For Quick Alerts
ALLOW NOTIFICATIONS  
For Daily Alerts

ಗೃಹ ಸಾಲ ಬಡ್ಡಿ ದರ ಏರಿಕೆ ಮಾಡಿದ ಎಸ್‌ಬಿಐ

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲಗಳ ಬಡ್ಡಿ ದರವನ್ನು 0.30 ಪರ್ಸೆಂಟ್‌ರಷ್ಟು ಹೆಚ್ಚಿಸಿದೆ.

 

ಆಸ್ತಿ ಅಡಮಾನ ಇರಿಸಿ ಪಡೆಯುವ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವನ್ನೂ 0.30 ಪರ್ಸೆಂಟ್‌ರಷ್ಟು ಏರಿಕೆ ಮಾಡಿದೆ. ಈ ಹೊಸ ಬಡ್ಡಿ ದರಗಳು ಮೇ ತಿಂಗಳ 1ರಿಂದಲೇ ಅನ್ವಯಗೊಳ್ಳುತ್ತದೆ.

 
ಗೃಹ ಸಾಲ ಬಡ್ಡಿ ದರ ಏರಿಕೆ ಮಾಡಿದ ಎಸ್‌ಬಿಐ

ಕೊರೊನಾವೈರಸ್‌ದಿಂದಾಗಿ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ಬರಬೇಕಾದ ಆದಾಯದ ಮೂಲಗಳು ತಗ್ಗಿವೆ. ಹೀಗಾಗಿ ಸಾಲ ಮರುಪಾವತಿ ವಿಳಂಭವಾಗುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ರೆಪೊ ದರ ಆಧರಿಸಿದ ಸಾಲದ ಬಡ್ಡಿಗೆ ಅನ್ವಯಿಸುವ ಅಪಾಯದ ಹೊರೆಯನ್ನು 0.20 ಪರ್ಸೆಂಟ್ ಹೆಚ್ಚಿಸಿದೆ.

30 ಲಕ್ಷದಿಂದ 75 ಲಕ್ಷದವರೆಗಿನ ಸಾಲದ ಬಡ್ಡಿ ದರ 7.45 ಪರ್ಸೆಂಟ್‌ರಿಂದ 7.65 ಪರ್ಸೆಂಟ್‌ಗೆ ಏರಿಕೆಯಾಗಿದೆ. 75 ಲಕ್ಷ ಮೇಲ್ಪಟ್ಟ ಸಾಲದ ಬಡ್ಡಿದರವು 7.20 ಪರ್ಸೆಂಟ್‌ರಿಂದ 7.40 ಪರ್ಸೆಂಟ್‌ಗೆ ಹೆಚ್ಚಾಗಿದೆ. ಓವರ್‌ಡ್ರಾಫ್ಟ್‌ ಆಧರಿಸಿದ ಗೃಹಸಾಲದ ಬಡ್ಡಿದ ದರವನ್ನು 0.30 ಪರ್ಸೆಂಟ್ ಹೆಚ್ಚಿಸಲಾಗಿದೆ. ಎಸ್‌ಬಿಐ ಕೈಗೊಂಡ ಈ ನಿರ್ಧಾರವನ್ನು ಇತರೇ ಬ್ಯಾಂಕುಗಳು ಕೂಡ ಅನುಸರಿಸುವ ಸಾಧ್ಯತೆ ಇದೆ.

English summary

SBI Hikes Home Loan Rates

SBI raised its home loan rates that are linked to repo rate by up to 30 basis points, a move which may be followed by other lenders.
Story first published: Saturday, May 9, 2020, 16:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X