For Quick Alerts
ALLOW NOTIFICATIONS  
For Daily Alerts

ಭಾರತಕ್ಕೆ ಎಲ್ ಪಿಜಿ ಪೂರೈಕೆ ಖಾತ್ರಿ ನೀಡಿದ ಸೌದಿ ಅರೇಬಿಯಾ

|

ಯಾವುದೇ ತೊಂದರೆ ಇಲ್ಲದಂತೆ ಎಲ್ ಪಿಜಿ (ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್) ಪೂರೈಸುವುದಾಗಿ ಸೌದಿ ಅರೇಬಿಯಾದಿಂದ ಖಾತ್ರಿ ಸಿಕ್ಕಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸೌದಿಯ ಇಂಧನ ಸಚಿವರು, ರಾಜಕುಮಾರ ಅಬ್ದುಲ್ ಅಜೀಜ್ ಬಿನ್ ಸಲ್ಮಾನ್ ಜತೆ ಚರ್ಚೆ ನಡೆಸಿದ ನಂತರ ಹೇಳಿದ್ದಾರೆ.

 

ಸೌದಿ ಅರಾಮ್ಕೋ ಸಿಇಒ ಜತೆ ಕೂಡ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ್ದಾಗಿ ಅವರು ತಿಳಿಸಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆ ಬೆಳವಣಿ ಮತ್ತು ಅನಿರ್ಬಂಧಿತವಾಗಿ ಎಲ್ ಪಿಜಿಯನ್ನು ಸೌದಿ ಅರೇಬಿಯಾದಿಂದ ಭಾರತಕ್ಕೆ ಪೂರೈಸುವ ಬಗ್ಗೆ ಚರ್ಚೆ ನಡೆಸಿದ್ದಾಗಿ ಪ್ರಧಾನ್ ಟ್ವೀಟ್ ಮಾಡಿದ್ದಾರೆ.

 

ನಮ್ಮ ದೇಶೀಯ ಅಗತ್ಯವನ್ನು ಪೂರೈಸಲು ಮುಂಬರುವ ದಿನಗಳಲ್ಲಿ ಎಲ್ ಪಿಜಿ ಪೂರೈಸುವುದಾಗಿ ಅಬ್ದುಲ್ ಅಜೀಜ್ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. ದೇಶದಾದ್ಯಂತ ಲಾಕ್ ಡೌನ್ ಇರುವುದರಿಂದ ತೈಲ ಬೇಡಿಕೆಯಲ್ಲಿ ಕುಸಿತವಾಗಿದೆ. ಅದೇ ವೇಳೆ ಅಡುಗೆ ಅನಿಲದ ಬೇಡಿಕೆ ಹೆಚ್ಚಾಗಿದೆ.

ಭಾರತಕ್ಕೆ ಎಲ್ ಪಿಜಿ ಪೂರೈಕೆ ಖಾತ್ರಿ ನೀಡಿದ ಸೌದಿ ಅರೇಬಿಯಾ

ಕೊರೊನಾ ವ್ಯಾಪಿಸದಿರುವಂತೆ ಎಚ್ಚರವಾಗಿರಲು ಕಳೆದ ಮಂಗಳವಾರದಿಂದ 21 ದಿನಗಳ ಕಾಲ ದೇಶದಾದ್ಯಂತ ಲಾಕ್ ಡೌನ್ ಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

English summary

Saudi Assured India Uninterrupted LPG Supply

During nation wide lock down in India, uninterrupted LPG supply assured by Saudi Arabia.
Story first published: Sunday, March 29, 2020, 18:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X