For Quick Alerts
ALLOW NOTIFICATIONS  
For Daily Alerts

ಚೀನಾದ ನೆಟ್ ವರ್ಕ್ ಬಿಡಿ ಭಾಗ ಬಳಸದ ವಿಶ್ವದ ಏಕೈಕ ಕಂಪೆನಿ ಭಾರತದ್ದು

|

ರಿಲಯನ್ಸ್ ಜಿಯೋ ಮುಂಬರುವ 5G ನೆಟ್ ವರ್ಕ್ ಗೆ ಚೀನಾದ ಒಂದೇ ಒಂದು ನೆಟ್ ವರ್ಕ್ ಬಿಡಿ ಭಾಗವನ್ನೂ ಬಳಸುವುದಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಆಧ್ಯಕ್ಷ ಮುಕೇಶ್ ಅಂಬಾನಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿದ್ದ ಟ್ರಂಪ್ ಗೆ ಮುಕೇಶ್ ಈ ವಿಚಾರ ತಿಳಿಸಿದ್ದಾರೆ.

ಇಡೀ ವಿಶ್ವದಲ್ಲೇ ಚೀನಾ ಸಲಕರಣೆಗಳನ್ನು ಬಳಸದ ಏಕೈಕ ನೆಟ್ ವರ್ಕ್ ರಿಲಯನ್ಸ್ ಜಿಯೋ ಎಂದು ಭಾರತದ ಸಿಇಒಗಳ ಜತೆ ಟ್ರಂಪ್ ನಡೆಸಿದ ಸಂವಾದದ ವೇಳೆ ಮುಕೇಶ್ ತಿಳಿಸಿದ್ದಾಗಿ ಶ್ವೇತ ಭವನ ಗುರುವಾರ ಬಿಡುಗಡೆ ಮಾಡಿರುವ ಮಾಹಿತಿಯಿಂದ ತಿಳಿದುಬಂದಿದೆ. ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪೆನಿಯು 4G, 5G ಎರಡಕ್ಕೂ ಜಿಯೋದ ನೆಟ್ ವರ್ಕಿಂಗ್ ಸಹಭಾಗಿತ್ವ ಹೊಂದಿದೆ.

 

ಜಿಯೋ V/S ಏರ್‌ಟೆಲ್ V/S ವೊಡಾಫೋನ್ ಐಡಿಯಾ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಯಾವುದು ಬೆಸ್ಟ್‌?

ನೀವೀಗ 4G ನೆಟ್ ವರ್ಕ್ ನೀಡುತ್ತಿದ್ದೀರಿ, 5G ಕೂಡ ನೀಡುತ್ತೀರಾ ಎಂದು ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದಾಗ, ನಾವು 5G ನೀಡುತ್ತೇವೆ. ಚೀನಾ ಸಲಕರಣೆಯನ್ನು ಬಳಸದ ವಿಶ್ವದ ಏಕೈಕ ನೆಟ್ ವರ್ಕ್ ನಮ್ಮದು ಎಂದು ಮುಕೇಶ್ ಅಂಬಾನಿ ಉತ್ತರ ನೀಡಿದ್ದಾರೆ.

ಚೀನಾದ ನೆಟ್ ವರ್ಕ್ ಬಿಡಿ ಭಾಗ ಬಳಸದ ವಿಶ್ವದ ಏಕೈಕ ಕಂಪೆನಿ ಭಾರತದ್ದು

ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಕಳೆದ ಅಕ್ಟೋಬರ್ ನಲ್ಲಿ ಮಾತನಾಡುತ್ತಾ, ಅಮೆರಿಕ ಮಿತ್ರ ರಾಷ್ಟ್ರಗಳು ಹುವೈನ 5G ಸಲಕರಣೆಗಳನ್ನು ಬಳಸುವುದು ಭದ್ರತೆಗೆ ಅಪಾಯ ಒಡ್ಡಿಕೊಂಡಂತೆ ಎಂದಿದ್ದರು.

ಭಾರತದಲ್ಲಿ 5G ನಿಯೋಜನೆ ಮಾಡುವಾಗ ಸರ್ಕಾರದಿಂದ ಹುವೈ ಮತ್ತು ZTE ದೂರ ಇಡಬೇಕು ಎಂದು ಟ್ರಂಪ್ ಆಡಳಿತ ತಾಕೀತು ಮಾಡಿದೆ. ಆದರೆ ಭಾರತೀಯ ಸರ್ಕಾರವು ಹುವೈ ಮತ್ತು ZTEಗೆ 5G ಪ್ರಯೋಗಕ್ಕೆ ಭಾಗವಹಿಸಲು ಅವಕಾಶ ನೀಡಿದೆ.

ಚಾರ್ ಧಾಮ್ ದರ್ಶನ ಮಾಡಿಸಲಿದೆ ರಿಲಯನ್ಸ್ ಜಿಯೋ

ಅಮೆರಿಕದ ಮಿತ್ರ ರಾಷ್ಟ್ರಗಳಾದ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್, ತೈವಾನ್ ಈಗಾಗಲೇ ಈ ಎರಡು ಕಂಪೆನಿಗಳು 5G ನೆಟ್ ವರ್ಕ್ಸ್ ನಲ್ಲಿ ಭಾಗವಹಿಸದಿರುವಂತೆ ನಿಷೇಧ ಹೇರಿವೆ.

English summary

Reliance Jio Only Company In The World Not Use Chinese Networking Parts

Reliance Jio only company in the world not using Chinese networking parts, said Mukesh Ambani. Here is the complete details.
Story first published: Friday, February 28, 2020, 12:46 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more