For Quick Alerts
ALLOW NOTIFICATIONS  
For Daily Alerts

ಚಿಪ್ ಉತ್ಪಾದಕ ಸಂಸ್ಥೆ ಕ್ವಾಲ್ಕಾಮ್ ಗೆ ಭಾರತಕ್ಕೆ ಆಹ್ವಾನ ನೀಡಿದ ಪ್ರಧಾನಿ !

By ರಂಗಸ್ವಾಮಿ ಮೂಕನಹಳ್ಳಿ
|

ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್ ಅಥವಾ ಕ್ವಾಡ್ ಎನ್ನುವುದು ಅಮೇರಿಕಾ , ಜಪಾನ್ , ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳ ಕಾರ್ಯತಂತ್ರದ ಮಾತುಕತೆಗೆ ಜಾಗತಿಕ ಮಟ್ಟದಲ್ಲಿ ಸಿಕ್ಕಿರುವ ಹೆಸರು. ಚೀನಾ ದೇಶದ ಪ್ರಾಬಲ್ಯವನ್ನ ಕಡಿಮೆ ಮಾಡುವುದು ಇದರ ಪ್ರಮುಖ ಉದ್ದೇಶ. ಕೊರೊನಾವೈರಸ್ ಸೃಷ್ಟಿಗೆ ಚೀನಾ ದೇಶ ಕಾರಣ , ಇದು ನಿಜವೋ ಅಥವಾ ಸುಳ್ಳೋ ಎನ್ನುವುದನ್ನ ನಿಮ್ಮ ನೆಲದಲ್ಲಿ ತಪಾಸಣೆ ಮಾಡಲು ಅಂತರಾಷ್ಟ್ರೀಯ ಮಟ್ಟದ ನಿಯೋಗಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕ್ವಾಡ್ ಒತ್ತಾಯಿಸುತ್ತಿದೆ.

 

ಇದಲ್ಲದೆ ಏಷ್ಯಾ ಪೆಸಿಫಿಕ್ ರೀಜನ್ ನಲ್ಲಿ ಚೀನಾದ ಪ್ರಾಬಲ್ಯ ಹೆಚ್ಚಾದರೆ ಅದು ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಒಳ್ಳೆಯ ಸುದ್ದಿಯಲ್ಲ. ಜಾಗತಿಕ ಮಟ್ಟದಲ್ಲಿ ಕೂಡ ಚೀನಾ ಯಾವ ಮಟ್ಟದ ಅವಾಂತರ ಸೃಷ್ಟಿಸಬಹುದು ಎನ್ನುವುದನ್ನ ಜಗತ್ತು ನೋಡಿದೆ. ಹೀಗಾಗಿ ಚೀನಾ ದೇಶದ ನಾಗಾಲೋಟಕ್ಕೆ ಬ್ರೇಕ್ ಹಾಕಲು ಕಾರ್ಯ ತಂತ್ರವನ್ನ ಕ್ವಾಡ್ ದೇಶಗಳು ರೂಪಿಸುತ್ತಿವೆ.

ಚೀನಾ ದೇಶದಲ್ಲಿ ಉತ್ಪಾದನೆ ಒಂದಷ್ಟು ಕಡಿಮೆ ಮಾಡಿರುವುದು ಮತ್ತು ಬಂದರುಗಳಲ್ಲಿ ಹೆಚ್ಚಿನ ಮಟ್ಟದ ತಪಾಸಣೆ ಎರಡೂ ಸೇರಿ ಜಗತ್ತಿನ ಸಪ್ಲೈ ಚೈನ್ ನಲ್ಲಿ ಕುಸಿತ ಉಂಟಾಗಿದೆ. ಇಂಗ್ಲೆಂಡ್ ದೇಶದಲ್ಲಿ ಕ್ರಿಸ್ಮಸ್‌ ಹಬ್ಬದ ಬಗ್ಗೆ ಜನರಲ್ಲಿ ಇರುವ ಸಿಹಿಯನ್ನ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಚಿಪ್ ಉತ್ಪಾದಕ ಸಂಸ್ಥೆ ಕ್ವಾಲ್ಕಾಮ್ ಗೆ ಭಾರತಕ್ಕೆ ಆಹ್ವಾನ ನೀಡಿದ ಮೋದಿ

