For Quick Alerts
ALLOW NOTIFICATIONS  
For Daily Alerts

ಹೊಸ ರೈಲಿನಲ್ಲಿ ಟಾಯ್ಲೆಟ್ ಸೀಟ್ ಕೂಡ ಬಿಡದಂತೆ ಕದ್ದೊಯ್ದ ಪ್ರಯಾಣಿಕರು

|

ದೂರದ ಸ್ಥಳಗಳಿಗೆ ತೆರಳುವ ರೈಲ್ವೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಆಗಲೆಂದು ರೈಲ್ವೆ ಇಲಾಖೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಮುಂದಾಗಿತ್ತು. ಸ್ವಚ್ಛತೆಯ ಜೊತೆಗೆ ಉತ್ತಮ ಸೇವೆ ನೀಡಲು ಪ್ರಾಜೆಕ್ಟ್‌ ಉತ್ಕ್ರಿಷ್ ಯೋಜನೆಯನ್ನು ಪ್ರಾರಂಭಿಸಲಾಗಿತ್ತು.

ಆದರೆ ಪ್ರಯಾಣಿಕರೇ ಕಳ್ಳರಾದ್ರೆ ರೈಲ್ವೆ ಇಲಾಖೆ ಏನು ಸೌಲಭ್ಯ ಕೊಡಬಹುದು ಹೇಳಿ. ಹೊಸ ರೈಲುಗಳಲ್ಲಿನ ವಾಶ್‌ರೂಮ್‌ಗಳಲ್ಲಿ ನಲ್ಲಿಗಳು, ಟಾಯ್ಲೆಟ್ ಪೇಪರ್, ಕನ್ನಡಿಗಳು ಕಾಣೆಯಾಗಿವೆ. ಈ ಮೂಲಕ ಸಾರ್ವಜನಿಕ ಸೇವೆ ದುರುಪಯೋಗವನ್ನು ಇದು ಪ್ರತಿಬಿಂಬಿಸುತ್ತದೆ.

ಇದೆಲ್ಲಾ ಹೇಗಾಯ್ತು?

ಇದೆಲ್ಲಾ ಹೇಗಾಯ್ತು?

ಭಾರತೀಯ ರೈಲ್ವೆ 2018ರಲ್ಲಿ ಉತ್ಕ್ರಿಷ್ ಯೋಜನೆಯನ್ನು ಕೈಗೆತ್ತಿಕೊಂಡಿತು. ಆ ವೇಳೆ ಮುಂಬರುವ ೨ ವರ್ಷಗಳವರೆಗೆ ರೈಲ್ವೆಯಲ್ಲಿನ ರೇಕ್‌ಗಳನ್ನು ನವೀಕರಿಸಲು ಬಜೆಟ್‌ನಲ್ಇ 400 ಕೋಟಿಗಳನ್ನು ಮೀಸಲಿಡದಲು ನಿರ್ಧರಿಸಲಾಯಿತು.

ಅಂತೆಯೇ ಹೊಸ ರೈಲುಗಳ ಶೌಚಾಲಯದಲ್ಲಿ ಉತ್ತಮವಾದ ಕನ್ನಡಿ, ನಲ್ಲಿಗಳು, ಟಾಯ್ಲೆಟ್ ಪೇಪರ್ ಹೀಗೆ ಅನೇಕ ವ್ಯವಸ್ಥೆ ಮಾಡಲಾಗಿತ್ತು.

 

3,000 ನಲ್ಲಿ, 2000 ಕನ್ನಡಿ ಕಳವು

3,000 ನಲ್ಲಿ, 2000 ಕನ್ನಡಿ ಕಳವು

ಈ ಯೋಜನೆಯಡಿಯಲ್ಲಿ ಭಾರತೀಯ ರೈಲ್ವೆಯು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಆದರೆ ಹೊಸ ರೈಲ್ವೆ ಬೋಗಿಗಳ ಶೌಚಾಲಯದಲ್ಲಿ ಮತ್ತು ವಾಶ್ ಬೇಸಿನ್‌ಗಳಿಂದ ಸುಮಾರು 3,000 ಸ್ಟೀಲ್ ನಲ್ಲಿಗಳನ್ನು ಪ್ರಯಾಣಿಕರು ಕಳವು ಮಾಡಿದ್ದಾರೆ.

