For Quick Alerts
ALLOW NOTIFICATIONS  
For Daily Alerts

2023ರಲ್ಲಿ ತ್ವರಿತ ರಿಟರ್ನ್ ಪಡೆಯಬೇಕಾದರೆ ಈ ಸ್ಟಾಕ್ ಖರೀದಿಸಿ!

|

ಷೇರು ಮಾರುಕಟ್ಟೆಯು ಎಂದಿಗೂ ಕೂಡಾ ಸ್ಥಿರವಾಗಿರುವುದಿಲ್ಲ. ಮಾರುಕಟ್ಟೆಯಲ್ಲಿ ಪ್ರತಿದಿನ ಏರಿಳಿತಗಳು ಸಹಜ. ಅದರಲ್ಲೂ ಮುಖ್ಯವಾಗಿ ಷೇರುಪೇಟೆಯ ಮೇಲೆ ಸ್ಥಳೀಯ, ಅಂತಾರಾಷ್ಟ್ರೀಯ, ರಾಷ್ಟ್ರೀಯ ಎಲ್ಲ ಬೆಳವಣಿಗೆಗಳು ಕೂಡಾ ಪರಿಣಾಮ ಉಂಟು ಮಾಡುತ್ತದೆ. ಹೀಗಿರುವಾಗ ನಾವು ಯಾವ ಸ್ಟಾಕ್ಸ್ ಅನ್ನು ಖರೀದಿ ಮಾಡುವುದು ಉತ್ತಮ ಎಂದು ನಮಗೆ ತಿಳಿಯುವುದು ಹೇಗೆ?

ಅದಕ್ಕಾಗಿಯೇ ಹಲವಾರು ಸಂಸ್ಥೆಗಳು ನಮಗೆ ಸಲಹೆಯನ್ನು ನೀಡುತ್ತದೆ. ಷೇರುಪೇಟೆಯ ಎಲ್ಲ ಬೆಳವಣಿಗೆಗಳ ಬಗ್ಗೆ ಸೂಕ್ಷ್ಮ ಹಾಗೂ ತ್ವರಿತ ಮಾಹಿತಿಯನ್ನು ಹೊಂದಿರುವ ತಜ್ಞರನ್ನು ಒಳಗೊಂಡಿರುವ ಸಂಸ್ಥೆಗಳು ನಾವು ಯಾವ ಸ್ಟಾಕ್ ಅನ್ನು ಖರೀದಿ ಮಾಡಿದರೆ ಅಧಿಕ ಲಾಭವನ್ನು ಪಡೆಯಲು ಸಾಧ್ಯ ಎಂದು ತಿಳಿಸುತ್ತದೆ.

ಷೇರುಪೇಟೆ ಮೇಲೆ ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಪ್ರಭಾವವೇನು?ಷೇರುಪೇಟೆ ಮೇಲೆ ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಪ್ರಭಾವವೇನು?

ಸದ್ಯ 2022 ವರ್ಷದ ಕೊನೆಯಲ್ಲಿ ನಾವಿದ್ದೇವೆ. ಈ ನಡುವೆ ಬ್ರೋಕರೇಜ್ ಸಂಸ್ಥೆಗಳು ನಾವು 2023ರಲ್ಲಿ ಯಾವ ಸ್ಟಾಕ್ ಅನ್ನು ಖರೀದಿ ಮಾಡಿದರೆ ಉತ್ತಮ ಎಂದು ಸಲಹೆಯನ್ನು ನೀಡಿದೆ. ಷೇರ್‌ಖಾನ್ ವರದಿ ಇಲ್ಲಿದೆ ಮುಂದೆ ಓದಿ...

