For Quick Alerts
ALLOW NOTIFICATIONS  
For Daily Alerts

ಭಾರತದ ಓಯೋ ಹೋಟೆಲ್ ಮಾಲೀಕ ಜಗತ್ತಿನಲ್ಲೇ 2ನೇ ಕಿರಿಯ ಶತಕೋಟ್ಯಧಿಪತಿ

|

ಓಯೊ ಹೋಟೆಲ್ ಸಂಸ್ಥಾಪಕ ಭಾರತದ ರಿತೇಶ್ ಅಗರ್ವಾಲ್ ವಿಶ್ವದ ಎರಡನೇ ಅತ್ಯಂತ ಕಿರಿಯ ಶತಕೋಟ್ಯಧಿಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2020ರ ಹುರುನ್ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ 26 ವರ್ಷ ವಯಸ್ಸಿನ ಓಯೋ ಮಾಲೀಕ ರಿತೇಶ್ ಅಗರ್ವಾಲ್‌ರ ಒಟ್ಟು ಸಂಪತ್ತು 1.1 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 7,800 ಕೋಟಿ).

ಅಗರ್ವಾಲ್ ಗಿಂತ ಮೊದಲ ಸ್ಥಾನದಲ್ಲಿ ಕಾಸ್ಮೆಟಿಕ್ ಕ್ವೀನ್ ಕೈಲಿ ಜೆನ್ನರ್ ಇದ್ದು ಇವರ ಸಂಪತ್ತು 1.1 ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ತಮ್ಮ 22ನೇ ವಯಸ್ಸಿನಲ್ಲೇ ಸಂಪಾದಿಸಿದ್ದಾರೆ.

2023ರ ಹೊತ್ತಿಗೆ ವಿಶ್ವದ ಅತಿದೊಡ್ಡ ಹೋಟೆಲ್ ಆಗುವ ಗುರಿ
 

2023ರ ಹೊತ್ತಿಗೆ ವಿಶ್ವದ ಅತಿದೊಡ್ಡ ಹೋಟೆಲ್ ಆಗುವ ಗುರಿ

2013ರಲ್ಲಿ ಪ್ರಾರಂಭವಾದ ಸಾಫ್ಟ್‌ಬ್ಯಾಂಕ್ ಬೆಂಬಲಿತ ಓಯೋ ಹೊಟೇಲ್ ಈಗಾಗಲೇ ಭಾರತದ ಅತಿದೊಡ್ಡ ಹೋಟೆಲ್ ಸರಪಳಿಯಾಗಿದೆ ಮತ್ತು ಅದರ ಮೌಲ್ಯಮಾಪನವು 10 ಶತಕೋಟಿ ಡಾಲರ್‌ಗೆ ಏರಿದೆ. ಚೀನಾದಲ್ಲಿ ಎರಡನೇ ಅತಿದೊಡ್ಡ ಸರಪಳಿಯಾದ ನಂತರ ಅಮೆರಿಕಾ ಮತ್ತು ಯುರೋಪ್‌ಗೂ ತನ್ನ ಸೇವೆ ವಿಸ್ತರಿಸಿದೆ. 2023ರ ಹೊತ್ತಿಗೆ ವಿಶ್ವದ ಅತಿದೊಡ್ಡ ಹೋಟೆಲ್ ಸರಪಳಿಯಾಗುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸಿದೆ.

ಕಾಲೇಜ್ ಡ್ರಾಪ್‌ಔಟ್‌ ಆಗಿದ್ದ ರಿತೇಶ್ ಅಗರ್ವಾಲ್

ಕಾಲೇಜ್ ಡ್ರಾಪ್‌ಔಟ್‌ ಆಗಿದ್ದ ರಿತೇಶ್ ಅಗರ್ವಾಲ್

ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಒಡಿಶಾ ಮೂಲದ ರಿತೇಶ್ ಅಗರ್ವಾಲ್ ಭಾರತದಲ್ಲಿ 40 ವರ್ಷ ವಯಸ್ಸಿನೊಳಗೆ ಸೆಲ್ಫ್‌ ಮೇಡ್ ಬಿಲಿಯನೇರ್ ಆದವರಲ್ಲಿ ಅತಿದೊಡ್ಡ ಶ್ರೀಮಂತರಾಗಿದ್ದಾರೆ. ಜೆರೋಧಾ ಸಂಸ್ಥಾಪಕ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ಕೂಡ 30ನೇ ವಯಸ್ಸಿನೊಳಗೆ ಸ್ವಯಂ ಬಿಜಿನೆಸ್ ಆರಂಭಿಸಿ ಬಿಲಿಯನೇರ್ ಆದವರು.

