For Quick Alerts
ALLOW NOTIFICATIONS  
For Daily Alerts

ಭಾರತದ ಆರ್ಥಿಕತೆಗೆ ಸಿಹಿಸುದ್ದಿ: ರಿಟೇಲ್ ಹಣದುಬ್ಬರ ಕುಸಿತ, ದರ ಇಳಿಕೆ

|

ಹಲವಾರು ತಿಂಗಳುಗಳಿಂದ ಭಾರತದಲ್ಲಿ ರಿಟೇಲ್ ಹಣದುಬ್ಬರ ಹಾಗೂ ಇತರೆ ಆರ್ಥಿಕ ಸ್ಥಿತಿಯು ಶೋಚನೀಯ ಸ್ಥಿತಿಯಲ್ಲಿತ್ತು. ರಿಟೇಲ್ ಹಣದುಬ್ಬರ ಹೆಚ್ಚಾದಂತೆ, ಮಾರುಕಟ್ಟೆಯಲ್ಲಿ ರೂಪಾಯಿ ತನ್ನ ಮೌಲ್ಯವನ್ನು ಕಳೆದುಕೊಂಡತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದರ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ಮುಂದಾಯಿತು.

ಆರ್‌ಬಿಐನ ಕ್ರಮದ ಭಾಗವಾಗಿ ಪ್ರಸ್ತುತ ಸುಮಾರು 5 ಬಾರಿ ರೆಪೋ ದರವನ್ನು ಹೆಚ್ಚಳ ಮಾಡಲಾಗಿದೆ. ಈ ರೆಪೋ ದರ ಏರಿಕೆಯ ಪ್ರಭಾವವು ಪರೋಕ್ಷವಾಗಿ ಜನರ ಮೇಲೆಯೂ ಬಿದ್ದಿದೆ. ಗೃಹ, ಮೊದಲಾದ ರೆಪೋ ಆಧಾರಿತ ಬಡ್ಡಿದರದಲ್ಲಿ ಸಾಲ ಪಡೆದವರು ಇಎಂಐ ಹೊರೆಯನ್ನು ಹೊರಲಾಗದೆ ಆರ್ಥಿಕ ಬಿಕ್ಕಟ್ಟಿಗೆ ತಲುಪಿದ್ದಾರೆ. ಈ ನಡುವೆ ಪಾಕಿಸ್ತಾನ, ಶ್ರೀಲಂಕಾದಂತೆಯೇ ಭಾರತದ ಸ್ಥಿತಿಯಾಗುವ ಆತಂಕ ಎದುರಾಗಿತ್ತು.

ಗಗನಕ್ಕೇರಿದ ಬೆಲೆಗಳು: ಮಧ್ಯಮ, ಬಡ ಕುಟುಂಬ ತತ್ತರಗಗನಕ್ಕೇರಿದ ಬೆಲೆಗಳು: ಮಧ್ಯಮ, ಬಡ ಕುಟುಂಬ ತತ್ತರ

ಈ ಎಲ್ಲ ಬೆಳವಣಿಗೆಯ ನಡುವೆ ಭಾರತದ ಆರ್ಥಿಕತೆಗೆ ಸಿಹಿಸುದ್ದಿ ಇದೆ. ಹೌದು, ಸತತ ಎರಡನೇ ತಿಂಗಳು ರಿಟೇಲ್ ಹಣದುಬ್ಬರವು ಇಳಿಕೆಯಾಗಿದೆ. ಅಂದರೆ ಭಾರತದಲ್ಲಿ ವಸ್ತುಗಳ ದರವು ಇಳಿಕೆಯಾಗುತ್ತಿದೆ ಎಂದು ಅರ್ಥವಾಗಿದೆ. ಪ್ರಮುಖ ವಲಯದಲ್ಲಿ ಬೆಳವಣಿಗೆ ಕಂಡುಬಂದಿದೆ. ಈ ನಡುವೆ ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಭಾರತವು ಮುಂದಿನ 7 ವರ್ಷದಲ್ಲೇ 7 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ತಿಳಿಸಿದ್ದಾರೆ. ಭಾರತದ ಆರ್ಥಿಕತೆ ಚೇತರಿಕೆಗೆ ಕಾರಣವಾದ ಪ್ರಮುಖ ಸಿಹಿಸುದ್ದಿಗಳನ್ನು ನಾವು ತಿಳಿಯೋಣ ಮುಂದೆ ಓದಿ....

