For Quick Alerts
ALLOW NOTIFICATIONS  
For Daily Alerts

ಕೆಲವೇ ನಿಮಿಷಗಳಲ್ಲಿ 900 ಕೋಟಿ ರೂಪಾಯಿ ಸಂಪಾದಿಸಿದ ರಾಕೇಶ್ ಜುಂಜುನ್‌ವಾಲಾ: ಹೇಗೆ ಗೊತ್ತಾ?

|

ದೇಶದ ಪ್ರಮುಖ ಷೇರು ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತನ್ನ ಚಾಣಾಕ್ಷ್ಯ ಬುದ್ದಿಯಿಂದಲೇ ಭಾರತದ ವಾರೆನ್ ಬಫೆಟ್ ಎಂದೇ ಖ್ಯಾತಿಯ ರಾಕೇಶ್ ಜುಂಜುನ್‌ವಾಲಾ ಸಂಪತ್ತು ಕೆಲವೇ ನಿಮಿಷಗಳಲ್ಲಿ ಭಾರೀ ಜಿಗಿತ ಕಂಡಿದೆ.

ಟೈಟಾನ್ ಕಂಪನಿ ಷೇರುದಾರ ಜುಂಜುನ್‌ವಾಲಾರ ಸಂಪತ್ತು ಕೆಲವೇ ನಿಮಿಷಗಳಲ್ಲಿ 900 ಕೋಟಿ ರೂಪಾಯಿಗೂ ಅಧಿಕ ಏರಿಕೆಗೊಂಡಿದೆ. ಟೈಟಾನ್ ಕಂಪನಿಯಲ್ಲಿ ರಾಕೇಶ್ ಜುಂಜುನ್‌ವಾಲಾ ಮತ್ತು ಅವರ ಪತ್ನಿ ಶೇಕಡಾ 4.8ರಷ್ಟು ಪಾಲನ್ನು ಹೊಂದಿದ್ದಾರೆ. ಇಂದು ಎನ್‌ಎಸ್‌ಇನಲ್ಲಿ ಟೈಟಾನ್ ಕಂಪನಿ ಷೇರುಗಳು 214 ರೂಪಾಯಿ ಏರಿಕೆಯಾಗಿದ್ದು, ದಾಖಲೆಯ ಗರಿಷ್ಠ ಮಟ್ಟವಾದ 2,362 ರೂಪಾಯಿಗೆ ತಲುಪಿತು.

ಈ ಕಾರಣದಿಂದಾಗಿ ಹೂಡಿಕೆದಾರ ಜುಂಜುನ್‌ವಾಲಾ ಅವರ ಸಂಪತ್ತು ಇಂದು ಕೆಲವೇ ನಿಮಿಷಗಳಲ್ಲಿ 900 ಕೋಟಿ ರೂ. ಹೆಚ್ಚಿತು. ದಿನದ ವಹಿವಾಟು ಅಂತ್ಯದಲ್ಲಿ ಷೇರುಗಳು 227.70 ರೂಪಾಯಿ ಏರಿಕೆಗೊಂಡು 2,375.65 ರೂಪಾಯಿ ತಲುಪಿದೆ.

