For Quick Alerts
ALLOW NOTIFICATIONS  
For Daily Alerts

Reliance Q3 Results: ರಿಲಯನ್ಸ್ ನಿವ್ವಳ ಆದಾಯ ಕುಸಿತ, ಜಿಯೋ ಲಾಭ ಏರಿಕೆ

|

ದೇಶದ ಬಹುತೇಕ ಎಲ್ಲ ವಲಯಗಳಲ್ಲಿ ತನ್ನ ಹೆಜ್ಜೆಯನ್ನು ಇರಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಮೂರನೇ ತ್ರೈಮಾಸಿಕದ ವರದಿಯನ್ನು ಶುಕ್ರವಾರ ಪ್ರಕಟಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಆದಾಯವು (ತೆರಿಗೆ ಬಳಿಕ ಲಭ್ಯವಾಗುವ ಲಾಭ) ಶೇಕಡ 15ರಷ್ಟು ಇಳಿಕೆ ಕಂಡಿದೆ. ಡಿಸೆಂಬರ್‌ನಲ್ಲಿ ಅಂತ್ಯವಾಗುವ ತ್ರೈಮಾಸಿಕದಲ್ಲಿ ನಿವ್ವಳ ಆದಾಯವು 17,806 ಕೋಟಿ ರೂಪಾಯಿ ಆಗಿದೆ. ಈ ಹಿಂದಿನ ವರ್ಷ ಇದೇ ತ್ರೈಮಾಸಿಕದಲ್ಲಿ ನಿವ್ವಳ ಆದಾಯವು 20,539 ಕೋಟಿ ರೂಪಾಯಿ ಆಗಿತ್ತು .

ಆದರೆ ಸಂಸ್ಥೆಯ ಒಟ್ಟು ಆದಾಯದಲ್ಲಿ ಏರಿಕೆ ಕಂಡು ಬಂದಿದೆ. ಸಂಸ್ಥೆಯ ಆದಾಯದಲ್ಲಿ (ತೆರಿಗೆಗೂ ಮುನ್ನ ಲಭ್ಯವಾಗುವ ಆದಾಯ) ಶೇಕಡ 15.32ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಸಂಸ್ಥೆಯ ಆದಾಯವು 191,271 ಕೋಟಿ ರೂಪಾಯಿ ಆಗಿದ್ದು, ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಆದಾಯವು 2,20,592 ಕೋಟಿ ರೂಪಾಯಿ ಆಗಿದೆ. ಅಂದರೆ ಈ ಹಿಂದಿನ ವರ್ಷಕ್ಕೆ ಹೋಲಿಸಿದಾಗ ಆದಾಯದಲ್ಲಿ ಏರಿಕೆ ಕಂಡು ಬಂದಿದೆ.

6 ಕಂಪನಿಗಳ 78,163 ಕೋಟಿ ರು ಮೌಲ್ಯ ಇಳಿಕೆ; RILಗೆ ಭಾರಿ ನಷ್ಟ6 ಕಂಪನಿಗಳ 78,163 ಕೋಟಿ ರು ಮೌಲ್ಯ ಇಳಿಕೆ; RILಗೆ ಭಾರಿ ನಷ್ಟ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ, "ವರ್ಷದಿಂದ ವರ್ಷದ ಆಧಾರದ ಮೇಲೆ ಏಕೀಕೃತ ಇಬಿಐಟಿಡಿಎ (EBITDA)ಯಲ್ಲಿ ಎಲ್ಲ ವಿಭಾಗಗಳು ದೃಢವಾದ ಬೆಳವಣಿಗೆಗೆ ಕೊಡುಗೆ ನೀಡಿವೆ. ಸವಾಲಿನ ನಡುವೆಯೂ ನಮ್ಮು ಎಲ್ಲ ತಂಡಗಳು ಉತ್ತಮ ಕಾರ್ಯನಿರ್ವಹಣೆ ಮಾಡುವಲ್ಲಿ ಸಫಲವಾಗಿದೆ," ಎಂದು ತಿಳಿಸಿದ್ದಾರೆ.

 Reliance Q3 Results: ರಿಲಯನ್ಸ್ ನಿವ್ವಳ ಆದಾಯ ಕುಸಿತ, ಎಷ್ಟಿದೆ?

