For Quick Alerts
ALLOW NOTIFICATIONS  
For Daily Alerts

ಮರೆಯಾದ 'ರಸ್ನಾ' ಸೃಷ್ಟಿಕರ್ತ; ಜಾಗತಿಕ ಬಲಿಷ್ಠ ಕಂಪನಿಗಳಿಗೆ ಭಯ ಹುಟ್ಟಿಸಿದ್ದ ಖಾಂಬಟ್ಟ

|

ನವದೆಹಲಿ, ನ. 21: 'ಐ ಲವ್ ಯೂ ರಸ್ನಾ' ಜಾಹೀರಾತಿನ ಟ್ಯಾಗ್‌ಲೈನ್ ಯಾರಿಗೆ ನೆನಪಿಲ್ಲ ಹೇಳಿ... ಒಂದು ಕಾಲದಲ್ಲಿ ಟಿವಿಯಲ್ಲಿ ಬಾರಿ ಬಾರಿ ಮಿಂಚುತ್ತಿದ್ದುದು ರಸ್ನಾ ಜಾಹೀರಾತುಗಳೇ. ಇದೀಗ ರಸ್ನಾ ಗ್ರೂಪ್‌ನ ಸಂಸ್ಥಾಪಕ ಮತ್ತು ಛೇರ್ಮನ್ ಆರೀಜ್ ಪಿರೋಜ್‌ಶಾ ಖಾಂಬಟ್ಟ ಇಂದು ಸೋಮವಾರ ವಿಧಿವಶರಾಗಿದ್ದಾರೆ.

ಖಾಂಬಟ್ಟರಿಗೆ 85 ವರ್ಷವಾಗಿತ್ತು. ರಸ್ನಾ ಮನೆ ಮಾತಾಗುವಂತೆ ಮಾಡಿದ, ಮತ್ತು ಜಾಗತಿಕವಾಗಿ ಬಲಿಷ್ಠವಾಗಿದ್ದ ಕಂಪನಿಗಳು ಭಾರತೀಯ ಸಾಫ್ಟ್ ಡ್ರಿಂಕ್ ಮಾರುಕಟ್ಟೆ ಆಕ್ರಮಿಸಿಕೊಳ್ಳುವ ಪ್ರಯತ್ನಗಳೆಲ್ಲೂ ರಸ್ನಾ ಪಾನೀಯದ ಪ್ರವಾಹಕ್ಕೆ ಕೊಚ್ಚಿ ಹೋಗುವಂತೆ ಮಾಡಿದ್ದು ಅರೀಜ್ ಪಿರೋಜ್‌ಶಾ ಖಾಂಬಟ್ಟ ಮತ್ತವರ ಚತುರ ವ್ಯವಹಾರ ಸಾಮರ್ಥ್ಯ.

ಆದಾಯ ತೆರಿಗೆ, ಜಿಎಸ್‌ಟಿ ಅಪರಾಧ ಕಾನೂನು ಬದಲಾವಣೆ: ಆರ್ಥಿಕ ಚೇತರಿಕೆಗೆ ಸಿಐಐ ನೀಡಿದ ಸಲಹೆಗಳೇನು?ಆದಾಯ ತೆರಿಗೆ, ಜಿಎಸ್‌ಟಿ ಅಪರಾಧ ಕಾನೂನು ಬದಲಾವಣೆ: ಆರ್ಥಿಕ ಚೇತರಿಕೆಗೆ ಸಿಐಐ ನೀಡಿದ ಸಲಹೆಗಳೇನು?

ಯಾರು ಈ ಖಾಂಬಟ್ಟ?

ಅಜೀಮ್ ಪ್ರೇಮ್‌ಜಿ ಮೊದಲಾದವರ ರೀತಿ ಅರೀಜ್ ಪಿರೋಜ್‌ಶಾ ಖಾಂಬಟ್ಟ ಅವರು ಇರಾನ್ ಮೂಲಕ ಪಾರ್ಸಿ ಜನಾಂಗದವರು. ಅಹ್ಮದಾಬಾದ್‌ನಲ್ಲಿ ಪಯೋಮಾ ಇಂಡಸ್ಟ್ರೀಸ್ ಸಂಸ್ಥೆ ಹುಟ್ಟುಹಾಕಿದ ಅರೀಜ್ ಫಿರೋಜ್‌ಶಾ ಖಾಂಬಟ್ಟ ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ರಸ್ನಾ ಎಂಬ ಫ್ರೂಟ್ ಜ್ಯೂಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಹೊಸ ಇತಿಹಾಸ ರಚನೆಗೆ ಕಾರಣರಾದರು.