ಪ್ರಮುಖ ವಸ್ತುಗಳ ದರ ಇಳಿಕೆ

ಪ್ರಮುಖ ವಸ್ತುಗಳ ದರ ಇಳಿಕೆ

ಡಿಸೆಂಬರ್‌ನಲ್ಲಿ ಭಾರತದಲ್ಲಿ ರಿಟೇಲ್ ಹಣದುಬ್ಬರವು ಶೇಕಡ 5.72ಕ್ಕೆ ಇಳಿಕೆಯಾಗಿದೆ. ಪ್ರಮುಖವಾಗಿ ದೇಶದಲ್ಲಿ ಆಹಾರ ಸಾಮಾಗ್ರಿಗಳ, ವಸ್ತುಗಳ ಬೆಲೆಯು ಇಳಿಯುತ್ತಿದೆ. ಇದರಿಂದಾಗಿ ರಿಟೇಲ್ ಹಣದುಬ್ಬರವು ಕುಸಿಯುತ್ತಿದೆ. ಡಿಸೆಂಬರ್‌ನಲ್ಲಿ ಆಹಾರ ಹಾಗೂ ಪಾನೀಯಗಳ ಬೆಲೆಯು ಇಳಿದಿದೆ. ಇದರಿಂದಾಗಿ ಕಳೆದ ಒಂದು ವರ್ಷದಲ್ಲೇ ಡಿಸೆಂಬರ್‌ನಲ್ಲಿ ಹಣದುಬ್ಬರ ಭಾರೀ ಇಳಿಕೆಯಾಗಿದೆ. ಈ ನಡುವೆ ಆಹಾರ ಹಣದುಬ್ಬರವು ಕೂಡಾ ಇಳಿಕೆಯಾಗಿದೆ. ಸತತ ಎರಡನೇ ತಿಂಗಳು ಹಣದುಬ್ಬರ ಕುಸಿದಿದೆ. 2022 ಅಕ್ಟೋಬರ್‌ನಲ್ಲಿ ಶೇಕಡ 6.77ರಷ್ಟಿದ್ದ ಹಣದುಬ್ಬರ, ನವೆಂಬರ್‌ನಲ್ಲಿ ಶೇಕಡ 5.88ಕ್ಕೆ ಇಳಿದಿದೆ. ಆ ಬಳಿಕ ಡಿಸೆಂಬರ್‌ನಲ್ಲಿ ಮತ್ತೆ ಹಣದುಬ್ಬರ ಇಳಿದು ಶೇಕಡ 5.72ಕ್ಕೆ ತಲುಪಿದೆ.

ಉತ್ಪಾದನೆ ಮೌಲ್ಯ ಏರಿಕೆ

ಉತ್ಪಾದನೆ ಮೌಲ್ಯ ಏರಿಕೆ

ಭಾರತದಲ್ಲಿ ಉತ್ಪಾದನೆ ಹೆಚ್ಚಳವಾಗಿದೆ. ಪ್ರಮುಖವಾಗಿ ಇಂಡಸ್ಟ್ರಿಯಲ್ ಉತ್ಪಾದನೆ ಹಿಗ್ಗಿದೆ. ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ಶೇಕಡ 7.1ರಷ್ಟು ಉತ್ಪಾದನೆ ಏರಿಕೆಯಾಗಿದೆ. ಐಐಪಿ (Index of Industrial Production) ಶೇಕಡ 1ರಷ್ಟು ಏರಿಕೆಯನ್ನು ಕಂಡಿದೆ. ನವೆಂಬರ್‌ನಲ್ಲಿ ಉತ್ಪಾದನಾ ವಲಯದಲ್ಲಿ ಶೇಕಡ 6.1ರಷ್ಟು ಉತ್ತಮ ಬೆಳವಣಿಗೆ ಕಂಡು ಬಂದಿದೆ. ಹಾಗೆಯೇ ಗಣಿಗಾರಿಕೆ ಶೇಕಡ 9.7ರಷ್ಟು ಏರಿದೆ. ಶಕ್ತಿ ಉತ್ಪಾದನೆ ಶೇಕಡ 12.7ರಷ್ಟು ಏರಿಕೆಯಾಗಿದೆ.

