For Quick Alerts
ALLOW NOTIFICATIONS  
For Daily Alerts

ಸತತ ಆರನೇ ದಿನ ಪೆಟ್ರೋಲ್-ಡೀಸೆಲ್ ದರದಲ್ಲಿ ಇಳಿಕೆ

|

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರ ಏರಿಳಿತವು ಪೆಟ್ರೋಲ್-ಡೀಸೆಲ್ ಬೆಲೆಯ ಮೇಲೆ ಪರಿಣಾಮ ಬೀರುತ್ತಿದ್ದು, ಸರ್ಕಾರಿ ಇಂಧನ ಚಿಲ್ಲರೆ ವ್ಯಾಪಾರಿಗಳು ಇಂದು ಸತತ ಆರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದಾರೆ.

ಬ್ರೆಂಟ್ ಕಚ್ಚಾ ತೈಲ ದರಗಳು ಬ್ಯಾರೆಲ್‌ಗೆ 64 ರಿಂದ 65 ಅಮೆರಿಕನ್ ಡಾಲರ್‌ಗಳಷ್ಟು ಹೆಚ್ಚಾಗುತ್ತಿರುವುದರಿಂದ, ಸರ್ಕಾರಿ ಇಂಧನ ಚಿಲ್ಲರೆ ವ್ಯಾಪಾರಿಗಳು ತೈಲ ಬೆಲೆಯನ್ನು ಕಡಿತಗೊಳಿಸಿದ್ದಾರೆ. ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 16 ಪೈಸೆ ಮತ್ತು ಡೀಸೆಲ್‌ನ ಬೆಲೆಯನ್ನು ಇಂದು ಲೀಟರ್‌ಗೆ 21 ಪೈಸೆ ಕಡಿತಗೊಳಿಸಲಾಗಿದೆ. ಕಳೆದ ಆರು ದಿನಗಳಲ್ಲಿ ಡೀಸೆಲ್ ಬೆಲೆ ಸುಮಾರು ಒಂದು ರೂಪಾಯಿ ಕುಸಿದಿದ್ದರೆ, ಪೆಟ್ರೋಲ್ ಬೆಲೆ 88 ಪೈಸೆ ಇಳಿದಿದೆ.

ಸತತ ಆರನೇ ದಿನ ಪೆಟ್ರೋಲ್-ಡೀಸೆಲ್ ದರದಲ್ಲಿ ಇಳಿಕೆ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯದ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರವು ಲೀಟರ್‌ಗೆ ಎಷ್ಟಿದೆ ಎಂಬುದು ಈ ಕೆಳಕಂಡಂತಿದೆ.

ನಗರ ಪೆಟ್ರೋಲ್ ದರ ಡೀಸೆಲ್ ದರ

ನಗರಪೆಟ್ರೋಲ್ ದರಡೀಸೆಲ್ ದರ
ಬೆಂಗಳೂರು77.3270.32
ದೆಹಲಿ74.8268.05
ಕೊಲ್ಕತ್ತಾ77.4270.41
ಮುಂಬೈ80.4271.35
ಚೆನ್ನೈ77.7271.90
ಗುರುಗಾವ್74.0466.76
ನೊಯ್ಡ76.1068.32
ಭುವನೇಶ್ವರ್74.1773.36
ಚಂಡೀಗಡ70.7064.78
ಹೈದ್ರಾಬಾದ್79.5674.20
ಜೈಪುರ79.2473.67
ಲಕ್ನೋ75.9868.19
ಪಾಟ್ನಾ79.1672.45
ತ್ರಿವೆಂಡ್ರಮ್78.2073.14

English summary

Petrol Diesel Rate Cut Sixth Consecutive Day

run fuel retailers chose to cut petrol and diesel prices for the sixth consecutive day today
Story first published: Tuesday, January 21, 2020, 11:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X