For Quick Alerts
ALLOW NOTIFICATIONS  
For Daily Alerts

ಸಂಸತ್ ಕ್ಯಾಂಟೀನ್ ಸಸ್ತಾ ಆಹಾರಗಳು ಇನ್ನು ಮುಂದೆ ದುಬಾರಿ

|

ಇಷ್ಟು ಕಾಲ ಸಂಸತ್ ಕ್ಯಾಂಟೀನ್ ನಲ್ಲಿ ಸಸ್ತಾ ಬೆಲೆಗೆ ಸಿಗುತ್ತಿದ್ದ ಆಹಾರಗಳು ಇನ್ನು ಮುಂದೆ ದೊರೆಯುವುದಿಲ್ಲ. ದೇಶದ ಜನಪ್ರತಿನಿಧಿಗಳಿಗಾಗಿ ಇರುವ ಕ್ಯಾಂಟೀನ್ ಆಹಾರದ ಸಬ್ಸಿಡಿಯನ್ನು ಲೋಕಸಭಾ ಕಾರ್ಯಾಲಯವು ತೆಗೆದುಹಾಕಿದೆ. ಜನವರಿ 29ರಂದು ಬಜೆಟ್ ಅಧಿವೇಶನ ಶುರುವಾಗಲಿದ್ದು, ಸಂಸತ್ ಕ್ಯಾಂಟೀನ್ ನಲ್ಲಿನ ಹೊಸ ದರ ಪಟ್ಟಿ ಅನ್ವಯ ಆಗಲಿದೆ. ಬಹುತೇಕ ಪದಾರ್ಥಗಳನ್ನು ಮಾರುಕಟ್ಟೆ ದರದಲ್ಲೇ ಮಾರಲಾಗುತ್ತದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

 

ಆ ವರದಿ ಪ್ರಕಾರ, ಸಂಸತ್ ಕ್ಯಾಂಟೀನ್ ಸಬ್ಸಿಡಿ ಕೊನೆಗೊಳಿಸಿದ ಮೇಲೆ ಹೊಸ ದರವನ್ನು ಘೋಷಣೆ ಮಾಡಲಾಗಿದೆ ಎಂದು ವರದಿ ಆಗಿದೆ. ಈಗಿನ ಹೊಸ ದರದ ಅನ್ವಯ, 3 ರುಪಾಯಿಯ ಚಪಾತಿ ತೀರಾ ಅಗ್ಗದ್ದು. ವಿಪರೀತ ದುಬಾರಿಯದ್ದು ಅಂದರೆ, ಮಾಂಸಾಹಾರಿ ಬಫೆ. ಬೆಲೆ ರು. 700. ಸಸ್ಯಾಹಾರಿ ಊಟ/ಥಾಲಿ ರು. 100. ಸಸ್ಯಾಹಾರಿ ಬಫೆ ರು. 500.

 

ಬಜೆಟ್ 2021: ಏನಿದು ಭಾರತದ ಆರ್ಥಿಕ ಸಮೀಕ್ಷೆ? ಏಕಿಷ್ಟು ಮಹತ್ವ?ಬಜೆಟ್ 2021: ಏನಿದು ಭಾರತದ ಆರ್ಥಿಕ ಸಮೀಕ್ಷೆ? ಏಕಿಷ್ಟು ಮಹತ್ವ?

ಹೊಸ ದರ ಪಟ್ಟಿಯ ಪ್ರಕಾರ ಚಿಕನ್ ಬಿರಿಯಾನಿ ದರ ರು. 100 ಆಗುತ್ತದೆ. ಈ ಹಿಂದೆ ಅದರ ಬೆಲೆ ರು. 65 ಇತ್ತು. ಜನವರಿ 19ರಂದು ಈ ಬಗ್ಗೆ ಹೇಳಿರುವ ಸ್ಪೀಕರ್, ಸಬ್ಸಿಡಿಯನ್ನು ನಿಲ್ಲಿಸುತ್ತಿರುವುದರಿಂದ ಸಂಸತ್ ಕ್ಯಾಂಟೀನ್ ನಲ್ಲಿ ಸಂಸದರು ಮತ್ತು ಇತರರಿಗೆ ನೀಡುತ್ತಿರುವ ಆಹಾರ ದುಬಾರಿ ಆಗಲಿದೆ ಎಂದು ಹೇಳಿದ್ದಾರೆ.

 ಸಂಸತ್ ಕ್ಯಾಂಟೀನ್ ಸಸ್ತಾ ಆಹಾರಗಳು ಇನ್ನು ಮುಂದೆ ದುಬಾರಿ

ಆದರೆ, ಇದರಿಂದ ಆಗುವ ಹಣಕಾಸಿನ ಪರಿಣಾಮದ ಬಗ್ಗೆ ಅವರು ಹೇಳಿಲ್ಲ ಎಂದು ಮೂಲಗಳನ್ನು ಆಧರಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿ. ಸಬ್ಸಿಡಿ ಕೊನೆ ಮಾಡುವುದರಿಂದ ವರ್ಷಕ್ಕೆ 8 ಕೋಟಿ ರುಪಾಯಿಗೂ ಹೆಚ್ಚು ಉಳಿತಾಯ ಮಾಡಬಹುದು ಎಂದು ಲೋಕಸಭಾ ಕಾರ್ಯಾಲಯ ತಿಳಿಸಿದೆ. ಮುಂದಿನ ಬಜೆಟ್ ಅಧಿವೇಶನದ ಸಿದ್ಧತೆ ಬಗ್ಗೆ ವರದಿಗಾರರ ಜತೆ ಮಾತನಾಡಿದ ಓಂ ಬಿರ್ಲಾ, ಉತ್ತರ ರೈಲ್ವೇಸ್ ಬದಲಿಗೆ ಭಾರತ ಪ್ರವಾಸ ಅಭಿವೃದ್ಧಿ ನಿಗಮ (ಐಟಿಡಿಸಿ) ಈ ಕ್ಯಾಂಟೀನ್ ನಡೆಸುತ್ತದೆ ಎಂದು ಹೇಳಿದ್ದಾರೆ.

English summary

Parliament Drops Subsidy On Canteen Food: Here Is The New Price List

According to Lok Sabha secretariat, parliament canteen food will become costly from January 29, after ends subsidy on food. Here is the new price list.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X