For Quick Alerts
ALLOW NOTIFICATIONS  
For Daily Alerts

ಬ್ಲಿಂಕಿಟ್ ಖರೀದಿ ಬೆನ್ನಲ್ಲೇ ಜೊಮಾಟೊ ಷೇರು ಮೌಲ್ಯ ಭಾರೀ ಕುಸಿತ!

|

ದಿನಸಿ ಡೆಲಿವರಿ ಮಾಡುವ ಸ್ಟಾರ್ಟ್‌ಅಪ್‌ ಬ್ಲಿಂಕಿಟ್ ಅನ್ನು 4,447 ಕೋಟಿ ಡಾಲರ್‌ಗೆ ಖರೀದಿ ಮಾಡುವ ಒಪ್ಪಂದದ ನಂತರ ಆಹಾರ ವಿತರಣಾ ಸಂಸ್ಥೆ ಜೊಮ್ಯಾಟೊ ಭಾರೀ ಕುಸಿತ ಕಾಣುತ್ತಿದೆ. ಜೂನ್ 27ರಂದು ಶೇಕಡ 6ರಷ್ಟು ಕೆಳಕ್ಕೆ ಇಳಿದಿದ್ದ ಜೊಮ್ಯಾಟೊ ಷೇರುಗಳು ಮಂಗಳವಾರ ವಹಿವಾಟಿನ ಅಂತ್ಯದಲ್ಲಿ ಶೇಕಡ 8ರಷ್ಟು ಕೆಳಕ್ಕೆ ಇಳಿದಿದೆ.

 

ಸೋಮವಾರ ವಹಿವಾಟಿನ ಅಂತ್ಯದ ವೇಳೆಗೆ ಜೊಮ್ಯಾಟೊ ಷೇರುಗಳು ಶೇಕಡ 6.40ರಷ್ಟು ಕುಸಿತ ಕಂಡು 65.85 ರೂಪಾಯಿಗೆ ಸ್ಥಿರವಾಗಿದೆ. ಮತ್ತೆ ಮಂಗಳವಾರ ವಹಿವಾಟಿನ ಆರಂಭದಲ್ಲಿಯೂ ಜೊಮ್ಯಾಟೊ ಕೆಳಕ್ಕೆ ಇಳಿದಿದೆ. ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಜೊಮ್ಯಾಟೊ ಶೇ 6.38 ರಷ್ಟು ಕುಸಿದು ರೂಪಾಯಿ 61.65 ಕ್ಕೆ ವಹಿವಾಟು ಆರಂಭ ಮಾಡಿದೆ.

ಸೆನ್ಸೆಕ್ಸ್, ನಿಫ್ಟಿ ಏರಿಕೆ: ಎಲ್‌ಐಸಿ ಜಿಗಿತ, ಜೊಮ್ಯಾಟೊ ಭಾರೀ ಕುಸಿತ

ಮಂಗಳವಾರ ವಹಿವಾಟಿನ ಅಂತ್ಯದ ವೇಳೆಗೆ ಜೊಮ್ಯಾಟೊ ಷೇರು ಶೇಕಡ 8.35ರಷ್ಟು ಕುಸಿತ ಕಂಡಿದ್ದು, ರೂಪಾಯಿ 60.35ಕ್ಕೆ ತಲುಪಿದೆ. ಇತ್ತೀಚೆಗೆ ಜೊಮ್ಯಾಟೊ ಹಾಗೂ ಬ್ಲಿಂಕಿಟ್ ನಡುವೆ ಒಪ್ಪಂದ ನಡೆದಿದೆ. ಬ್ಲಿಂಕಿಟ್ ಅನ್ನು 4,447 ಕೋಟಿ ಡಾಲರ್‌ಗೆ ಖರೀದಿ ಮಾಡುವ ಒಪ್ಪಂದವನ್ನು ಜೊಮಾಟೊ ಮಾಡಿಕೊಂಡಿದೆ.

