ಬೆಳವಣಿಗೆ ನಿಧಾನಗೊಳಿಸುವ ರೆಪೋ ದರ ಏರಿಕೆ: ಹಣಕಾಸು ಕಾರ್ಯದರ್ಶಿ
ಹಣದುಬ್ಬರವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು ಏರಿಕೆ ಮಾಡಿದೆ. ಇದರಿಂದಾಗಿ ದೇಶದ ಬೆಳವಣಿಗೆ ದರವು ಕೊಂಚ ಕುಗ್ಗಬಹುದು. ಕೇಂದ್ರ ಬ್ಯಾಂಕ್‌ನ ಕ್ರಮದಿಂದಾಗಿ ಬೇಡಿಕೆಯು ಮಧ್ಯಮವಾಗುವ ನಿರೀಕ್ಷೆಯಿದೆ ಎಂದು ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಹೇಳಿದ್ದಾರೆ.
"ಬಡ್ಡಿ ದರಗಳು ಹೆಚ್ಚಾದಾಗ, ಬೇಡಿಕೆಯು ಮಧ್ಯಮವಾಗುವ ನಿರೀಕ್ಷೆಯಿದೆ ಮತ್ತು ಇದು ಬಡ್ಡಿದರಗಳನ್ನು ಹೆಚ್ಚಿಸುವ ಒಂದು ಭಾಗವಾಗಿದೆ," ಎಂದು ತಿಳಿಸಿದ್ದಾರೆ. ಹಾಗೆಯೇ ಇದೇ ಸಂದರ್ಭದಲ್ಲಿ ಇದರ ಹೊರತಾಗಿಯೂ ಭಾರತವು ಇನ್ನೂ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ," ಎಂದು ಮಾಹಿತಿ ನೀಡಿದರು.
ರೆಪೋ ದರವನ್ನು ಏರಿಕೆ ಮಾಡಿದ ಆರ್‌ಬಿಐ
"ಹಣದುಬ್ಬರವನ್ನು ನಾವು ಸರಿದೂಗಿಸಲು ಬಡ್ಡಿ ದರವು ಒಂದು ವಿತ್ತೀಯ ನೀತಿ ಸಾಧನವಾಗಿದೆ," ಎಂದು ಹೇಳಿರುವ ಅಧಿಕಾರಿ, ದೇಶದ ಬೆಳವಣಿಗೆ ದರವು ಕೊಂಚ ನಿಧಾನವಾಗಬಹುದು ಎಂದಿದ್ದಾರೆ. ಮೇ 4ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು 40 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳ ಮಾಡಿದೆ.

"ಸರ್ಕಾರವು ಎಲ್ಲಾ ಸಮಯದಲ್ಲೂ ಆರ್‌ಬಿಐನೊಂದಿಗೆ ನಿರಂತರ ಚರ್ಚೆ ನಡೆಸುತ್ತಿದೆ. ಒಳ್ಳೆಯ ಸಮಯಗಳು, ಕೆಟ್ಟ ಸಮಯಗಳು, ಸಾಮಾನ್ಯ ಸಮಯಗಳು ಮತ್ತು ಅಸಹಜ ಸಮಯಗಳು ಸರ್ಕಾರವು ಆರ್‌ಬಿಐ ಜೊತೆ ಚರ್ಚೆ ನಡೆಸಲಿದೆ. ಆಗುಹೋಗುಗಳ ಬಗ್ಗೆ ತಿಳಿದಿರುತ್ತದೆ," ಎಂದು ಹೇಳಿದರು.
ರಸಗೊಬ್ಬರ (ಸುಮಾರು ರೂಪಾಯಿ 1 ಟ್ರಿಲಿಯನ್) ಮತ್ತು ಆಹಾರ (H1 ನಲ್ಲಿ ಉಚಿತ ಧಾನ್ಯಗಳ ಯೋಜನೆಯಲ್ಲಿ ರೂಪಾಯಿ 0.8 ಟ್ರಿಲಿಯನ್) ಮೇಲಿನ ಸಬ್ಸಿಡಿಗಳ ಮೇಲೆ ಸುಮಾರು 1.8 ಟ್ರಿಲಿಯನ್ ಹೆಚ್ಚುವರಿ ವೆಚ್ಚದ ಸಾಧ್ಯತೆಯ ಹೊರತಾಗಿಯೂ ಈ ಹಂತದಲ್ಲಿ ಹಣಕಾಸಿನ ನೀತಿಯಲ್ಲಿ ಮೂಲಭೂತ ಬದಲಾವಣೆಗೆ ಯಾವುದೇ ಕಾರಣ ಕಂಡುಬಂದಿಲ್ಲ ಎಂದು ಸೋಮನಾಥನ್ ಹೇಳಿದರು. "ಕೆಲವು ಬದಲಾವಣೆಗಳು ಸಂಭವಿಸಿದೆ. ಆದರೆ ಬದಲಾವಣೆಗಳು ಖರ್ಚು ಮತ್ತು ಆದಾಯದ ಎರಡೂ ಒಂದೇ ತರನಾಗಿದೆ," ಎಂದು ಕೂಡಾ ಹೇಳಿದರು.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ದಿಡೀರ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಆರ್‌ಬಿಐ ರೆಪೋ ದರವನ್ನು ಶೇಕಡ 4.40ಕ್ಕೆ ಹೆಚ್ಚಿಸಲು ಸರ್ವಾನುಮತದಿಂದ ನಿರ್ಧರಿಸಿದೆ. ಈ ಹಿಂದೆ ರೆಪೋ ದರವು ಶೇಕಡ 4ರಲ್ಲೇ ಉಳಿಸಿಕೊಳ್ಳಲಾಗಿತ್ತು. ಆದರೆ ಈಗ ರೆಪೋ ದರವನ್ನು ಏರಿಕೆ ಮಾಡಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಪಾಲಿಸಿ ರೆಪೊ ದರಗಳನ್ನು 40 ಬಿಪಿಎಸ್‌ಗಳಷ್ಟು ಹೆಚ್ಚಿಸಲು ಎಂಪಿಸಿ ಸರ್ವಾನುಮತದಿಂದ ಮತ ಹಾಕಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.