ಇದಲ್ಲದೆ ಸ್ಟೀಲ್ ಫ್ರೇಮ್ ಇರುವ ಸುಮಾರು 2,000 ಕನ್ನಡಿಗಳು, ಸುಮಾರು 500 ಲಿಕ್ವಿಡ್ ಸೋಪ್ ವಿತರಕಗಳು ಮತ್ತು 3,000 ಟಾಯ್ಲೆಟ್ ಫ್ಲಶ್ ಕವಾಟಗಳು ಕಾಣೆಯಾಗಿವೆ ಎಂದು ರೈಲ್ವೆ ಅಂಕಿ-ಅಂಶಗಳು ತಿಳಿಸಿವೆ.

 

ರೈಲ್ವೆ ಇಲಾಖೆಗೆ ಇದರಿಂದ ಆದ ನಷ್ಟವೆಷ್ಟು?

ರೈಲ್ವೆ ಇಲಾಖೆಗೆ ಇದರಿಂದ ಆದ ನಷ್ಟವೆಷ್ಟು?

ಬದಲಾವಣೆ ತರಲಾಗಿದ್ದ ಈ ವ್ಯವಸ್ಥೆಯಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು , ಟಾಯ್ಲೆಟ್ ಸೀಟ್ ಕವರ್‌ಗಳನ್ನು ಸಹ ಕಳವು ಮಾಡಲಾಗಿದೆ. ಈ ಕಳ್ಳತನದಿಂದ ಕೇಂದ್ರ ರೈಲ್ವೆ (ಸಿಆರ್) ಮತ್ತು ಪಶ್ಚಿಮ ರೈಲ್ವೆ (ಡಬ್ಲ್ಯುಆರ್) ಕ್ರಮವಾಗಿ 15.25 ಲಕ್ಷ ರುಪಾಯಿ ಮತ್ತು 38.58 ಲಕ್ಷ ರುಪಾಯಿ ನಷ್ಟವಾಗಿದೆ.

ಈ ಘಟನೆ ಕುರಿತು ರೈಲ್ವೆ ಇಲಾಖೆ ಏನು ಹೇಳುತ್ತೆ?

ಈ ಘಟನೆ ಕುರಿತು ರೈಲ್ವೆ ಇಲಾಖೆ ಏನು ಹೇಳುತ್ತೆ?

ಈ ಸಮಸ್ಯೆಯನ್ನು ಪರಿಹರಿಸಲು, ಕೇಂದ್ರ ರೈಲ್ವೆ ಈಗ ಟ್ಯಾಪ್‌ಗಳ ಸುತ್ತ ಸರಪಳಿಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಟ್ಯಾಪ್‌ಗಳು, ಕನ್ನಡಿಗಳು, ಟಾಯ್ಲೆಟ್ ಫ್ಲಶ್ ಕವರ್‌ಗಳು ಮತ್ತು ಕವಾಟಗಳಿಗೆ ಸೀಲ್‌ ಮಾಡಲು ಪ್ರಯತ್ನಿಸುತ್ತಿದೆ.

CR ಮತ್ತು WR ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು (ಪಿಆರ್ಒ) ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಕೇಂದ್ರ ರೈಲ್ವೆ ಅಧಿಕಾರಿಗಳು ಇದನ್ನು ಪುನರಾವರ್ತಿಸದಂತೆ ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ. ಆದಾಗ್ಯೂ, ಪಾಶ್ಚಿಮಾತ್ಯ ರೈಲ್ವೆ ಮುಖ್ಯಸ್ಥ ಪಿ.ಆರ್. ರವೀಂದರ್ ಭಾಕರ್ ಅವರು ರೈಲ್ವೆಯ ಆಸ್ತಿಗೆ ಹಾನಿ ಅಥವಾ ಕದಿಯುವ ಜನರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಒಂದು ಕಡೆ, ಪ್ರಯಾಣಿಕರು ಯಾವಾಗಲೂ ರೈಲುಗಳಲ್ಲಿ ಉತ್ತಮ ಸೌಲಭ್ಯಗಳನ್ನು ಬಯಸುತ್ತಾರೆ, ಆದರೆ ಇಂತಹ ಘಟನೆಗಳು ಅವರಿಗೆ ಅರ್ಹವಾಗಿದೆಯೇ ಎಂಬ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.

 

English summary

Passengers Steal Thousands Taps Mirrors From New Train

Around 3,000 stainless taps have been stolen by passengers from the rakes’ toilets and washbasins.
Story first published: Tuesday, February 25, 2020, 16:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X