 ಬ್ಲಿಂಕಿಟ್ ಖರೀದಿ ಬೆನ್ನಲ್ಲೇ ಜೊಮಾಟೊ ಷೇರು ಮೌಲ್ಯ ಭಾರೀ ಕುಸಿತ!

ಆಗಸ್ಟ್‌ನಲ್ಲಿ ಜೊಮಾಟೊ ಬ್ಲಿಂಕಿಟ್‌ನೊಂದಿಗೆ ಸುಮಾರು 518 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಬ್ಲಿಂಕಿಟ್‌ನಲ್ಲಿ ಶೇಕಡ ಒಂಬತ್ತಕ್ಕಿಂತ ಅಧಿಕ ಪಾಲನ್ನು ಖರೀದಿ ಮಾಡಿತ್ತು. ಬಳಿಕ ಈಗ ಬ್ಲಿಂಕಿಟ್ ಕಂಪನಿಯನ್ನೇ ಜೊಮಾಟೊ ಖರೀದಿ ಮಾಡಿದೆ. ಅದಾದ ಬೆನ್ನಲ್ಲೇ ಜೊಮಾಟೊ ಷೇರುಗಳು ಭಾರೀ ಇಳಿಕೆ ಕಂಡಿದೆ.

ಒಟ್ಟಾರೆಯಾಗಿ 7,678 ಕೋಟಿ ರೂಪಾಯಿ ನಷ್ಟ!

ಈ ಹಿಂದೆ 2021ರ ಜುಲೈ 23ರಂದು ಜೊಮಾಟೊ ಷೇರುಗಳು ಲೀಸ್ಟಿಂಗ್ ಆಗಿದೆ. ಆದರೆ ನವೆಂಬರ್‌ 16ರಂದು ಮೂಲ ಬೆಲೆಯಿಂದ ಶೇಕಡ 61ರಷ್ಟು ಕುಸಿದು, ಸಾರ್ವಕಾಲಿಕ ಕುಸಿತ ದಾಖಲಿಸಿದೆ. ಇನ್ನು ಈಗ ಬ್ಲಿಂಕಿಟ್ ಖರೀದಿ ಆಫರ್ ಅನ್ನು ಘೋಷಣೆ ಮಾಡಿದ ಬೆನ್ನಲ್ಲೇ ಜೊಮಾಟೊ ಷೇರುಗಳು ಶೇಕಡ 14ರಷ್ಟು ಕುಸಿತ ಕಂಡಿದೆ. ಒಟ್ಟಾರೆಯಾಗಿ ಸಂಸ್ಥೆಯ ಮೌಲ್ಯ ಸುಮಾರು 7,678 ಕೋಟಿ ರೂಪಾಯಿಯಷ್ಟು ಕುಸಿತವಾಗಿದೆ.

 

ಷೇರು ಮಾರುಕಟ್ಟೆಯನ್ನು ಪ್ರವೇಶ ಮಾಡಿದ ಬಳಿಕ ಅಂದರೆ ಕಳೆದ ಜುಲೈನಿಂದ ಈವರೆಗೆ ಜೊಮಾಟೊ ಷೇರು ಮೌಲ್ಯ ಶೇಕಡ 48ರಷ್ಟು ಕುಸಿತ ಕಂಡಿದೆ. ಈ ನಡುವೆ ಪ್ರತಿಸ್ಪರ್ಧಿಗಳಾದ ಸ್ವಿಗ್ಗಿ, ಡಂಜೊ, ಬಿಗ್ ಬಾಸ್ಕೆಟ್, ಜೆಪ್ಟೊ ಬೆಳವಣಿಗೆ ಕಾಣುತ್ತಿದೆ.

English summary

Shares of Zomato Slid for the Second Day After Blinkit Deal, Down Over 7.5 Percent

Shares of Zomato slid for the second day after acquiring instant grocery startup Blinkit, down over 7.5 per cent in Tuesday trade. Know more.
Story first published: Tuesday, June 28, 2022, 18:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X