ರಿಲಯನ್ಸ್ ಜಿಯೋ ನಿವ್ವಳ ಆದಾಯ ಏರಿಕೆ

ಈ ನಡುವೆ ರಿಲಯನ್ಸ್ ಜಿಯೋ ಆದಾಯವು ಹೆಚ್ಚಳವಾಗಿದೆ. ಸಂಸ್ಥೆಯ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ ನಿವ್ವಳ ಲಾಭದಲ್ಲಿ ಶೇಕಡ 28.6ರಷ್ಟು ಏರಿಕೆ ಕಂಡು ಬಂದಿದೆ. ನಿವ್ವಳ ಆದಾಯವು 4,881 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ಆದಾಯವು 24,892 ಕೋಟಿಯಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ 20.9ರಷ್ಟು ಹೆಚ್ಚಾಗಿದೆ. ಇಬಿಐಟಿಡಿಎ (EBITDA) ವರ್ಷದಿಂದ ವರ್ಷಕ್ಕೆ ಶೇ 25.1ರಷ್ಟು ಏರಿಕೆಯಾಗಿದ್ದು, 12,519 ಕೋಟಿ ರೂಪಾಯಿಗೆ ತಲುಪಿದೆ.

ಅಂಬಾನಿ ನೇತೃತ್ವದ ರಿಲಯನ್ಸ್ ಲಾಭ 20 ವರ್ಷಗಳಲ್ಲಿ 20 ಪಟ್ಟು ಹೆಚ್ಚಳಅಂಬಾನಿ ನೇತೃತ್ವದ ರಿಲಯನ್ಸ್ ಲಾಭ 20 ವರ್ಷಗಳಲ್ಲಿ 20 ಪಟ್ಟು ಹೆಚ್ಚಳ

ಚಂದಾದಾರಿಕೆ ಸಂಖ್ಯೆ ಹಾಗೂ ಬಳಕೆದಾರರಿಂದ ಬರುವ ಆದಾಯವು ಹೆಚ್ಚಾಗಿದೆ. ಹೊಸ ಚಂದಾದಾರರ ಸೇರ್ಪಡೆಯು 53 ಲಕ್ಷ ಆಗಿದೆ. ಮೂರನೇ ಮಾಸಿಕದಲ್ಲಿ ಚಂದಾದಾರ ಸಂಖ್ಯೆಯು 3.42 ಕೋಟಿಗೆ ಏರಿದೆ. ಜಿಯೋ ಚಂದಾದಾರಿಕೆ ಮಾಸಿಕವಾಗಿ ಶೇಕಡ 17.5ರಷ್ಟು ಏರಿದೆ.

ರಿಲಯನ್ಸ್ ರೀಟೇಲ್, O2C, ಮಾಧ್ಯಮ

ರಿಲಯನ್ಸ್ ರೀಟೇಲ್ ವ್ಯಾಪಾರದಲ್ಲಿ ನಿವ್ವಳ ಲಾಭದಲ್ಲಿ ವಾರ್ಷಿಕವಾಗಿ ಶೇ 6.2ರಷ್ಟು ಏರಿಕೆಯಾಗಿ, 2,400 ಕೋಟಿ ರೂಪಾಯಿಗೆ ತಲುಪಿದೆ. ಆದಾಯವು ವರ್ಷದಿಂದ ವರ್ಷಕ್ಕೆ ಶೇ 18.6ರಷ್ಟು ಹೆಚ್ಚಳವಾಗಿ, 60,096 ಕೋಟಿ ರೂಪಾಯಿಗೆ ಮುಟ್ಟಿದೆ. ಇಬಿಐಟಿಡಿಎ ಶೇ 24.9ರಷ್ಟು ಹೆಚ್ಚಾಗಿ, 4,773 ಕೋಟಿ ರೂಪಾಯಿ ಆಗಿದೆ. ತೈಲದಿಂದ ರಾಸಾಯನಿಕಗಳ (O2C) ವ್ಯವಹಾರದ ಸೆಗ್ಮೆಂಟ್ ಆದಾಯವು ವರ್ಷದಿಂದ ವರ್ಷಕ್ಕೆ ಶೇ 10ರಷ್ಟು ಏರಿಕೆಯಾಗಿ 1,44,630 ಕೋಟಿ ರೂಪಾಯಿ ಆಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ನಡೆಸುತ್ತಿರುವ ಮಾಧ್ಯಮ ವ್ಯವಹಾರದ ನಿವ್ವಳ ಲಾಭವು ರೂ. 9 ಕೋಟಿಯಲ್ಲಿದ್ದು, ವರ್ಷದಿಂದ ವರ್ಷಕ್ಕೆ ಶೇ 97.1ರಷ್ಟು ಇಳಿಕೆಯಾಗಿದೆ. ಆದಾಯವು ಶೇ 11.6ರಷ್ಟು ಏರಿಕೆಯಾಗಿ, 1,850 ಕೋಟಿ ರೂಪಾಯಿ ಆಗಿದೆ.

English summary

Reliance Q3 Results: Net profit dips 15 percent, Jio Net profit Up

Reliance Q3 Results: India’s most valued firm by market capitalisation, Reliance Industries Limited (RIL), on Friday reported a 15 per cent dip in its consolidated net profit year-on-year.
Story first published: Saturday, January 21, 2023, 10:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X