For Quick Alerts
ALLOW NOTIFICATIONS  
For Daily Alerts

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ವಜಾ ಸರಿ ಎಂದ RBI

|

ಐಸಿಐಸಿಐ ಬ್ಯಾಂಕ್‌ನ ಮಾಜಿ ಎಂಡಿ ಹಾಗೂ ಸಿಇಒ ಚಂದಾ ಕೊಚ್ಚರ್ ಅವರನ್ನು ವಜಾಗೊಳಿಸಿದ್ದು ಸರಿಯಾದ ತೀರ್ಮಾನ ಎಂದು ಆರ್‌ಬಿಐ ಸಮರ್ಥಿಸಿಕೊಂಡಿದೆ. ಐಸಿಐಸಿಐ ಬ್ಯಾಂಕ್ ಈ ವರ್ಷದ ಆರಂಭದಲ್ಲಿ ಅವರನ್ನು ಕೆಲಸದಿಂದ ವಜಾಗೊಳಿಸಿ ನೀಡಿದ್ದ ಸವಲತ್ತುಗಳನ್ನು ಹಿಂಪಡೆದುಕೊಂಡಿತ್ತು.

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ವಜಾ ಸರಿ ಎಂದ RBI

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಓ ಚಂದಾ ಕೊಚ್ಚರ್‌ರನ್ನು ವಜಾ ಮಾಡುವ ಸಂದರ್ಭದಲ್ಲಿ ಬೋನಸ್, ವೇತನ, ಐಸಿಐಸಿಐ ಬ್ಯಾಂಕ್‌ನ ಷೇರುಗಳ ಮೊತ್ತವನ್ನು ತಡೆ ಹಿಡಿಯಲಾಗಿತ್ತು. ಕೊಚ್ಚರ್ ಪರ ವಕೀಲರು ಸ್ವಯಂ ಪ್ರೇರಿತರಾಗಿಯೇ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ಆನಂತರ ಆರ್‌ಬಿಐ ಮತ್ತು ಬ್ಯಾಂಕ್‌ನ ಆಡಳಿತ ಮಂಡಳಿ ಆಕೆಯನ್ನು ವಜಾಗೊಳಿಸಿದ್ದರು.

ಸಿಇಓ ಸ್ಥಾನದಿಂದ ತನ್ನನ್ನು ವಜಾಗೊಳಿಸಿದ್ದೇ ತಡ ಚಂದಾ ಕೊಚ್ಚರ್ ಮುಂಬೈ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ರಂಜಿತ್ ಮೋರೆ ನ್ಯಾಯಪೀಠದ ಮುಂದೆ ಬುಧವಾರ ಆರ್‌ಬಿಐ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಆರ್‌ಬಿಐ ಕಾನೂನಿನ ಪ್ರಕಾರ ನಡೆದುಕೊಂಡಿದ್ದೇವೆ, ಯಾವುದೇ ತಪ್ಪಿಲ್ಲ ಎಂದು ವಾದಿಸಿದೆ.

English summary

RBI Defends Chanda Kochar's Sacking Was Fair

RBI on wednesday informed bombay highcourt it acted according to law and there is no violation to sack ICICI ex CEO Chanda Kochhar
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X