For Quick Alerts
ALLOW NOTIFICATIONS  
For Daily Alerts

ಜುಲೈ 06: ಕಚ್ಚಾತೈಲ ಬೆಲೆ ಸ್ವಲ್ಪ ಇಳಿಕೆ, ಭಾರತದಲ್ಲಿ ಇಂಧನ ಬೆಲೆ ಎಷ್ಟು?

|

ಜಾಗತಿಕ ಕಚ್ಚಾತೈಲ ಬೆಲೆ ಸ್ಥಿರವಾಗಿದೆ. ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮವು ಕಚ್ಚಾತೈಲದ ಮೇಲೆಯೂ ಬಿದ್ದಿದೆ. ಆದರೆ ಭಾರತದಲ್ಲಿ ಕಳೆದ 44 ದಿನಗಳಿಂದ ಇಂಧನ ದರ ಏರಿಕೆಯಾಗದೆ ಸ್ಥಿರವಾಗಿದೆ. ಚೆನ್ನೈ ನಗರದಲ್ಲಿ ಪ್ರತಿ ಲೀಟರ್ ಮೇಲೆ ಕೆಲ ಪೈಸೆಯಷ್ಟು ಪೆಟ್ರೋಲ್ ದರ ವ್ಯತ್ಯಾಸ ಕಂಡಿತ್ತು. ಜೂನ್ 10ರಂದು ಪ್ರತಿ ಬ್ಯಾರೆಲ್‌ಗೆ 123.9 ಯುಎಸ್ ಡಾಲರ್‌ಗೆ ಏರಿತ್ತು. ಬಳಿಕ ಏರಿಳಿತ ಕಂಡು ಬಂದಿದೆ. ಇಂದು ಕಚ್ಚಾ ತೈಲ ದರ ಕೊಂಚ ಇಳಿಕೆ ಕಂಡು 103 USD ಆಸುಪಾಸಿನಲ್ಲಿದೆ.

 

ಕೇಂದ್ರ ಸರ್ಕಾರ ಮೇ 21ರಂದು ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ಬಳಿಕ ಮತ್ತೆ ಸುಂಕ ಪರಿಷ್ಕರಿಸಿಲ್ಲ. ಮಹಾರಾಷ್ಟ್ರ, ಕೇರಳ ಸೇರಿದಂತೆ ಕೆಲವು ರಾಜ್ಯಗಳು ಕೂಡಾ ಸೆಸ್ ಇಳಿಕೆ ಮಾಡಿವೆ. ಕರ್ನಾಟಕವೂ ಸೆಸ್ ಅನ್ನು ಇಳಿಕೆ ಮಾಡಬೇಕು ಎಂಬ ಬೇಡಿಕೆ ಇದೆ. ಕಚ್ಚಾತೈಲ ದರ ಏರಿಕೆ ನಡುವೆ ಬಿಹಾರ, ಗುರುಗ್ರಾಮ, ದೆಹಲಿ ಎನ್ ಸಿ ಆರ್ ಪ್ರದೇಶಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕೆಲ ಪೈಸೆಗಳಷ್ಟು ವ್ಯತ್ಯಾಸ ಕಂಡಿವೆ.

ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

ಅಬಕಾರಿ ಸುಂಕ ಇಳಿಕೆ ಬಳಿಕ

ಅಬಕಾರಿ ಸುಂಕ ಇಳಿಕೆ ಬಳಿಕ

ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿ ಮೇ 21ರಂದು ಘೋಷಣೆ ಮಾಡಿತ್ತು, ಪೆಟ್ರೋಲ್ ಬೆಲೆ 8 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 6 ರು ಪ್ರತಿಲೀಟರ್ ಇಳಿಕೆಯಾಗಿತ್ತು. ಕಚ್ಚಾ ತೈಲ ಬೆಲೆ ಏರಿಕೆ ಕಂಡರೂ ಇಂದು ಸರ್ಕಾರಿ ತೈಲ ಕಂಪನಿಗಳು ಯಾವುದೇ ಪರಿಷ್ಕರಣೆ ಮಾಡಿಲ್ಲ. ಆದರೆ ನಿರಂತರ ಕಚ್ಚಾ ತೈಲ ದರ ಏರಿಕೆಯಿಂದಾಗಿ ಇಂಧನ ದರ ಮತ್ತೆ ಪರಿಷ್ಕರಣೆ ಸಾಧ್ಯತೆ ಇದೆ.

ಪಂಚ ರಾಜ್ಯಗಳ ಚುನಾವಣೆಗೂ ಮುನ್ನ ಸ್ಥಗಿತ ಮಾಡಲಾಗಿದ್ದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆಯು ಚುನಾವಣೆಯ ಬಳಿಕ ಸರ್ಕಾರಿ ತೈಲ ಕಂಪನಿಗಳು ಮತ್ತೆ ಆರಂಭ ಮಾಡಿದ್ದವು. ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಮಾರ್ಚ್ 22 ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು.

