For Quick Alerts
ALLOW NOTIFICATIONS  
For Daily Alerts

ಫೋರ್ಬ್ಸ್: ಉದ್ಯೋಗದಾತ ಪಟ್ಟಿಯಲ್ಲಿ ಭಾರತಕ್ಕೆ ರಿಲಯನ್ಸ್ ಪ್ರಥಮ

|

ನವದೆಹಲಿ, ಅಕ್ಟೋಬರ್ 17: ಆದಾಯ, ಲಾಭ ಹಾಗೂ ಮಾರುಕಟ್ಟೆ ಮೌಲ್ಯದಲ್ಲಿ ಭಾರತದ ಅತಿ ದೊಡ್ಡ ಕಂಪೆನಿಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಫೋರ್ಬ್ಸ್ ಪ್ರಕಟಿಸಿರುವ 'ಜಗತ್ತಿನ ಅತ್ಯುತ್ತಮ ಉದ್ಯೋಗದಾತ' ಶ್ರೇಯಾಂಕ 2021ರಲ್ಲಿ ಭಾರತದ ಮುಂಚೂಣಿ ಕಂಪೆನಿಯಾಗಿ ಹೊರಹೊಮ್ಮಿದೆ.

 

ಫಿಲಿಪ್ಸ್, ಸೊನಾಫಿ, ಫೈಜರ್ ಮತ್ತು ಇಂಟೆಲ್ ಮುಂತಾದ 750 ಜಾಗತಿಕ ಕಾರ್ಪೊರೇಟ್ಗಳ ನಡುವೆ ಒಟ್ಟಾರೆಯಾಗಿ ರಿಲಯನ್ಸ್ 52ನೇ ಸ್ಥಾನ ಪಡೆದುಕೊಂಡಿದೆ.

ಫೋರ್ಬ್ಸ್‌ ಶ್ರೀಮಂತರ ಪಟ್ಟಿ: ಮುಕೇಶ್ ಅಂಬಾನಿಗೆ 10ನೇ ಸ್ಥಾನ

ಫೋರ್ಬ್ಸ್ ಶ್ರೇಯಾಂಕದಲ್ಲಿ ಟಾಪ್ 100ರ ಒಳಗೆ ಸ್ಥಾನ ಪಡೆದ ಭಾರತದ ಇತರೆ ಕಂಪೆನಿಗಳೆಂದರೆ, ಐಸಿಐಸಿಐ ಬ್ಯಾಂಕ್ 65ನೇ ಸ್ಥಾನದಲ್ಲಿ, ಎಚ್ಡಿಎಫ್ಸಿ ಬ್ಯಾಂಕ್ 77ನೇ ಸ್ಥಾನದಲ್ಲಿ ಮತ್ತು ಎಚ್ಸಿಎಲ್ ಟೆಕ್ನಾಲಜೀಸ್ 90ನೇ ಸ್ಥಾನ. ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) 119 ಮತ್ತು ಲಾರ್ಸೆನ್ ಆಂಡ್ ಟೌಬ್ರೊ 127ನೇ ಸ್ಥಾನದಲ್ಲಿವೆ. ಹಾಗೆಯೇ ಇನ್ಫೋಸಿಸ್ 588, ಟಾಟಾ ಗ್ರೂಪ್ 746 ಮತ್ತು ಜೀವ ವಿಮಾ ನಿಗಮ (ಎಲ್ಐಸಿ) 504ನೇ ಸ್ಥಾನ ಪಡೆದಿವೆ.

ವಿಐ ಮತ್ತು ಜಿಯೋ 249 ರೂ. ಪ್ರಿಪೇಯ್ಡ್‌ ಯೋಜನೆ: ಯಾವುದು ಬೆಸ್ಟ್ ತಿಳಿದುಕೊಳ್ಳಿ

ಈ ಶ್ರೇಯಾಂಕವು ಬೃಹತ್ ಪ್ರಮಾಣದ ಸಮೀಕ್ಷೆಯ ಆಧಾರದಲ್ಲಿ ನಿರ್ಧಾರಿತವಾಗಿದ್ದು, ಉದ್ಯೋಗಿಗಳು ತಮ್ಮ ಉದ್ಯೋಗದಾತರಿಗೆ ವಿವಿಧ ವಿಭಾಗಗಳಲ್ಲಿ ರೇಟಿಂಗ್ ನೀಡಿರುತ್ತಾರೆ. ಅವುಗಳನ್ನು ಪರಿಗಣಿಸಿ ಶ್ರೇಯಾಂಕ ನಿಗದಿ ಮಾಡಲಾಗುತ್ತದೆ.