ರಸ್ನಾ ಇಂದು ಜಾಗತಿಕ ಬ್ರ್ಯಾಂಡ್ ಆಗಿ ಬೆಳೆದಿದೆ. 85 ವರ್ಷದ ಖಾಂಬಟ್ಟ ಅವರು ಅಹ್ಮದಾಬಾದ್ ಪಾರ್ಸಿ ಪಂಚಾಯತ್‌ನ ಮಾಜಿ ಅಧ್ಯಕ್ಷರು, ಭಾರತೀಯ ಪಾರ್ಸಿ ಜರೋಸ್ಟ್ರಿನ್ ಅಂಜುಮನ್‌ಗಳ ಮಹಾ ಒಕ್ಕೂಟದ ಮಾಜಿ ಉಪಾಧ್ಯಕ್ಷ, ಪಾರ್ಸಿ ಇರಾನಿ ಝರಥುಷ್ಟ್ರರ ಜಾಗತಿಕ ಮೈತ್ರಿ ಸಂಘಟನೆಯ ಮಾಜಿ ಅಧ್ಯಕ್ಷರು, ಮತ್ತು ಅರೀಜ್ ಖಾಂಬಟ್ಟ ಬೆನಿವೋಲೆಮಟ್ ಟ್ರಸ್ಟ್‌ನ ಅಧ್ಯಕ್ಷರೂ ಆಗಿದ್ದರು.

ಉಕ್ಕಿಗೆ ರಫ್ತು ಸುಂಕ ರದ್ದು: ಸರ್ಕಾರ ನಿರ್ಧಾರಕ್ಕೆ ಉದ್ಯಮದ ಸ್ವಾಗತಉಕ್ಕಿಗೆ ರಫ್ತು ಸುಂಕ ರದ್ದು: ಸರ್ಕಾರ ನಿರ್ಧಾರಕ್ಕೆ ಉದ್ಯಮದ ಸ್ವಾಗತ

ಇವರ ಸಾಧನೆಯನ್ನು ಗುರುತಿಸಿ ಹಲವಾರು ಪ್ರಶಸ್ತಿ ಸನ್ಮಾನಗಳು ಬಂದಿವೆ. ರಾಷ್ಟ್ರಪತಿಗಳ ಹೋಮ್ ಗಾರ್ಡ್, ಸಿವಿಲ್ ಡಿಫೆನ್ಸ್ ಮೆಡಲ್, ಪಶ್ಚಿಮಿ ಸ್ಟಾರ್, ಸಮರಸೇವಾ. ಸಂಗ್ರಾಮ್, ನ್ಯಾಷನಲ್ ಸಿಟಿಜನ್ ಅವಾರ್ಡ್ ಇತ್ಯಾದಿ ಪ್ರಶಸ್ತಿಗಳು ಬಂದಿವೆ. ಅಹ್ಮದಾಬಾದ್‌ನ ಅತ್ಯುತ್ತಮ ಪಾರ್ಸಿ ಎಂಬ ಪ್ರಶಸ್ತಿಗೆ ಮೊದಲು ಬಾಜನರಾದವರು ಅರೀಜ್ ಫಿರೋಜ್‌ಶಾ ಖಾಂಬಟ್ಟರೇ.

ಕಂಪನಿ ಹೇಳಿಕೆ

ಅರೀಜ್ ಪಿರೋಜ್‌ಶಾ ಖಾಂಬಟ್ಟರ ನಿಧನಕ್ಕೆ ರಸ್ನಾ ಕಂಪನಿ ಸಂತಾಪ ಸೂಚಸಿದೆ. "ಅವರ ಅವಿರತ ಶ್ರಮದಿಂದಾಗಿ ಆರತದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ. ಹಣ್ಣಿನಿಂದ ತಯಾರಿಸಿದ ಅವರ ಉತ್ಪನ್ನಗಳಿಂದಾಗಿ ದೇಶದ ಕೋಟ್ಯಂತರ ರೈತರ ಬೆಳೆಗೆ ಒಳ್ಳೆಯ ಬೆಲೆ ಸಿಗಲು ಅವರು ಕಾರಣರಾದರು" ಎಂದು ರಸ್ನಾ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮರೆಯಾದ 'ರಸ್ನಾ' ಸೃಷ್ಟಿಕರ್ತ; ಬಲಿಷ್ಠರಿಗೆ ಭಯ ಹುಟ್ಟಿಸಿದ್ದ ಖಾಂಬಟ್ಟ