ಹೊಸ ದಾಖಲೆ ಸೃಷ್ಟಿ

ಹೊಸ ದಾಖಲೆ ಸೃಷ್ಟಿ

ಭಾರತದ ಗೋಧಿ ಉತ್ಪಾದನೆಯು ಹೊಸ ದಾಖಲೆ ಸೃಷ್ಟಿ ಮಾಡುವ ಸಾಧ್ಯತೆಯಿದೆ. 2022-23ರಲ್ಲಿ (ಜುಲೈ-ಜೂನ್‌) ಸುಮಾರು 112 ಮಿಲಿಯನ್ ಟನ್‌ಗೂ ಅಧಿಕ ಗೋಧಿ ಉತ್ಪಾದನೆಯಾಗುವ ಮೂಲಕ ಹೊಸ ದಾಖಲೆ ಬರೆಯುವ ನಿರೀಕ್ಷೆಯಿದೆ. ಈ ಹಿಂದೆ 2020-21ರಲ್ಲಿ ಗೋಧಿ ಉತ್ಪಾದನೆಯಲ್ಲಿ ದಾಖಲೆಯನ್ನು ಸೃಷ್ಟಿ ಮಾಡಲಾಗಿತ್ತು. ಸುಮಾರು 109.59 ಮಿಲಿಯನ್ ಟನ್ ಗೋಧಿ ಉತ್ಪಾದನೆಯಾಗಿತ್ತು. 2021-22ರಲ್ಲಿ ದೇಶದಲ್ಲಿ ಗೋಧಿ ಉತ್ಪಾದನೆಯು ಇಳಿಕೆಯಾಗಿತ್ತು. ಸುಮಾರು 106.84 ಮಿಲಿಯನ್ ಟನ್‌ಗೆ ಗೋಧಿ ಉತ್ಪಾದನೆ ಕುಸಿದಿತ್ತು. ಅಕ್ಟೋಬರ್‌ನಿಂದ ಗೋಧಿಯ ಬೆಳೆ ಬೆಳೆಯುವ ಪ್ರಕ್ರಿಯೆ ಆರಂಭವಾಗುತ್ತದೆ. ಮಾರ್ಚ್ -ಏಪ್ರಿಲ್‌ನಲ್ಲಿ ಕಟಾವು ನಡೆಯುತ್ತದೆ. ಜುಲೈ-ಜೂನ್‌ನಲ್ಲಿ ಸಂಪೂರ್ಣ ಉತ್ಪಾದನೆಯ ಲೆಕ್ಕಾಚಾರ ಲಭ್ಯವಾಗುತ್ತದೆ.

7 ಟ್ರಿಲಿಯನ್ ಡಾಲರ್ ಆರ್ಥಿಕತೆ

7 ಟ್ರಿಲಿಯನ್ ಡಾಲರ್ ಆರ್ಥಿಕತೆ

ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಗುರುವಾರ ಭಾರತದ ಆರ್ಥಿಕತೆಗೆ ಸಂಬಂಧಿಸಿದ ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಭಾರತದ ಆರ್ಥಿಕತೆಯು 2022-23 ಹಣಕಾಸು ವರ್ಷ ಅಂತ್ಯದಲ್ಲಿ 3.5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ನಿರೀಕ್ಷೆಯಿದೆ. ಮುಂದಿನ 7 ವರ್ಷದಲ್ಲಿ ಭಾರತದ ಆರ್ಥಿಕತೆಯು 7 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ವಿ ಅನಂತ ನಾಗೇಶ್ವರನ್ ತಿಳಿಸಿದ್ದಾರೆ. ಈ ಹಿಂದೆ ಸರ್ಕಾರವು ಭಾರತ 2025ರವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯವಾಗಲಿದೆ ಎಂದು ಹೇಳಿತ್ತು.

English summary

The good news for Indian economy: Retail inflation fell, India Expected to Become $7 Trillion Economy in 7 years

Retail inflation fell to 5.72% in December. India Expected to Become $7 Trillion Economy in 7 years says chief economic advisor V Anantha Nageswaran.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X