ಜಾಗತಿಕ ಶ್ರೇಯಾಂಕ ಪಟ್ಟಿ

ಜಾಗತಿಕ ಶ್ರೇಯಾಂಕ ಪಟ್ಟಿ

ಜಾಗತಿಕ ಶ್ರೇಯಾಂಕದಲ್ಲಿ ದಕ್ಷಿಣ ಕೊರಿಯಾದ ದಿಗ್ಗಜ ಸಂಸ್ಥೆ ಸ್ಯಾಮ್ಸಂಗ್ ಮೊದಲ ಸ್ಥಾನದಲ್ಲಿದೆ. ಅದರ ನಂತರ ಅಮೆರಿಕದ ಐಬಿಎಂ, ಮೈಕ್ರೋಸಾಫ್ಟ್, ಅಮೇಜಾನ್, ಆಪಲ್, ಆಲ್ಫಾಬೆಟ್ ಮತ್ತು ಡೆಲ್ ಟೆಕ್ನಾಲಜೀಸ್ ಇವೆ. ಚೀನಾದ ಹುವೈ ಜಗತ್ತಿನ 8ನೇ ಅತ್ಯುತ್ತಮ ಉದ್ಯೋಗದಾತ ಎನಿಸಿಕೊಂಡಿದೆ.

ಮಾರುಕಟ್ಟೆ ಸಂಶೋಧನಾ ಕಂಪೆನಿ ಸ್ಟಾಟಿಸ್ಟಾ ಜತೆಗೂಡಿ, ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಸಂಸ್ಥೆಗಳಲ್ಲಿ ದುಡಿಯುತ್ತಿರುವ 58 ದೇಶಗಳಲ್ಲಿನ 1,50,000 ಪೂರ್ಣಾವಧಿ ಹಾಗೂ ಅರೆಕಾಲಿಕ ಕೆಲಸಗಾರರ ನಡುವೆ ಸಮೀಕ್ಷೆ ನಡೆಸಿ ಈ ಶ್ರೇಯಾಂಕವನ್ನು ನಿಗದಿಗೊಳಿಸಲಾಗಿದೆ ಎಂದು ಫೋರ್ಬ್ಸ್ ತಿಳಿಸಿದೆ.

ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವ ರಿಲಯನ್ಸ್

ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವ ರಿಲಯನ್ಸ್

ತೈಲದಿಂದ ಹಿಡಿದು ರೀಟೈಲ್‌ವರೆಗೂ ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವ ರಿಲಯನ್ಸ್, 2020-21ರ ಸಾಂಕ್ರಾಮಿಕ ವರ್ಷದಲ್ಲಿಯೂ 75,000 ಹೊಸ ಉದ್ಯೋಗಗಳಿಗೆ ನೇಮಕಾತಿ ಮಾಡಿಕೊಂಡಿದೆ.

ಈ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಇತರೆ ಕಂಪೆನಿಗಳೆಂದರೆ ಬಜಾಜ್ (215), ಆಕ್ಸಿಸ್ ಬ್ಯಾಂಕ್ (254), ಇಂಡಿಯನ್ ಬ್ಯಾಂಕ್ (314), ಒಎನ್ಜಿಸಿ (404), ಅಮರ ರಾಜಾ ಸಮೂಹ (405), ಕೊಟಕ್ ಮಹೀಂದ್ರಾ ಬ್ಯಾಂಕ್ (418), ಬ್ಯಾಂಕ್ ಆಫ್ ಇಂಡಿಯಾ (451), ಐಟಿಸಿ (453), ಸಿಪ್ಲಾ (460) ಮತ್ತು ಬ್ಯಾಂಕ್ ಆಫ್ ಬರೋಡಾ (496).

ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಪ್ರಗತಿ
 

ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಪ್ರಗತಿ

ರಿಲಯನ್ಸ್ ಇಂಡಸ್ಟ್ರೀಸ್ ಗ್ರೂಪ್‌ನ ಅಂಗಸಂಸ್ಥೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ಆರ್‌ವಿಎಲ್ )ಯಾಗಿದೆ. ರಿಲಯನ್ಸ್ ರೀಟೇಲ್ ಭಾರತದ ಅತಿದೊಡ್ಡ ಮತ್ತು ಹೆಚ್ಚು ಲಾಭದಾಯಕ ರೀಟೇಲ್ ಕಂಪನಿ. ಡೆಲೋಯಿಟ್ ಗ್ಲೋಬಲ್ ಪವರ್ಸ್ ವಿಶ್ವದ ವೇಗವಾಗಿ ಬೆಳೆಯುತ್ತಿರುವ ರೀಟೇಲ್ ವ್ಯಾಪಾರಿಗಳಲ್ಲಿ ಒಂದಾಗಿದೆ. ರೀಟೇಲ್ ಮಾರಾಟ 2021 ಸೂಚ್ಯಂಕದಲ್ಲಿ 53 ನೇ ಸ್ಥಾನದಲ್ಲಿರುವ ಏಕೈಕ ಭಾರತೀಯ ಕಂಪನಿ ಇದಾಗಿದೆ.

ಉದ್ಯೋಗಿ, ವರ್ತಕರ ಪರ ನಿಂತ ರಿಲಯನ್ಸ್

ಉದ್ಯೋಗಿ, ವರ್ತಕರ ಪರ ನಿಂತ ರಿಲಯನ್ಸ್

ಕೋವಿಡ್‌ಗೆ ಬಲಿಯಾದ ತನ್ನ ಉದ್ಯೋಗಿಗಳ ಮಕ್ಕಳು ಭಾರತದ ಯಾವುದೇ ಶಿಕ್ಷಣ ಸಂಸ್ಥೆಯಿಂದ ಪದವಿ ಶಿಕ್ಷಣ ಪೂರೈಸುವವರೆಗೂ ಅವರ ಟ್ಯೂಷನ್, ಪುಸ್ತಕ ಮತ್ತು ಹಾಸ್ಟೆಲ್ ವಸತಿ ವೆಚ್ಚಗಳನ್ನು ರಿಲಯನ್ಸ್ ಭರಿಸಲಿದೆ. ಮೃತಪಟ್ಟ ರೋಗಿಗಳ ಸಂಗಾತಿ, ಪೋಷಕರು ಮತ್ತು ಮಕ್ಕಳ ಪದವಿ ಪೂರೈಸುವವರೆಗಿನ ಅವಧಿಯವರೆಗೆ ಆಸ್ಪತ್ರೆ ದಾಖಲೀಕರಣದ ಮೇಲೆ ಶೇ 100ರಷ್ಟು ವಿಮೆ ಪ್ರೀಮಿಯಂಅನ್ನು ಹೆಚ್ಚುವರಿಯಾಗಿ ತುಂಬಿದೆ.

ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರೂ ಸೇರಿದಂತೆ ಭಾರತದಾದ್ಯಂತ 1.3 ಶತಕೋಟಿ ಜನರು ಹಾಗೂ ಉದ್ಯಮಗಳಿಗೆ ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ. ಕಿರಾಣಿ ಅಂಗಳಿಗಳಿಂದ ಹಿಡಿದು ಎಲ್ಲಾ ವಿಭಾಗದ ವರ್ತಕರನ್ನು ತಲುಪುವ ಗುರಿಯನ್ನು ಜಿಯೋ ಹೊಂದಿದೆ.

ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು

ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು

ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿರುವ ತನ್ನ ಡಿಜಿಟಲ್ ಇಕೋಸಿಸ್ಟಂನಾದ್ಯಂತ ಜಿಯೋ ಪ್ಲಾಟ್‌ಫಾರ್ಮ್ಸ್ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ. ಒಳಗೊಳ್ಳುವ ಬೆಳವಣಿಗೆಯ ಫಲಗಳನ್ನು ಎಲ್ಲರೂ ಆನಂದಿಸುವಂತೆ ಮಾಡಲು, ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರೂ ಸೇರಿದಂತೆ ಭಾರತದಾದ್ಯಂತ 1.3 ಶತಕೋಟಿ ಜನರು ಹಾಗೂ ಉದ್ಯಮಗಳಿಗೆ ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ.

English summary

Reliance tops India Inc in World's Best Employer rankings 2021

Reliance Industries, the country's largest company by revenues, profits and market value, has topped Indian corporates in the World's Best Employers rankings 2021 published by Forbes.
Story first published: Sunday, October 17, 2021, 12:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X