 ಕಚ್ಚಾತೈಲದ ಬೆಲೆ ಸ್ವಲ್ಪ ಇಳಿಕೆ
 

ಕಚ್ಚಾತೈಲದ ಬೆಲೆ ಸ್ವಲ್ಪ ಇಳಿಕೆ

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಸ್ವಲ್ಪ ಇಳಿಕೆ ಕಾಣುತ್ತಿದೆ. ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರದಲ್ಲಿ ಬದಲಾವಣೆ ಆಗಿಲ್ಲ. ಈ ಹಿಂದೆ ಯುಎಸ್​ನ ಬೆಂಚ್‌ಮಾರ್ಕ್ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 70 ಡಾಲರ್‌ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್‌ಗೆ 72 ರೂ. ಕಡಿಮೆಯಾಗಿತ್ತು. ಆದರೆ ರಷ್ಯಾ ಮತ್ತು ಉಕ್ರೇನ್‌ ಯುದ್ಧದ ನಡುವೆ ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್‌ಗೆ ನೂರರ ಗಡಿಯನ್ನು ದಾಟಿದೆ. ಈ ಸಮಯಕ್ಕೆ 0.76% ಹಿಗ್ಗಿ 103.5 ಯುಎಸ್ ಡಾಲರ್‌ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಬೆಂಗಳೂರು
ಪೆಟ್ರೋಲ್ ದರ (ಪ್ರತಿ ಲೀಟರ್)
ಜುಲೈ 6: 101.94 ರೂ.
ಜುಲೈ 5: 101.94 ರೂ.
ಜುಲೈ 4: 101.94 ರೂ.
ಜುಲೈ 3: 101.94 ರೂ.
ಜುಲೈ 2:101.94 ರೂ.
ಜುಲೈ 1: 101.94 ರೂ.


ಡೀಸೆಲ್ (ಪ್ರತಿ ಲೀಟರ್)
ಜುಲೈ 6: 87.89 ರೂ.
ಜುಲೈ 5: 87.89 ರೂ.
ಜುಲೈ 4: 87.89 ರೂ.
ಜುಲೈ 3: 87.89 ರೂ.
ಜುಲೈ 2: 87.89 ರೂ.
ಜುಲೈ 1: 87.89 ರೂ.

 ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ದೆಹಲಿ
ಪೆಟ್ರೋಲ್ ದರ (ಪ್ರತಿ ಲೀಟರ್)
ಜುಲೈ 6: 96.72 ರೂ
ಜುಲೈ 5: 96.72 ರೂ
ಜುಲೈ 4: 96.72 ರೂ
ಜುಲೈ 3: 96.72 ರೂ
ಜುಲೈ 2: 96.72 ರೂ
ಜುಲೈ 1: 96.72 ರೂ


ಡೀಸೆಲ್ (ಪ್ರತಿ ಲೀಟರ್)
ಜುಲೈ 6: 89.62 ರೂ.
ಜುಲೈ 5: 89.62 ರೂ.
ಜುಲೈ 4: 89.62 ರೂ.
ಜುಲೈ 3: 89.62 ರೂ.
ಜುಲೈ 2: 89.62 ರೂ.
ಜುಲೈ 1: 89.62 ರೂ.

ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಮುಂಬೈ
ಪೆಟ್ರೋಲ್ ದರ (ಪ್ರತಿ ಲೀಟರ್)
ಜುಲೈ 6: 111.35 ರೂ.
ಜುಲೈ 5: 111.35 ರೂ.
ಜುಲೈ 4: 111.35 ರೂ.
ಜುಲೈ 3: 111.35 ರೂ.
ಜುಲೈ 2: 111.35 ರೂ.
ಜುಲೈ 1: 111.35 ರೂ.


ಡೀಸೆಲ್ (ಪ್ರತಿ ಲೀಟರ್)
ಜುಲೈ 6: 97.28 ರೂ.
ಜುಲೈ 5: 97.28 ರೂ.
ಜುಲೈ 4: 97.28 ರೂ.
ಜುಲೈ 3: 97.28 ರೂ.
ಜುಲೈ 2: 97.28 ರೂ.
ಜುಲೈ 1: 97.28 ರೂ.

ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಚೆನ್ನೈ
ಪೆಟ್ರೋಲ್ ದರ (ಪ್ರತಿ ಲೀಟರ್)
ಜುಲೈ 6: 102.63 ರೂ.
ಜುಲೈ 5: 102.74 ರೂ.
ಜುಲೈ 4: 102.63 ರೂ.
ಜುಲೈ 3: 102.65 ರೂ.
ಜುಲೈ 2: 102.63 ರೂ.
ಜುಲೈ 1: 102.63 ರೂ.

ಡೀಸೆಲ್ (ಪ್ರತಿ ಲೀಟರ್)
ಜುಲೈ 6: 94.24 ರೂ.
ಜುಲೈ 5: 94.33 ರೂ.
ಜುಲೈ 4: 94.24 ರೂ.
ಜುಲೈ 3: 94.25 ರೂ.
ಜುಲೈ 2: 94.24 ರೂ.
ಜುಲೈ 1: 94.24 ರೂ.

English summary

Petrol And Diesel Prices On 06 July 2022: Check Rates In Your City

Domestic Petrol and Diesel Price unchanged on Wednesday (06 July) in Many cities of across India. Latest Rates Here.
Story first published: Wednesday, July 6, 2022, 9:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X