಗಳಲ್ಲೂ ವಿಸ್ತರಿಸುವ ಆಲೋಚನೆ ಇದೆ ಎಂದಿದ್ದಾರೆ.

ಈ ಸಸ್ಯಗಳನ್ನು ಗೆಳೆಯರಿಗೆ, ಕುಟುಂಬದವರಿಗೆ ಉಡುಗೊರೆ ನೀಡಬಹುದು. ಹೀಗೆ ಮಾಡಿದರೆ ಗಾಳಿಯ ಗುಣಮಟ್ಟ ಹೆಚ್ಚಿಸಲು ಸಹಾಯ ಆಗುತ್ತದೆ. ದೇಶದಾದ್ಯಂತ ಈ ಪ್ರಯತ್ನ ಆಗಬೇಕು ಎಂದು ಅವರು ತಿಳಿಸಿದ್ದಾರೆ.

English summary

Oxygen Parlour In Nashik Railway Station

Oxygen parlour started in Nashik railway station. Here is the complete details of parlour.
Story first published: Monday, December 23, 2019, 11:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X