ರಸ್ನಾ ಬೆಳೆದ ಹಾದಿ

ರಸ್ನಾ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ. ಆದರೆ, ಮಾರುಕಟ್ಟೆಯಲ್ಲಿ ಪ್ರಾಬಲ್ಯ ತೋರಲು ಆರಂಭಿಸಿದ್ದು ಎಂಬತ್ತರ ದಶಕದಲ್ಲಿ. ಆಗ ಥಮ್ಸಪ್, ಗೋಲ್ಡ್ ಸ್ಪಾಟ್, ಲಿಮ್ಕಾ ಎಂಬ ಕೋಲಾ ಪಾನೀಯಗಳು ಜನಮಾನಸದೊಳಗೆ ಟ್ರೆಂಡಿಂಗ್‌ನಲ್ಲಿದ್ದವು. ರಸ್ನಾದಂತಹ ಹಣ್ಣಿನ ಜ್ಯೂಸ್ ಉತ್ಪನ್ನವು ಕಾರ್ಬೊನೇಟೆಡ್ ಡ್ರಿಂಕ್ಸ್‌ನ ಕ್ರೇಜ್ ಇದ್ದ ಮಾರುಕಟ್ಟೆಯಲ್ಲಿ ಮಿಂಚುವಲ್ಲಿ ಸಫಲರಾಗಿದ್ದು ರೋಚಕ ಇತಿಹಾಸ.

ಕೋಲಾ ಪಾನೀಯಗಳು ಯುವ ಸಮುದಾಯಕ್ಕೆ ಟ್ರೆಂಡ್ ಆಗಿದ್ದರಿಂದ ಅರೀಜ್ ಪಿರೋಜ್‌ಶಾ ಖಾಂಬಟ್ಟರು ರಸ್ನಾಗೆ ಮಕ್ಕಳನ್ನು ಟಾರ್ಗೆಟ್ ಮಾಡಿದರು. ಅದಕ್ಕೆ ತಕ್ಕಂತೆ ರಸ್ನಾ ಜಾಹೀರಾತುಗಳು ಬಂದವು. "ಐ ಲವ್ ಯೂ ರಸ್ನಾ" ಟ್ಯಾಗ್‌ಲೈನ್ ಬಹಳ ಜನಪ್ರಿಯವಾಯಿತು. ಮನೆಯ ತಿಂಡಿ, ಊಟದ ಜೊತೆಗೆ ರಸ್ನಾ ಪಾನೀಯ, ಮನೆಗೆ ನಂಟರು ಬಂದರೆ ರಸ್ನಾ ಪಾನೀಯ ಹೀಗೆ ಕುಟುಂಬದ ಸಾಫ್ಟ್ ಡ್ರಿಂಕ್ಸ್ ಆಗಿ ಬದಲಾಯಿತು ರಸ್ನಾ ಬ್ರ್ಯಾಂಡ್.

ರಸ್ನಾದ ಪ್ರಮುಖ ಉತ್ಪನ್ನ ಹಣ್ಣಿನ ಜ್ಯೂಸ್ ಕಾನ್ನೆಂಟ್ರೇಟ್. 11 ಫ್ಲೇವರ್‌ನಲ್ಲಿ ಸಾಫ್ಟ್ ಡ್ರಿಂಕ್ಸ್ ತಯಾರಿಸುತ್ತದೆ. ಫ್ರ್ಯೂಟ್ ಜಾಮ್, ಉಪ್ಪಿನ ಕಾಯಿ, ಚಟ್ನಿ, ಸಿದ್ಧ ಸಾಂಬಾರು, ಕುರುಕು ತಿಂಡಿ ಇತ್ಯಾದಿ ಉತ್ಪನ್ನಗಳನ್ನು ರಸ್ನಾ ತಯಾರುಸತ್ತದೆಯಾದರೂ ಅದರ ಹಣ್ಣಿನ ಜ್ಯೂಸ್ ಈಗಲೂ ಪ್ರಮುಖ ಉತ್ಪನ್ನವಾಗಿದೆ.