2 ಲಕ್ಷ ಕೋಟಿ ಮಾರುಕಟ್ಟೆ ಕ್ಯಾಪ್ ತಲುಪಿದ ಟೈಟಾನ್

2 ಲಕ್ಷ ಕೋಟಿ ಮಾರುಕಟ್ಟೆ ಕ್ಯಾಪ್ ತಲುಪಿದ ಟೈಟಾನ್

ಟಾಟಾ ಗ್ರೂಪ್‌ನ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಟೈಟಾನ್ ಕೋ ಲಿಮಿಟೆಡ್ ಗುರುವಾರ (ಅ.07) 2 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ತಲುಪಿದೆ. ಈ ಮೂಲಕ ಕಂಪನಿ ಮಾರುಕಟ್ಟೆ ಕ್ಯಾಪ್ 2.07 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಬುಧವಾರ, ಟೈಟಾನ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೇಡಿಕೆಯಲ್ಲಿ ಬಲವಾದ ಚೇತರಿಕೆಯನ್ನು ವರದಿ ಮಾಡಿದೆ ಮತ್ತು ಅದರ ಹೆಚ್ಚಿನ ವಿಭಾಗಗಳಲ್ಲಿ ಅದರ ಮಾರಾಟವು ಸಾಂಕ್ರಾಮಿಕ-ಪೂರ್ವ ಮಟ್ಟಕ್ಕಿಂತ ಹೆಚ್ಚಾಗಿದೆ ಅಥವಾ ಹತ್ತಿರದಲ್ಲಿವೆ.

ಟೈಟಾನಿ ಕಂಪನಿ 2 ಟ್ರಿಲಿಯನ್ ಮಾರುಕಟ್ಟೆ ಕ್ಯಾಪ್ ತಲುಪುವುದಕ್ಕೂ ಮೊದಲು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಈ ಮೈಲಿಗಲ್ಲನ್ನು ತಲುಪಿದ ಇತರ ಟಾಟಾ ಕಂಪನಿಯಾಗಿದೆ.

 

ಟೈಟಾನ್ ಕಂಪನಿಯಲ್ಲಿ ಜುಂಜುನ್‌ವಾಲಾ ಷೇರುಗಳು ಎಷ್ಟಿದೆ?

ಟೈಟಾನ್ ಕಂಪನಿಯಲ್ಲಿ ಜುಂಜುನ್‌ವಾಲಾ ಷೇರುಗಳು ಎಷ್ಟಿದೆ?

Q2FY22 ಟೈಟಾನ್ ಕಂಪನಿಯ ಹಂಚಿಕೆಯ ಮಾದರಿಯ ಪ್ರಕಾರ, ರಾಕೇಶ್ ಜುಂಜುನ್‌ವಾಲಾ ಟೈಟಾನ್ ಕಂಪನಿಯಲ್ಲಿ 3,30,10,395 ಷೇರುಗಳನ್ನು ಹೊಂದಿದ್ದರೆ, ಅವರ ಪತ್ನಿ ರೇಖಾ ಜುಂಜುನ್‌ವಾಲಾ 96,470,575 ಟೈಟಾನ್ ಕಂಪನಿ ಷೇರುಗಳನ್ನು ಹೊಂದಿದ್ದಾರೆ. ಆದ್ದರಿಂದ, ಇಬ್ಬರೂ ಒಟ್ಟಾಗಿ 4,26,50,970 ಟೈಟಾನ್ ಕಂಪನಿ ಷೇರುಗಳನ್ನು ಹೊಂದಿದ್ದಾರೆ.

ಟೈಟಾನ್ ಕಂಪನಿಯಲ್ಲಿ ಜುಂಜುನ್‌ವಾಲಾ ಷೇರುಗಳು ಎಷ್ಟಿದೆ?

ಟೈಟಾನ್ ಕಂಪನಿಯಲ್ಲಿ ಜುಂಜುನ್‌ವಾಲಾ ಷೇರುಗಳು ಎಷ್ಟಿದೆ?

Q2FY22 ಟೈಟಾನ್ ಕಂಪನಿಯ ಹಂಚಿಕೆಯ ಮಾದರಿಯ ಪ್ರಕಾರ, ರಾಕೇಶ್ ಜುಂಜುನ್‌ವಾಲಾ ಟೈಟಾನ್ ಕಂಪನಿಯಲ್ಲಿ 3,30,10,395 ಷೇರುಗಳನ್ನು ಹೊಂದಿದ್ದರೆ, ಅವರ ಪತ್ನಿ ರೇಖಾ ಜುಂಜುನ್‌ವಾಲಾ 96,470,575 ಟೈಟಾನ್ ಕಂಪನಿ ಷೇರುಗಳನ್ನು ಹೊಂದಿದ್ದಾರೆ. ಆದ್ದರಿಂದ, ಇಬ್ಬರೂ ಒಟ್ಟಾಗಿ 4,26,50,970 ಟೈಟಾನ್ ಕಂಪನಿ ಷೇರುಗಳನ್ನು ಹೊಂದಿದ್ದಾರೆ.

