For Quick Alerts
ALLOW NOTIFICATIONS  
For Daily Alerts

ಮಾರುಕಟ್ಟೆ ಆರಂಭದಲ್ಲೇ ಡಾಲರ್ ವಿರುದ್ಧ ರುಪಾಯಿ ಭಾರಿ ಕುಸಿತ

|

ಭಾರತೀಯ ಕರೆನ್ಸಿ ಮೌಲ್ಯವನ್ನು 82ರ ಗಡಿಯಿಂದ ಮೇಲಕ್ಕೇರದಂತೆ ಹಿಡಿದಿಟ್ಟುಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಶುಕ್ರವಾರದಂದು ಮಾರುಕಟ್ಟೆ ಆರಂಭದಲ್ಲೇ ರುಪಾಯಿ ಕುಸಿತ ಕಂಡಿದೆ. ಯುಎಸ್ ಡಾಲರ್ ಎದುರು ರುಪಾಯಿ ಭಾರಿ ಕುಸಿತ ಕಂಡಿದ್ದು, ಪ್ರತಿ ಡಾಲರ್ ವಿರುದ್ಧ ರುಪಾಯಿ ಮೌಲ್ಯ 82.30 ರು ದಾಟಿದೆ.

ಬೆಳಗ್ಗೆ 9.30 ಗಂಟೆಗೆ, ಡಾಲರ್‌ ವಿರುದ್ಧ ಭಾರತೀಯ ಕರೆನ್ಸಿಯು 82.30 ರು ನಂತೆ ವಹಿವಾಟು ನಡೆಸುತ್ತಿದೆ, ಅದರ ಹಿಂದಿನ ಮುಕ್ತಾಯದ ಅವಧ್ಯಲ್ಲಿ 81.89 ಕ್ಕಿಂತ 0.5% ಕಡಿಮೆಯಾಗಿದೆ. ಕರೆನ್ಸಿ 82.19 ರಂತೆ ವಹಿವಾಟು ಪ್ರಾರಂಭವಾಯಿತು ಮತ್ತು ಸಾರ್ವಕಾಲಿಕ ಕನಿಷ್ಠ 82.33 ಅನ್ನು ಮುಟ್ಟಿದೆ.

ಹಬ್ಬದ ಋತುವಿನಲ್ಲಿ ಚಿನ್ನದ ಆಭರಣ ಮಾರಾಟ ಶೇ30 ರಷ್ಟು ಏರಿಕೆಹಬ್ಬದ ಋತುವಿನಲ್ಲಿ ಚಿನ್ನದ ಆಭರಣ ಮಾರಾಟ ಶೇ30 ರಷ್ಟು ಏರಿಕೆ

ರೂಪಾಯಿ ಮುಕ್ತ ಪತನ

ನಿನ್ನೆ ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಚೇತರಿಕೆ ಕಂಡಿತ್ತು. . ಬೆಳಗ್ಗೆ 9:51 IST ಕ್ಕೆ, ಬಿಎಸ್‌ಇ ಸೆನ್ಸೆಕ್ಸ್ 156.67 ಪಾಯಿಂಟ್‌ಗಳ ಇಳಿಕೆಯೊಂದಿಗೆ 58,065.43 ಕ್ಕೆ ಮತ್ತು ಎನ್‌ಎಸ್‌ಇ ನಿಫ್ಟಿ 44.15 ಪಾಯಿಂಟ್‌ಗಳ ಕುಸಿತದೊಂದಿಗೆ 17,287.65 ಕ್ಕೆ ತಲುಪಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಳಿತ ಕಾಣುತ್ತಿದೆ. ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರದಲ್ಲಿ ಬದಲಾವಣೆ ಆಗಿಲ್ಲ. ಈ ಹಿಂದೆ ಯುಎಸ್‌ನ ಬೆಂಚ್​​ಮಾರ್ಕ್​ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 70 ಡಾಲರ್‌ಗಳಷ್ಟು ಕುಸಿದಿತ್ತು.

ಮಾರುಕಟ್ಟೆ ಆರಂಭದಲ್ಲೇ ಡಾಲರ್ ವಿರುದ್ಧ ರುಪಾಯಿ ಭಾರಿ ಕುಸಿತ


ಹಾಗೇ, ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರಲ್‌ಗೆ 72 ರೂ. ಕಡಿಮೆಯಾಗಿತ್ತು. ಆದರೆ ರಷ್ಯಾ ಮತ್ತು ಉಕ್ರೇನ್‌ ಯುದ್ಧದ ನಡುವೆ ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರಲ್‌ಗೆ ನೂರರ ಗಡಿಯನ್ನು ದಾಟಿದೆ. ಈ ಸಮಯಕ್ಕೆ ಕುಗ್ಗಿ 94.30 ಯುಎಸ್ ಡಾಲರ್‌ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮ ತ್ತು ಡೀಸೆಲ್ ದರವನ್ನು ನೀಡುತ್ತವೆ.

ಒಪೆಕ್ ತೈಲ ಉತ್ಪಾದನೆ ಕಡಿತಕ್ಕೆ ಮುಂದಾಗಿರುವುದು, ರಷ್ಯಾ -ಉಕ್ರೇನ್ ನಡುವಿನ ಸಂಘರ್ಷ ಮುಂದುವರೆದಿರುವುದು ಕಚ್ಚಾತೈಲ ಬೆಲೆ ಮತ್ತೊಮ್ಮೆ 100 ಪ್ರತಿ ಬ್ಯಾರೆಲ್ ದಾಟುವ ಸಾಧ್ಯತೆಯಿದೆ ಎಂದು ಸಿಆರ್ ಫೊರೆಕ್ಸ್ ತಿಳಿಸಿದೆ. ವಿವಿಧ ದೇಶಗಳ ಕರೆನ್ಸಿ ವಿನಿಮಯ ದರ ತಿಳಿಯಲು ಕ್ಲಿಕ್ ಮಾಡಿ

English summary

Rupee falls 16 paise to all-time low of 82.33 against US dollar in early trade

Indian rupee on Friday weakened past 82 mark for the first time to hit a fresh record low against the US dollar amid a surge in crude and US bond yields.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X