ತಂತ್ರಜ್ಞಾನ ಕ್ಷೇತ್ರದಲ್ಲಿ ಅದರಲ್ಲೂ 5ಜಿ ಟೆಲಿಕಾಂ ಟೆಕ್ನಾಲಜಿ ಮತ್ತು ಸೆಮಿಕಂಡಕ್ಟರ್ ಚಿಪ್ ಗಳ ತಯಾರಿಕೆಯಲ್ಲಿ ಚೀನಾದ ಪ್ರಭಾವ ಬಹಳ ಹೆಚ್ಚಾಗಿದೆ. ಹೀಗಾಗಿ ಎರಡೂ ಕ್ಷೇತ್ರದಲ್ಲಿ ಬಳಕೆಯಾಗುವ ಚಿಪ್ ಗಳ ಕೊರತೆಯನ್ನ ಜಗತ್ತು ಎದುರಿಸುತ್ತಿದೆ. ಪ್ರಥಮ ಬಾರಿಗೆ ಮುಖಾಮುಖಿ ಕ್ವಾಡ್ ಸಭೆಯಲ್ಲಿ ಚೀನಾದ ದೇಶದ ಈ ಚಿಪ್ ಗಳ ಮೇಲಿನ ಪ್ರಾಬಲ್ಯವನ್ನ ಕಡಿಮೆ ಮಾಡಲು ಮಾತುಕತೆಯನ್ನ ನೆಡೆಸಲಾಗಿದೆ. ನಾಲ್ಕೂ ದೇಶಗಳ ಹಿತವನ್ನ ಕಾಪಾಡಿಕೊಳ್ಳುವುದು ಆ ಮೂಲಕ ಜಾಗತಿಕ ಮಟ್ಟದಲ್ಲಿ ಚಿಪ್ ಒಂದೇ ಅಲ್ಲದೆ ಇತರ ಸಪ್ಲೈ ಚೈನ್ ಕೂಡ ಸರಾಗ ಮಾಡುವುದರ ಬಗ್ಗೆ ಕೂಡ ಕಾರ್ಯ ತಂತ್ರವನ್ನ ಹೆಣೆಯಲಾಗಿದೆ.

 

5 ಬೃಹತ್ ಕಂಪನಿಗಳ CEO ಜೊತೆ ಮೋದಿ ಮಾತುಕತೆ: ಬಂಡವಾಳಕ್ಕೆ ಆಹ್ವಾನ

ಸಭೆಯ ನಂತರ ಕ್ವಾಲ್ಕಾಮ್‌ನ ಸಂಸ್ಥೆಯ ಸಿಇಓ ಕ್ರಿಸ್ಟಿಯಾನೊ ಅಮನ್ ಅವರನ್ನ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಭೇಟಿಯಾಗಿ ಭಾರತದಲ್ಲಿ ಇಂತಹ ಉತ್ಪಾದನಾ ಘಟಕಗಳನ್ನ ತೆರೆಯಲು ಆಹ್ವಾನವನ್ನ ನೀಡಿದ್ದಾರೆ. ಹೆಚ್ಚಿನ ಹಣ ಹೂಡಿಕೆಯ ರೂಪದಲ್ಲಿ ಬರುವುದರ ಜೊತೆಗೆ ಈ ಕಾರ್ಯ ಕ್ಷೇತ್ರದಲ್ಲಿ ಒಂದಷ್ಟು ಕೆಲಸಗಳ ಸೃಷ್ಟಿ ಕೂಡ ಆಗಲಿದೆ.

ಕ್ವಾಡ್ ದೇಶಗಳ ತತ್ವಗಳಲ್ಲಿ ನಂಬಿಕೆಯಿಟ್ಟಿರುವ ಎಲ್ಲಾ ದೇಶಗಳು ಕೂಡ ಸಪ್ಲೈ ಚೈನ್ ಸರಿ ಪಡಿಸುವುದು ಮತ್ತು ಜಾಗತಿಕ ಮಟ್ಟದಲ್ಲಿ ಅವಶ್ಯವಿರುವ ವಸ್ತುಗಳ ಕೊರತೆಯಾಗದಂತೆ ನೋಡಿಕೊಳ್ಳಲು ಕೈ ಜೋಡಿಸಬೇಕಾಗಿದೆ. ಎಲ್ಲಾ ದೇಶಗಳ ಸಹಕಾರದಿಂದ ಇದು ಸಾಧ್ಯ ಎನ್ನುವ ಮಾತುಗಳನ್ನ ಕ್ವಾಡ್ ಸಭೆಯಲ್ಲಿ ನಾಲ್ಕೂ ದೇಶದ ನಾಯಕರು ಉಚ್ಛರಿಸಿರುವುದು ವಿಶೇಷ.

English summary

PM Modi invites Qualcomm to start production in India

Qualcomm has trusted Indian talent already, PM Narendra Modi invites Qualcomm CEO to start manufacturing in India with the advantage the PLI scheme offers.
Story first published: Monday, September 27, 2021, 9:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X