11 ವರ್ಷಗಳ ಹಿಂದೆಯೇ ರಸ್ನಾದ ವಹಿವಾಟು 350 ಕೋಟಿ ರೂಪಾಯಿ ಇತ್ತು. ಭಾರತದಲ್ಲಿ ಐದು ತಯಾರಿಕಾ ಘಟಕಗಳನ್ನು ಹೊಂದಿದೆ. ಇದರಲ್ಲಿ ಐದು ಗುಜರಾತ್ ರಾಜ್ಯದಲ್ಲಿಯೇ ಇದೆ. ಬಾಂಗ್ಲಾದೇಶ, ದುಬೈ, ಸೌದಿ ಅರೇಬಿಯಾ ಮತ್ತು ಈಜಿಪ್ಟ್ ದೇಶಗಳಲ್ಲೂ ಮ್ಯಾನಿಫ್ಯಾಕ್ಚರಿಂಗ್ ಯೂನಿಟ್‌ಗಳನ್ನು ಹೊಂದಿದೆ.

ರಸ್ನಾ ಬಜ್ ಎಂಬ ಬ್ರ್ಯಾಂಡ್ ಅಡಿಯಲ್ಲಿ ಭಾರತದ 40 ಕಡೆ ಮಾಕ್‌ಟೇಲ್ ಬಾರ್‌ಗಳನ್ನು ಸ್ಥಾಪಿಸಿದೆ. ಭಾರತದ ಮಾರುಕಟ್ಟೆಯಿಂದಲೇ ರಸ್ನಾಗೆ ಅತಿ ಹೆಚ್ಚು ಆದಾಯ ಬರುತ್ತದೆಯಾದರೂ ಹಲವು ಉತ್ಪನ್ನಗಳು ವಿವಿಧ ದೇಶಗಳಿಗೆ ರಫ್ತಾಗುತ್ತವೆ.

ಬಲಿಷ್ಠರನ್ನು ಸೋಲಿಸಿದ ರಸ್ನಾ

ಜಾಗತಿಕವಾಗಿ ಟ್ಯಾಂಗ್ ಎಂಬ ಬ್ರ್ಯಾಂಡ್ ಅಡಿಯಲ್ಲಿ ಸಾಫ್ಟ್ ಡ್ರಿಂಕ್ಸ್ ತಯಾರಿಸುವ ಕ್ರಾಫ್ಟ್ ಫುಡ್ಸ್ 2001ರಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಲು ಯತ್ನಿಸಿತು. ಆದರೆ, ರಸ್ನಾ ಮುಂದೆ ಸ್ಪರ್ಧೆ ಮಾಡಲಾಗದೇ 2003ರಲ್ಲಿ ಅದು ಭಾರತದ ಘಟಕವನ್ನು ಬಂದ್ ಮಾಡಬೇಕಾಯತು.

ಇನ್ನು, ವಿಶ್ವದ ಕೋಲಾ ಪಾನೀಯ ದೈತ್ಯ ಕೋಕ-ಕೋಲ ಸಾಫ್ಟ್ ಡ್ರಿಂಕ್ ಕ್ಷೇತ್ರಕ್ಕೆ ಅಡಿ ಇಡುವ ಪ್ರಯತ್ನ ಮಾಡಿತು. ಸನ್‌ಫಿಲ್ ಎನ್ನುವ ಬ್ರ್ಯಾಂಡ್‌ನ ಪಾನೀಯವನ್ನು ಮಾರುಕಟ್ಟೆಗೆ ತಂದಿತು. ರಸ್ನಾ ಪ್ರಾಬಲ್ಯ ಮುರಿಯಲು ವಿಫಲರಾಗಿ 2004ರಲ್ಲಿ ಇದು ಹೇಳಹೆಸರಿಲ್ಲದಂತೆ ಮಾಯವಾಯಿತು. 2011ರಲ್ಲಿ ಸನ್‌ಫಿಲ್ ಅನ್ನು ಮತ್ತೆ ಬಿಡುಗಡೆ ಮಾಡಲಾಯಿತಾದರೂ ನಿರೀಕ್ಷಿತ ವ್ಯವಹಾರ ಆಗಿಲ್ಲ.

English summary

Rasna Founder Areez Pirojshaw Khambatta Passes Away, Know His Success Story

Rasna has become household brand name for soft drinks in India. The man behind this is Areez Pirozshaw Khambatta, who passed away at the age of 85 years. Here is his success story.
Story first published: Monday, November 21, 2022, 18:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X