For Quick Alerts
ALLOW NOTIFICATIONS  
For Daily Alerts

ಏಕತಾ ಪ್ರತಿಮೆಯು 1 ಲಕ್ಷ ಕೋಟಿ ಆರ್ಥಿಕ ಪರಿಸರ ವ್ಯವಸ್ಥೆಯನ್ನು ರಚಿಸಲಿದೆ-ಪಿಯೂಷ್ ಗೋಯೆಲ್

|

ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆಯು ಮುಂಬರುವ ವರ್ಷಗಳಲ್ಲಿ 1 ಲಕ್ಷ ಕೋಟಿ ಆರ್ಥಿಕ ಪರಿಸರ ವ್ಯವಸ್ಥೆಯನ್ನು ರಚಿಸಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಹೇಳಿದ್ದಾರೆ.

ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿರುವ ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ಇತ್ತೀಚೆಗಷ್ಟೇ ಎಂಟು ರಾಷ್ಟ್ರಗಳ ಅಂತರಾಷ್ಟ್ರೀಯ ಸಹಕಾರ ಸಂಸ್ಥೆ (ಎಸ್‌ಸಿಒ) ವಿಶ್ವದ ಎಂಟನೇ ಅದ್ಭುತದಲ್ಲಿ ಒಂದು ಎಂದು ಸೇರಿಸಿದೆ. ದೇಶದ ಮೊದಲ ಗೃಹ ಮಂತ್ರಿ ವಲ್ಲಭಭಾಯಿ ಪಟೇಲ್ ಅವರ ಬೃಹತ್ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 31, 2018 ರಂದು ಉದ್ಘಾಟಿಸಿದರು.

ಏಕತಾ ಪ್ರತಿಮೆ 1 ಲಕ್ಷ ಕೋಟಿ ಆರ್ಥಿಕ ಪರಿಸರ ವ್ಯವಸ್ಥೆಯನ್ನು ರಚಿಸಲಿದೆ

"ಏಕತಾ ಪ್ರತಿಮೆಯು ಮುಂದಿನ ವರ್ಷಗಳಲ್ಲಿ ಕನಿಷ್ಠ ಒಂದು ಲಕ್ಷ ಕೋಟಿ ಮೌಲ್ಯದ ಆರ್ಥಿಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ" ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಕೆವಾಡಿಯಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕೆವಾಡಿಯಾದಿಂದ ಹೊಸ ರೈಲ್ವೇ ನಿಲ್ದಾಣ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಪಿಯೂಷ್ ಗೋಯೆಲ್ ವಡೋದರದಿಂದ ಕೇವಾಡಿಯಾಗೆ ಹೆಚ್ಚಿನ ವೇಗದಲ್ಲಿ ಚಲಿಸುವ ರೈಲುಗಳು ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.

ಏಕತಾ ಪ್ರತಿಮೆ 1 ಲಕ್ಷ ಕೋಟಿ ಆರ್ಥಿಕ ಪರಿಸರ ವ್ಯವಸ್ಥೆಯನ್ನು ರಚಿಸಲಿದೆ

'' ಕೆಲವು ಸ್ಥಳಗಳಲ್ಲಿ ಈಗಾಗಲೇ ಹಳಿಗಳನ್ನು ಹಾಕಲು ಪ್ರಾರಂಭಿಸಲಾಗಿದೆ. ಮಾರ್ಚ್ ವೇಳೆಗೆ ಇತರೆ ವಿಸ್ತಾರಗಳಲ್ಲಿ ಕೆಲಸ ಪ್ರಾರಂಭವಾಗಲಿದೆ. ಇದನ್ನು ಮುಖ್ಯ ಮಾರ್ಗದೊಂದಿಗೆ (ವಡೋದರದೊಂದಿಗೆ) ಸಂಪರ್ಕಿಸಿದ ನಂತರ, ದೇಶಾದ್ಯಂತ ಪ್ರವಾಸಿಗರು ಕೆವಾಡಿಯಕ್ಕೆ ಬರಲು ಸಾಧ್ಯವಾಗುತ್ತದೆ'' ಎಂದು ಗೋಯೆಲ್ ಹೇಳಿದ್ದಾರೆ.

ಜೊತೆಗೆ ಕೆವಾಡಿಯಾ-ವಡೋದರ ನಡುವಿನ ರೈಲು ಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೆಯು ಮಾರ್ಚ್‌ ವೇಳೆಗೆ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary

Statue Of Unity Will Create 1 Lakh Crore Economic Ecosystem

Railway Minister Piyush Goyal said on Friday Statue of unity would create an "economic ecosystem" worth one lakh crore in coming years.
Story first published: Saturday, January 18, 2020, 12:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X