ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ)ದಿಂದ ಗೃಹ ಸಾಲದ ಮೇಲೆ ಬಡ್ಡಿ ದರಕ್ಕೆ ವಿನಾಯಿತಿಯನ್ನು ಹೆಚ್ಚಿಸಲಾಗಿದೆ ಎಂದು ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 30 ಲಕ್ಷ ರುಪಾಯಿಯೊಳಗಿನ ಸಾಲಕ್ಕೆ 6.80% ವಾರ್ಷಿಕ ಬಡ್ಡಿ ದರದಿಂದ ಆರಂಭವಾಗುತ್ತದೆ. 30 ಲಕ್ಷ ರುಪಾಯಿ ಮೇಲ್ಪಟ್ಟ ಸಾಲಕ್ಕೆ 6.95%ನಿಂದ ಶುರುವಾಗುತ್ತದೆ. ಆದರೆ ಈ ಬಡ್ಡಿ ದರವು CIBIL ಸ್ಕೋರ್ ಮೇಲೆ ಆಧಾರಪಟ್ಟಿರುತ್ತದೆ.
ಸಾಲದ ಮೊತ್ತ ಮತ್ತು CIBIL ಸ್ಕೋರ್ ಆಧಾರದಲ್ಲಿ ಬ್ಯಾಂಕ್ ನಿಂದ 0.30% ತನಕ ಗೃಹ ಸಾಲಕ್ಕೆ ಬಡ್ಡಿ ದರದಲ್ಲಿ ರಿಯಾಯಿತಿ ದೊರೆಯುತ್ತದೆ. 8 ಮೆಟ್ರೋ ನಗರಗಳಲ್ಲಿ 5 ಕೋಟಿ ರುಪಾಯಿಯೊಳಗಿನ ಸಾಲಕ್ಕೆ 0.30% ರಿಯಾಯಿತಿ ದೊರೆಯುತ್ತದೆ. ಮಹಿಳೆಯರು ಸಾಲ ಪಡೆದಲ್ಲಿ 0.05% ಹೆಚ್ಚುವರಿಯಾಗಿ ಬಡ್ಡಿದರದ ವಿನಾಯಿತಿ ಸಿಗುತ್ತದೆ.
ಶೇಕಡಾ 100ರಷ್ಟು ಪ್ರೊಸೆಸಿಂಗ್ ಶುಲ್ಕ ಮನ್ನಾ, ಬೇರೆ ಬ್ಯಾಂಕ್ ನಿಂದ ಸಾಲ ವರ್ಗಾವಣೆ ಮಾಡುವುದಾದರೆ 0.05% ವಿನಾಯಿತಿ, ಡಿಜಿಟಲ್ ಮೂಲಕ ಗೃಹ ಸಾಲಕ್ಕೆ ಅರ್ಜಿ ಹಾಕಿದರೆ 0.05% ರಿಯಾಯಿತಿ ದೊರೆಯುತ್ತದೆ.

ಗ್ರಾಹಕರು ಹೋಮ್ ಲೋನ್ ಗೆ ಅರ್ಜಿ ಹಾಕುವುದು ಹೇಗೆ?
ಪತ್ರಿಕಾ ಹೇಳಿಕೆ ಪ್ರಕಾರ, YONO App/https://homeloans.sbi / www.sbiloansin59minutes.comನಲ್ಲಿ ಅರ್ಜಿ ಹಾಕಿದರೆ ಹೆಚ್ಚುವರಿಯಾಗಿ 0.05% ಹೆಚ್ಚುವರಿ ಬಡ್ಡಿ ವಿನಾಯಿತಿ ದೊರೆಯುತ್ತದೆ. ಇನ್ನು ಈಗಾಗಲೇ ಎಸ್ ಬಿಐನಿಂದ ಸಾಲ ಪಡೆದವರಿಗೆ ಪ್ರೀ ಅಪ್ರೂವ್ಡ್ ಟಾಪ್ ಅಪ್ ಲೋನ್ ದೊರೆಯುತ್ತದೆ. YONO ಅಪ್ಲಿಕೇಷನ್ ಮೂಲಕ ಕೆಲವೇ ಕ್ಲಿಕ್ ನಲ್ಲಿ ಸಾಲ ಪಡೆಯಬಹುದು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications