For Quick Alerts
ALLOW NOTIFICATIONS  
For Daily Alerts

ಬಡ್ಡಿ ದರ ಇಳಿಸಲು ಮನಸ್ಸು ಮಾಡದ RBI : ಯೆಸ್ ಬ್ಯಾಂಕ್ ಗ್ರಾಹಕರ ಸಂಕಷ್ಟ ಬುಧವಾರ ಅಂತ್ಯ

|

ಯೆಸ್ ಬ್ಯಾಂಕ್ ಮೇಲೆ ಹೇರಲಾಗಿದ್ದ ನಿರ್ಬಂಧದ ಆದೇಶವನ್ನು ಮಾರ್ಚ್ 18ರಂದು ಬುಧವಾರ ಸಂಜೆ 6 ಗಂಟೆಗೆ ಹಿಂತೆಗೆದುಕೊಳ್ಳಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

 

ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಶಕ್ತಿಕಾಂತ ದಾಸ್ ಯೆಸ್ ಬ್ಯಾಂಕ್ ಠೇವಣಿದಾರರ ಹಣ ಭದ್ರವಾಗಿದೆ. ಯಾರು ಭಯ ಪಡಬೇಕಾದ ಅಗತ್ಯವಿಲ್ಲ. ಹೊಸ ಆಡಳಿತ ಮಂಡಳಿ ಮಾರ್ಚ್ 26ರಿಂದ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

ಬ್ಯಾಂಕ್ ಓಪನ್ ಆದ ಕೂಡಲೇ ಗಾಬರಿಗೊಂಡು ಹಣ ವಿತ್‌ಡ್ರಾ ಮಾಡದಿರಿ

ಬ್ಯಾಂಕ್ ಓಪನ್ ಆದ ಕೂಡಲೇ ಗಾಬರಿಗೊಂಡು ಹಣ ವಿತ್‌ಡ್ರಾ ಮಾಡದಿರಿ

ಆರ್‌ಬಿಐ ಮಾರ್ಚ್ 18ರಂದು ಬುಧವಾರ ಸಂಜೆ 6 ಗಂಟೆಗೆ ಯೆಸ್ ಬ್ಯಾಂಕ್ ಮೇಲೆ ಹೇರಿರುವ ನಿರ್ಬಂಧ ಹಿಂಪಡೆಯುತ್ತದೆ. ಆ ಬಳಿಕ ಠೇವಣಿದಾರರು ಗಾಬರಿಗೊಂಡು ಹಣ ವಿತ್‌ಡ್ರಾ ಮಾಡಲು ಹೋಗದಿರಿ ಎಂದಿದ್ದಾರೆ.

ಬುಧವಾರದಿಂದ ಎಲ್ಲಾ ಆನ್‌ಲೈನ್ ಸೇವೆಗಳು ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಲಿದೆ ಎಂದು ಸ್ವತಃ ಯೆಸ್ ಬ್ಯಾಂಕ್ ಟ್ವೀಟ್ ಮಾಡಿದೆ.

 

ಕೊರೊನಾ ವೈರಸ್‌ನಿಂದ ಭಾರತ ಆರ್ಥಿಕತೆ ಮೇಲೆ ನೇರ ಪರಿಣಾಮ

ಕೊರೊನಾ ವೈರಸ್‌ನಿಂದ ಭಾರತ ಆರ್ಥಿಕತೆ ಮೇಲೆ ನೇರ ಪರಿಣಾಮ

ಕೊರೊನಾವೈರಸ್‌ ಸಾಂಕ್ರಾಮಿಕ ರೋಗಕ್ಕೆ ಭಾರತ ಹೊರತಾಗಿಲ್ಲ. ವಿಶ್ವದ ಹಲವು ರಾಷ್ಟ್ರಗಳು ಇದಕ್ಕೆ ತುತ್ತಾಗಿವೆ. ಭಾರತದಲ್ಲಿ 100ಕ್ಕೂ ಹೆಚ್ಚು ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ. ಕೊರೊನಾವೈರಸ್ ವಾಣಿಜ್ಯ ಚಟುವಟಿಕೆಗೆ ಅಡ್ಡಿಯಾಗಿ ಭಾರತದ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರಬಹುದು. ಸೋಂಕು ತಡೆಗೆ ಸರ್ಕಾರ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.

