For Quick Alerts
ALLOW NOTIFICATIONS  
For Daily Alerts

Breaking news: ಜುಲೈನಲ್ಲಿ ರಿಟೇಲ್ ಹಣದುಬ್ಬರ ಶೇಕಡ 6.71ಕ್ಕೆ ಇಳಿಕೆ

|

ದೇಶದಲ್ಲಿ ಜುಲೈ ತಿಂಗಳಿನಲ್ಲಿ ರಿಟೇಲ್ ಹಣದುಬ್ಬರವು ಇಳಿಕೆಯಾಗಿದೆ. ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ರಿಟೇಲ್ ಹಣದುಬ್ಬರ ಶೇಕಡ 6.71ಕ್ಕೆ ಇಳಿದಿದ್ದು, ಮಾರ್ಚ್ ಬಳಿಕ ಮೊದಲ ಬಾರಿಗೆ ರಿಟೇಲ್ ಹಣದುಬ್ಬರ ಇಷ್ಟು ಕೆಳಕ್ಕೆ ಇಳಿದಿದೆ.

 

ಸಿಪಿಐ ಆಧಾರಿತ ರಿಟೇಲ್ ಹಣದುಬ್ಬರವು ಜೂನ್‌ನಲ್ಲಿ ಶೇಕಡ 7.01 ರಷ್ಟಿತ್ತು. ಸತತ ಆರನೇ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಅಂದಾಜು ಮಿತಿಯನ್ನು ಹಣದುಬ್ಬರ ಮೀರಿತ್ತು. ಈಗ ಸತತ ಏಳನೇ ತಿಂಗಳಿನಲ್ಲಿ ಆರ್‌ಬಿಐ ಮಿತಿಗಿಂತ ರಿಟೇಲ್ ಹಣದುಬ್ಬರ ಅಧಿಕವಾಗಿದೆ.

 

ಕಳೆದ ತಿಂಗಳಿನಿಂದ ಆಹಾರ ಹಾಗೂ ತೈಲದ ದರವು ಕೊಂಚ ಇಳಿಕೆಯಾಗುತ್ತಿದೆ. ಆದರೆ ಈ ತಿಂಗಳಿನಲ್ಲಿ ಮತ್ತೆ ದರ ಅಧಿಕವಾಗಿಯೇ ಉಳಿಯುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.

Breaking news: ಜುಲೈನಲ್ಲಿ ರಿಟೇಲ್ ಹಣದುಬ್ಬರ ಶೇಕಡ 6.71ಕ್ಕೆ ಇಳಿಕೆ

ಉಕ್ರೇನ್ ರಷ್ಯಾ ಯುದ್ಧದ ಬಳಿಕ ಮೊದಲ ಬಾರಿಗೆ ಬ್ರೆಂಟ್ ಕಚ್ಚಾ ತೈಲ ದರವು ಶೇಕಡ 9ರಷ್ಟು ಕುಸಿದಿದೆ. ಬ್ಯಾರೆಲ್‌ಗೆ 125 ಡಾಲರ್‌ಗೂ ಅಧಿಕವಾಗಿದ್ದ ಬ್ರೆಂಟ್ ಕಚ್ಚಾ ತೈಲ ದರವು ಈಗ ಬ್ಯಾರೆಲ್‌ಗೆ 100 ಡಾಲರ್‌ಗೂ ಕಡಿಮೆಯಾಗಿದೆ.

ಸರ್ಕಾರವು ಆಮದು ಸುಂಕವನ್ನು ಅಧಿಕ ಮಾಡಿರುವುದು ಹಾಗೂ ಗೋಧಿ ರಫ್ತಿನ ಮೇಲೆ ನಿರ್ಬಂಧ ಹೇರಿದ್ದು ರಿಟೇಲ್ ಹಣದುಬ್ಬರ ಇಳಿಕೆಗೆ ಸಹಾಯಕವಾಗಿರುವ ಸಾಧ್ಯತೆ ಇದೆ. ಆದರೂ ರಿಟೇಲ್ ಹಣದುಬ್ಬರವು ಆರ್‌ಬಿಐನ ಮಿತಿಗಿಂತ ಅಧಿಕವಾಗಿಯೇ ಉಳಿದಿದೆ.

English summary

Retail Inflation Eased To 6.71 Percent In July

Retail inflation, based on the consumer price index (CPI), Eased To 6.71 percent in July, Lowest Since March.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X