For Quick Alerts
ALLOW NOTIFICATIONS  
For Daily Alerts

RBI ಹಣಕಾಸು ನೀತಿ ಪ್ರಮುಖಾಂಶಗಳು: ಚಿನ್ನದ ಮೌಲ್ಯದ ಶೇ 90ರಷ್ಟು ಸಾಲ

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ (ಆಗಸ್ಟ್ 6, 2020) ಘೋಷಣೆ ಮಾಡಿದ ಹಣಕಾಸು ನೀತಿಯ ಪ್ರಮುಖಾಂಶಗಳು ಇಲ್ಲಿವೆ. ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅದು 4% ದರದಲ್ಲೇ ಮುಂದುವರಿಯಲಿದೆ. ಇನ್ನುಳಿದಂತೆ ಮಾಧ್ಯಮಗಳ ಜತೆ ಹಂಚಿಕೊಂಡ ಮುಖ್ಯ ಮಾಹಿತಿಗಳು ಹೀಗಿವೆ.

* ಆರ್ ಬಿಐ ಹಣಕಾಸು ನೀತಿ ಸಮಿತಿಯಿಂದ ರೆಪೋ ದರ 4% ಮುಂದುವರಿಕೆ

* ರಿವರ್ಸ್ ರೆಪೋ ದರದಲ್ಲಿ ಕೂಡ ಬದಲಾವಣೆ ಇಲ್ಲ. 3.35% ಮುಂದುವರಿಕೆ.

* ನಗದು ಮೀಸಲು ಪ್ರಮಾಣ (CRR) 3% ಯಥಾಸ್ಥಿತಿಯಲ್ಲೇ ಇರಲಿದೆ.

* ಕೊರೊನಾ ಬಿಕ್ಕಟ್ಟು ಉದ್ಭವಿಸಿದ ಮೇಲೆ ಎಲ್ಲ ದೇಶೀಯ ಹಣದುಬ್ಬರ ಕೂಡ ಹೆಚ್ಚಾಗಿದೆ.

RBI ಹಣಕಾಸು ನೀತಿ ಪ್ರಮುಖಾಂಶಗಳು: ಚಿನ್ನದ ಮೌಲ್ಯದ ಶೇ 90ರಷ್ಟು ಸಾಲ

 

* ಜಾಗತಿಕ ಆರ್ಥಿಕತೆಯು ದುರ್ಬಲವಾಗಿದೆ. ಕೊರೊನಾ ಪ್ರಕರಣ ಸಂಖ್ಯೆ ಕಡಿಮೆ ಆಗುತ್ತಿದ್ದಂತೆ ಪುನಶ್ಚೇತನದ ಸೂಚನೆಗಳು ದೊರೆಯುತ್ತವೆ.

* ಏಪ್ರಿಲ್- ಮೇ ತಿಂಗಳ ಕನಿಷ್ಠ ಮಟ್ಟದಿಂದ ಭಾರತದಲ್ಲಿ ಆರ್ಥಿಕ ಚಟುವಟಿಕೆಗಳು ಸುಧಾರಿಸಿವೆ.

* ಎಲ್ಲ ಸೆಗ್ಮೆಂಟ್ ಗಳಲ್ಲೂ ಹಣದುಬ್ಬರ ಕಾಣುತ್ತಿದೆ. ಪೂರೈಕೆ ಜಾಲ ಅಸ್ತವ್ಯಸ್ತ ಆಗಿದ್ದರ ಫಲಿತಾಂಶ ಇದು.

* ಜಿಡಿಪಿ ಬೆಳವಣಿಗೆ ದರ ನಕಾರಾತ್ಮಕವಾಗಿಯೇ ಮುಂದುವರಿಯುವ ಸಾಧ್ಯತೆ ಇದೆ. ಆದರೆ ಕೊರೊನಾ ನಿಯಂತ್ರಣದ ಯಾವುದೇ ಪ್ರಯತ್ನದಿಂದ ಸನ್ನಿವೇಶ ಬದಲಾಗಲಿದೆ.

ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದ RBI

* ಭಾರತದ ಆರ್ಥಿಕ ಬೆಳವಣಿಗೆಯು 2020 ಏಪ್ರಿಲ್ ನಿಂದ ಆರಂಭವಾಗುವ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಕುಗ್ಗಲಿದೆ.

* ವ್ಯವಸ್ಥೆಯಲ್ಲಿ ಅಗತ್ಯ ಪ್ರಮಾಣದ ನಗದು ಹರಿದಾಡದೆ ದರ ಕಡಿತ ಮಾಡುವುದು ಸಾಧ್ಯವಿಲ್ಲ.

* ಹಣಕಾಸು ಮಾರ್ಕೆಟ್ ಗೆ ನಗದು ಬೆಂಬಲ, ಸಾಲದ ಹರಿವಿಗೆ ಉತ್ತೇಜನ, ಡಿಜಿಟಲ್ ಪಾವತಿ ವ್ಯವಸ್ಥೆ ಹಾಗೂ ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ.

* ನಬಾರ್ಡ್ ಮತ್ತು ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಗೆ ಹೆಚ್ಚುವರಿಯಾಗಿ ಹತ್ತು ಸಾವಿರ ಕೋಟಿ ನಗದು ಒದಗಿಸಲಾಗುತ್ತದೆ. ಇದರಿಂದ ಎನ್ ಬಿಎಫ್ ಸಿ ಮತ್ತು ಹೌಸಿಂಗ್ ವಲಯದ ನಗದು ಬಿಕ್ಕಟ್ಟು ಪರಿಹಾರಕ್ಕೆ ನೆರವು ಸಿಕ್ಕಂತಾಗುತ್ತದೆ.

* ಈಗಾಗಲೇ ಎಂಎಸ್ ಎಂಇ ಸಾಲ ಪುನಾರಚನೆ ಯೋಜನೆ ಜಾರಿಯಲ್ಲಿದೆ. ಕೊರೊನಾ ಕಾರಣಕ್ಕೆ ಈ ಕ್ಷೇತ್ರಕ್ಕೆ ಇನ್ನು ಹೆಚ್ಚಿನ ನೆರವು ಆಗಬೇಕಿದೆ.

* ಸದ್ಯಕ್ಕೆ ಚಿನ್ನ ಅಡಮಾನ ಮಾಡಿದಲ್ಲಿ ಮೌಲ್ಯದ ಶೇಕಡಾ 90% ನೀಡಲಾಗುತ್ತಿದೆ. ಈ ಹಿಂದೆ ಅದು ಶೇಕಡಾ ಎಪ್ಪತ್ತೈದರಷ್ಟಿತ್ತು.

* ಭವಿಷ್ಯದಲ್ಲಿ ಆರ್ ಬಿಐನಿಂದ ಇನ್ನೋವೇಷನ್ ಹಬ್ ಗಳನ್ನು ಆರಂಭಿಸಲಾಗುತ್ತದೆ. ಡಿಜಿಟಲ್ ಪಾವತಿಗೆ ಆನ್ ಲೈನ್ ವ್ಯಾಜ್ಯ ಪರಿಹಾರ ವೇದಿಕೆ ಪರಿಚಯಿಸಲಾಗುತ್ತದೆ.

English summary

RBI Monetary Policy: Highlights Of RBI Governer Shaktikanta Das Press Meet in Kannada

Here is the highlights of RBI guv Shaktikanta Das press meet about RBI monetary policy.
Company Search
COVID-19