For Quick Alerts
ALLOW NOTIFICATIONS  
For Daily Alerts

ಮೊದಲು ಕೊರೊನಾವೈರಸ್ ವಿರುದ್ಧ ಹೋರಾಡಿ, ಸರ್ಕಾರಕ್ಕೆ ಆರ್‌ಬಿಐ ಮಾಜಿ ಗವರ್ನರ್ ಸಲಹೆ

|

ಸದ್ಯ ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್‌ ನಿಂದಾಗಿ ಅನೇಕ ರಾಷ್ಟ್ರಗಳ ಆರ್ಥಿಕತೆ ನಲುಗಿ ಹೋಗಿವೆ. ಭಾರತವೂ ಮೊದಲು ಅದರ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಚಿಂತೆ ಮಾಡಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ಸರ್ಕಾರವು ಈ ಕುರಿತು ಖರ್ಚು ಮಾಡುವಾಗ, ವೈರಸ್‌ ನಿಯಂತ್ರಣದಲ್ಲಿದೆ ಎಂದು ಕಂಪನಿಗಳು ಮತ್ತು ಜನರಿಗೆ ಮನವರಿಕೆ ಮಾಡಿಕೊಡುವುದಕ್ಕೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದ್ದಾರೆ.

ಮೊದಲು ವೈರಸ್ ವಿರುದ್ಧ ಹೋರಾಡಿ, ಸರ್ಕಾರಕ್ಕೆ ಆರ್‌ಬಿಐ ಗವರ್ನರ್ ಸಲಹೆ

''ಈ ವೈರಸ್ ಹರಡುವಿಕೆಗೆ ಮಿತಿ ಇದೆ ಎಂಬ ಅರ್ಥವನ್ನು ಜನರು ಹೊಂದಲು ಬಯಸುತ್ತಾರೆ. ಏಕೆಂದರೆ ಇದು ಯಾವುದಾದರು ಕ್ರಮಗಳಿಂದಾಗಿ ಅಥವಾ ಕೆಲವು ರೀತಿಯ ವೈರಲ್ ಪರಿಹಾರವನ್ನು ಕಂಡುಹಿಡಿಯಬಹುದು ಎಂಬ ಭರವಸೆ ಇದೆ "ಎಂದು ರಾಜನ್ ತಿಳಿಸಿದ್ದಾರೆ.

''ಈ ಸಮಯದಲ್ಲಿ ಸರ್ಕಾರ ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ನಂತರ ವೈರಸ್‌ನಿಂದ ಬರುವ ಪ್ರಚೋದಕ ಕ್ರಮಗಳ ಬಗ್ಗೆ ಚಿಂತೆ ಮಾಡುವ ಬದಲು ಈಗಲೇ ಬರದಂದೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದು" ಎಂದು ಚಿಕಾಗೊ ಬೂತ್ ಸ್ಕೂಲ್ ಆಫ್ ಬಿಸಿನೆಸ್‌ನಲ್ಲಿ ಪ್ರಾಧ್ಯಾಪಕರಾಗಿರುವ ರಾಜನ್ ಹೇಳಿದ್ದಾರೆ.

ಕೊರೊನಾವೈರಸ್‌ ಹರಡುವಿಕೆಯು ವಿಶ್ವದ ಆರ್ಥಿಕತೆಯನ್ನು ಅತ್ಯಂತ ಕೆಟ್ಟ ಪರಿಸ್ಥಿತಿಯತ್ತ ಕೊಂಡೊಯ್ಯುತ್ತಿದ್ದು, ಕಳೆದ ಒಂದು ದಶಕದಲ್ಲಿ ಅತ್ಯಂತ ಕೆಳಮಟ್ಟದ ಪರಿಸ್ಥಿತಿಗೆ ತಳ್ಳುತ್ತಿದೆ.

English summary

Raghuram Rajan's Advice To Govts Fight Virus First

The best economic tonic for the coronavirus shock is to contain its spread and worry about stimulus later, said Raghuram Rajan
Story first published: Friday, February 28, 2020, 15:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X