ಸೋಂಕು ಹರಡುವುದನ್ನು ತಡೆಯಲು ಡಿಜಿಟಲ್ ಪಾವತಿ ಮಾಡಿ
 

ಸೋಂಕು ಹರಡುವುದನ್ನು ತಡೆಯಲು ಡಿಜಿಟಲ್ ಪಾವತಿ ಮಾಡಿ

ಕೊರೊನಾವೈರಸ್ ಸೋಂಕು ಹರಡುವುದನ್ನು ತಡೆಯಲು ಡಿಜಿಟಲ್ ಪಾವತಿ ವ್ಯವಸ್ಥೆ ಮಾಡಿ ಎಂದು ಆರ್‌ಬಿಐ ಸಲಹೆ ನೀಡಿದೆ. ನೋಟುಗಳಿಂದ ವೈರಸ್ ಹರಡುವ ಪ್ರಮಾಣವು ಹೆಚ್ಚಿರುತ್ತದೆ. ಹೀಗಾಗಿ ಡಿಜಿಟಲ್ ಪಾವತಿ ಉತ್ತಮ ಎಂದಿದ್ದಾರೆ.

ವೈರಸ್ ಸೋಂಕಿನಿಂದಾಗಿ ಭಾರತದ ಆರ್ಥಿಕತೆ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಇದರ ಕ್ರಮಗಳ ಕುರಿತು ಏಪ್ರಿಲ್ 3ರಂದು ಹಣಕಾಸು ನೀತಿ ಪರಿಶೀಲನೆಯಲ್ಲಿ ಪ್ರಕಟಿಸಲಾಗುತ್ತದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

 

ಬಡ್ಡಿ ದರ ಇಳಿಸಲು ಮತ್ತಷ್ಟು ಮೀನಾಮೇಷ

ಬಡ್ಡಿ ದರ ಇಳಿಸಲು ಮತ್ತಷ್ಟು ಮೀನಾಮೇಷ

ಜಾಗತಿಕವಾಗಿ ಕೊರೊನಾ ವೈರಸ್‌ ಹರಡುವಿಕೆಯಿಂದ ಯುಎಸ್ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರಗಳನ್ನು ಶೂನ್ಯಕ್ಕೆ ಇಳಿಸಿತ್ತು. ಅದೇ ರೀತಿಯಲ್ಲಿ ಆರ್‌ಬಿಐ ಕೂಡ ಭರವಸೆಯನ್ನು ಹುಟ್ಟುಹಾಕಿತ್ತು. ಆದರೆ ಯಾವುದೇ ರೆಪೋ ದರಗಳು ಅಥವಾ ಬಡ್ಡಿ ದರವನ್ನು ಇಳಿಸದೇ ಜನಸಾಮಾನ್ಯರಲ್ಲಿ ನಿರಾಸೆ ಮೂಡಿಸಿದೆ.

10 ವರ್ಷಗಳ ಬಾಂಡ್ ಇಳುವರಿ 19 ಬೇಸಿಸ್ ಪಾಯಿಂಟ್‌ಗಳ ಕುಸಿತ ಕಂಡಿದೆ. ಇದು 9 ಅಕ್ಟೋಬರ್ 2019 ರಿಂದ ಗರಿಷ್ಠ ಕುಸಿತವಾಗಿದ್ದು, ಅದರ ಹಿಂದಿನ 6.32 ಪರ್ಸೆಂಟ್‌ರಿಂದ 6.12 ಪರ್ಸೆಂಟ್‌ಗೆ ಇಳಿದಿದೆ. ಬಾಂಡ್ ಇಳುವರಿ ಮತ್ತು ಬೆಲೆಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ.

ಮುಂದಿನ ಆರ್‌ಬಿಐ ನೀತಿ ಫಲಿತಾಂಶ ಏಪ್ರಿಲ್ 3 ರಂದು ಪ್ರಕಟಗೊಳ್ಳಲಿದ್ದು ಆಗಲಾದರೂ ಕನಿಷ್ಟ 50 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

 

English summary

RBI Fell Short Of Announcing A Rate Cut

The RBI, however, fell short of announcing a rate cut, as was being expected widely.
Story first published: Monday, March 16, 2020, 18:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X