2 ಲಕ್ಷ ಕೋಟಿ ರೂ. ಮಾರುಕಟ್ಟೆ ಕ್ಯಾಪ್ ತಲುಪಿದ ಟೈಟಾನ್: ಟಾಟಾ ಗ್ರೂಪ್‌ನ 2ನೇ ಕಂಪನಿ2 ಲಕ್ಷ ಕೋಟಿ ರೂ. ಮಾರುಕಟ್ಟೆ ಕ್ಯಾಪ್ ತಲುಪಿದ ಟೈಟಾನ್: ಟಾಟಾ ಗ್ರೂಪ್‌ನ 2ನೇ ಕಂಪನಿ

ರಾಕೇಶ್ ಜುಂಜುನ್‌ವಾಲಾ 900 ಕೋಟಿ ಗಳಿಸಿದ್ದೇಗೆ?

ರಾಕೇಶ್ ಜುಂಜುನ್‌ವಾಲಾ 900 ಕೋಟಿ ಗಳಿಸಿದ್ದೇಗೆ?

ಟೈಟಾನ್ ಕಂಪನಿಯಲ್ಲಿ 4,26,50,970 ಷೇರುಗಳನ್ನು ಹೊಂದಿರುವ ಜುಂಜುನ್‌ವಾಲಾ ನಿವ್ವಳ ಗಳಿಕೆಯನ್ನು ಈ ರೀತಿಯಾಗಿ ಲೆಕ್ಕಚಾರ ಮಾಡಲಾಗಿದೆ. ಇಂದು ಕಂಪನಿ ಷೇರಿನ ಬೆಲೆಯು 227.70 ರೂಪಾಯಿಗೆ ತಲುಪಿತು. ಇದರರ್ಥ (227.70 x 4,26,50,970 = 971 ಕೋಟಿ) ಜುಂಜುನ್‌ವಾಲಾ 971 ಕೋಟಿ ರೂಪಾಯಿ ಇಂದು ಸಂಪಾದಿಸಿದ್ದಾರೆ.

ಏಸ್‌ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾರನ್ನ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿಏಸ್‌ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾರನ್ನ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ

ಟಾಟಾ ಗ್ರೂಪ್‌ನಲ್ಲಿ ಅಗ್ರಸ್ಥಾನದಲ್ಲಿರುವ ಟಿಸಿಎಸ್‌

ಟಾಟಾ ಗ್ರೂಪ್‌ನಲ್ಲಿ ಅಗ್ರಸ್ಥಾನದಲ್ಲಿರುವ ಟಿಸಿಎಸ್‌

ಟೈಟಾನಿ ಕಂಪನಿ 2 ಟ್ರಿಲಿಯನ್ ಮಾರುಕಟ್ಟೆ ಕ್ಯಾಪ್ ತಲುಪುವುದಕ್ಕೂ ಮೊದಲು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಈ ಮೈಲಿಗಲ್ಲನ್ನು ತಲುಪಿದ ಇತರ ಟಾಟಾ ಕಂಪನಿಯಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಟಾಟಾ ಗ್ರೂಪ್‌ನಲ್ಲಿ 2 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯದ ಗಡಿ ದಾಟಿದ ಮೊದಲ ಕಂಪನಿಯಾಗಿದೆ. ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯವು 14,19,973.35 ಕೋಟಿ ರೂಪಾಯಿನಷ್ಟಿದೆ.

English summary

Rakesh Jhunjhunwala Earns Rs 900 Crore In Few Minutes: Know More

Titan company shareholder Jhunjhunwala's fortune rose to over Rs 900 crore in just a few minutes. know more
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X