For Quick Alerts
ALLOW NOTIFICATIONS  
For Daily Alerts

10 ರು. ಮುಖಬೆಲೆ ಷೇರಿಗೆ 140 ರು. ಡಿವಿಡೆಂಡ್ ಘೋಷಿಸಿದ ಕ್ಲಾರಿಯೆಂಟ್ ಕೆಮಿಕಲ್ಸ್

|

ಕ್ಲಾರಿಯೆಂಟ್ ಕೆಮಿಕಲ್ಸ್ ಕಂಪೆನಿಯಿಂದ ವಿಶೇಷ ಮಧ್ಯಂತರ ಲಾಭಾಂಶ (ಸ್ಪೆಷಲ್ ಇಂಟರಿಮ್ ಡಿವಿಡೆಂಡ್) ಆಗಿ ಪ್ರತಿ ಷೇರಿಗೆ 140 ರುಪಾಯಿ ಘೋಷಣೆ ಮಾಡಲಾಗಿದೆ. ಕಂಪೆನಿಯ ಪೇಯ್ಡ್ ಅಪ್ ಷೇರು ಬಂಡವಾಳದ 1400 ಪರ್ಸೆಂಟ್ ನಷ್ಟು ಡಿವಿಡೆಂಡ್ ಘೋಷಣೆ ಮಾಡಿದಂತಾಗಿದೆ. ಈ ವಿಶೇಷ ಮಧ್ಯಂತರ ಲಾಭಾಂಶವನ್ನು ಜುಲೈ 19, 2020ರೊಳಗೆ ಅಥವಾ ನಂತರ ಪಾವತಿಸಬಹುದು.

ಡಿವಿಡೆಂಡ್ ಹೇಗೆ ವಿತರಿಸಲಾಗುತ್ತದೆ? ಲಾಭಾಂಶ ಪ್ರಕಟಿಸಿದ ಕಂಪನಿಗಳು ಯಾವುವು?ಡಿವಿಡೆಂಡ್ ಹೇಗೆ ವಿತರಿಸಲಾಗುತ್ತದೆ? ಲಾಭಾಂಶ ಪ್ರಕಟಿಸಿದ ಕಂಪನಿಗಳು ಯಾವುವು?

ನಾವು ಈ ವಿಶೇಷ ಡಿವಿಡೆಂಡ್ ಘೋಷಣೆ ಮಾಡುವುದಕ್ಕೆ ಸಂತೋಷಿಸುತ್ತೇವೆ. ನಮ್ಮ ಷೇರುದಾರರು ತೋರಿದ ನಂಬಿಕೆ, ವಿಶ್ವಾಸ ಹಾಗೂ ನೀಡಿದ ಬೆಂಬಲಕ್ಕೆ ನಾವು ಆಭಾರಿ ಆಗಿದ್ದೇವೆ. ನಾವು ಈ ಕಂಪೆನಿಯನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟುತ್ತೇವೆ ಎಂದು ಕಂಪೆನಿಯ ಉಪಾಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಅದ್ನಾನ್ ಅಹ್ಮದ್ ತಿಳಿಸಿದ್ದಾರೆ.

140 ರು. ಡಿವಿಡೆಂಡ್ ಘೋಷಿಸಿದ  ಕ್ಲಾರಿಯೆಂಟ್ ಕೆಮಿಕಲ್ಸ್

ಕ್ಲಾರಿಯೆಂಟ್ ಕೆಮಿಕಲ್ಸ್ ಇಂಡಿಯಾ ಷೇರು ಸೋಮವಾರದಂದು ಬೆಳಗ್ಗೆ ವಹಿವಾಟಿನಲ್ಲಿ 17 ಪರ್ಸೆಂಟ್ ಗೂ ಹೆಚ್ಚಿನ ಏರಿಕೆ ದಾಖಲಿಸಿ, ವಾರ್ಷಿಕ ಗರಿಷ್ಠ ಮಟ್ಟವಾದ 575 ರುಪಾಯಿಯನ್ನು ಮುಟ್ಟಿತು. ಕಳೆದ ಮಾರ್ಚ್ ತಿಂಗಳಲ್ಲಿ ಈ ಷೇರು ವಾರ್ಷಿಕ ಕನಿಷ್ಠ ಮಟ್ಟವಾದ 192 ರುಪಾಯಿ ತಲುಪಿತ್ತು.

English summary

Special Interim Dividend Of 140 Rupees Announced By Clariant Chemicals

Clariant Chemicals India announced special interim dividend of 140 rupees for Rs. 10 face value share.
Story first published: Monday, July 13, 2020, 10:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X