ಕಳೆದ 5 ವರ್ಷದಲ್ಲಿ 40 ವಯಸ್ಸಿನೊಳಗೆ 90 ಶತಕೋಟ್ಯಧಿಪತಿಗಳು

ಕಳೆದ 5 ವರ್ಷದಲ್ಲಿ 40 ವಯಸ್ಸಿನೊಳಗೆ 90 ಶತಕೋಟ್ಯಧಿಪತಿಗಳು

ಭಾರತದಲ್ಲಿ ತಿಂಗಳಿಗೆ ಮೂವರು ಶತಕೋಟ್ಯಧಿಪತಿಗಳು ಸೃಷ್ಟಿಯಾಗುತ್ತಿದ್ದಾರೆ. ಅದರಲ್ಲೂ ಕಳೆದ ಐದು ವರ್ಷದಲ್ಲಿ 40 ವಯಸ್ಸಿನೊಳಗೆ ಬಿಲಿಯನೇರ್ ಆದವರ ಸಂಖ್ಯೆ 90ಕ್ಕೆ ಏರಿದೆ. ಅವರಲ್ಲಿ, 54 ಶತಕೋಟ್ಯಧಿಪತಿಗಳು ಸ್ವಯಂ ನಿರ್ಮಿತರಾಗಿದ್ದರೆ, 36 ಆನುವಂಶಿಕ ಸಂಪತ್ತು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಚೀನಾ ಮತ್ತು ಯುಎಸ್ಎ ತಲಾ 25 ಯುವ ಬಿಲಿಯನೇರ್‌ಗಳನ್ನು ಹೊಂದಿವೆ.

2020ರಲ್ಲಿ ಭಾರತದಲ್ಲಿದ್ದಾರೆ 137 ಶತಕೋಟ್ಯಧಿಪತಿಗಳು
 

2020ರಲ್ಲಿ ಭಾರತದಲ್ಲಿದ್ದಾರೆ 137 ಶತಕೋಟ್ಯಧಿಪತಿಗಳು

ಭಾರತದಲ್ಲಿ ಸದ್ಯ 137 ಶತಕೋಟ್ಯಧಿಪತಿಗಳಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ 67 ಬಿಲಿಯನ್ ಅಮೆರಿಕನ್ ಡಾಲರ್ ನಿವ್ವಳ ಸಂಪತ್ತಿನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಮುಕೇಶ್ ಅಂಬಾನಿಯು ಕಳೆದ ವರ್ಷ(2019)ರಲ್ಲಿ ಪ್ರತಿ ಗಂಟೆಗೆ 7 ಕೋಟಿ ರುಪಾಯಿಗಳನ್ನು ಆದಾಯಗಳಿಸಿದ್ದಾರೆ.

ಮುಂಬೈನಲ್ಲಿದ್ದಾರೆ ಅತಿ ಹೆಚ್ಚು ಬಿಲಿಯನೇರ್‌ಗಳು

ಮುಂಬೈನಲ್ಲಿದ್ದಾರೆ ಅತಿ ಹೆಚ್ಚು ಬಿಲಿಯನೇರ್‌ಗಳು

ಭಾರತದಲ್ಲಿ ಒಟ್ಟಾರೆ ಶತಕೋಟ್ಯಧಿಪತಿಗಳಲ್ಲಿ ಅತಿ ಹೆಚ್ಚು ಜನರು ಇರುವುದು ಮುಂಬೈನಲ್ಲಿ. ಮುಂಬೈ ನಗರಿ ಒಂದರಲ್ಲೇ 50 ಬಿಲಿಯನೇರ್‌ಗಳಿದ್ದಾರೆ. ಬೆಂಗಳೂರಿನಲ್ಲಿ 17, ಅಹಮದಾಬಾದ್‌ನಲ್ಲಿ 12 ಹಾಗೂ ಹೈದ್ರಾಬಾದ್‌ನಲ್ಲಿ 7 ಬಿಲಿಯನೇರ್‌ಗಳಿದ್ದಾರೆ.

English summary

Oyo's Founder World Second Youngest Self Made Billionaire

Oyo Hotels founder Ritesh Agarwal has been crowned as the world's second youngest billionaire
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X