 ಎಚ್‌ಸಿಜಿ: ಉತ್ತಮ ಆದಾಯ ಪಡೆಯುತ್ತಿರುವ ಸ್ಟಾಕ್

ಎಚ್‌ಸಿಜಿ: ಉತ್ತಮ ಆದಾಯ ಪಡೆಯುತ್ತಿರುವ ಸ್ಟಾಕ್

ಎಚ್‌ಸಿಜಿ ಸ್ಟಾಕ್ ಉತ್ತಮ ರಿಟರ್ನ್ ಅನ್ನು ನೀಡುವ ಸ್ಟಾಕ್ ಆಗಿದೆ ಎಂದು ಷೇರ್‌ಖಾನ್ ಅಭಿಪ್ರಾಯಪಟ್ಟಿದೆ. ನಾವು ಸುಮಾರು ಶೇಕಡ 22ರಷ್ಟು ರಿಟರ್ನ್ ಅನ್ನು ಪಡೆಯಲು ಸಾಧ್ಯವಿದೆ ಎಂದು ಷೇರ್‌ಖಾನ್ ಅಭಿಪ್ರಾಯಪಟ್ಟಿದೆ. ಸಂಸ್ಥೆಯ ಆದಾಯದಲ್ಲಿ ಹಣಕಾಸು ವರ್ಷ 2019ರಿಂದ ಹಣಕಾಸು ವರ್ಷ 2022ರಲ್ಲಿ ಸುಮಾರು ಶೇಕಡ 13ರಷ್ಟು ಬೆಳವಣಿಗೆ ಕಂಡುಬಂದಿದೆ. ಹಣಕಾಸು ವರ್ಷ 2022ಕ್ಕೆ ಸಂಸ್ಥೆಯ ಆದಾಯ 1,400 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಆದಾಯ ಶೇಕಡ 10ರಷ್ಟು ಏರಿಕೆಯಾಗಿದೆ. ಹಣಕಾಸು ವರ್ಷ 2022-2025ರಲ್ಲಿ ಆದಾಯ ಶೇಕಡ 16ರಷ್ಟು ಏರಿಕೆಯಾಗಲಿದೆ ಎಂದು ಷೇರ್‌ಖಾನ್ ಹೇಳಿದೆ.

 ಎಚ್‌ಸಿಜಿ ಸ್ಟಾಕ್‌ನಲ್ಲಿ ಧನಾತ್ಮಕ ಬೆಳವಣಿಗೆ

ಎಚ್‌ಸಿಜಿ ಸ್ಟಾಕ್‌ನಲ್ಲಿ ಧನಾತ್ಮಕ ಬೆಳವಣಿಗೆ

ಆರೋಗ್ಯ ಸೇವಾ ವಲಯದಲ್ಲಿ ಎಚ್‌ಸಿಜಿ ಜನಪ್ರಿಯತೆಯನ್ನು ಹೊಂದಿದೆ ಎಂದು ಶೇರ್‌ಖಾನ್ ಹೇಳಿದೆ. ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಉತ್ತಮ ಷೇರು ಮೌಲ್ಯವನ್ನು ಹೊಂದಿರುವ ಈ ಸಂಸ್ಥೆಯಲ್ಲಿ ಉತ್ತಮ ಆದಾಯ ಬೆಳವಣಿಗೆ ಇದೆ. ಆಸ್ಪತ್ರೆಗಳ ಪೈಕಿ ಕಂಪನಿಗೆ ಹೆಚ್ಚಿನ ಆದ್ಯತೆ ಇದೆ. ಪ್ರಸ್ತುತ ಸ್ಟಾಕ್ 13x/11x ನಲ್ಲಿ ವಹಿವಾಟು ನಡೆಸುತ್ತಿದೆ. ಮುಂದಿನ 12 ತಿಂಗಳಲ್ಲಿ ಸಂಸ್ಥೆಯ ಸ್ಟಾಕ್ ಮೌಲ್ಯ ಶೇಕಡ 22ರಷ್ಟು ಹೆಚ್ಚಾಗಲಿದೆ," ಎಂದು ತಿಳಿಸಿದೆ.

 ಬೆಲೆ ಎಷ್ಟು ಇರಲಿದೆ?

ಬೆಲೆ ಎಷ್ಟು ಇರಲಿದೆ?

ಷೇರ್‌ಖಾನ್ ಸಂಸ್ಥೆಯ ಪ್ರಕಾರ ಸಂಸ್ಥೆಯ ಟಾರ್ಗೆಟ್ ಬೆಲೆ 1,755 ರೂಪಾಯಿ ಆಗಿದೆ. ರಫ್ತುಗಳಲ್ಲಿಯೂ, ಕಂಪನಿಯು ನಿರಂತರವಾಗಿ ತನ್ನ ಉತ್ಪನ್ನ ಬಂಡವಾಳವನ್ನು ಪರಿಷ್ಕರಿಸುತ್ತದೆ. ಹಾಗೆಯೇ ಮಾರುಕಟ್ಟೆಗೆ ಸೂಕ್ತವಾದ ಉತ್ಪನ್ನವನ್ನೇ ನೀಡುತ್ತಿದೆ. ಹಸಿರು ಇಂಧನವು ಭಾರತದಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ. 2070ರ ವೇಳೆಗೆ ಭಾರತವನ್ನು ಶೂನ್ಯ ಕಾರ್ಬನ್ ದೇಶವನ್ನಾಗಿಸುವ ನಿಟ್ಟಿನಲ್ಲಿ ಇದು ಮುಖ್ಯ ಪಾತ್ರವನ್ನು ವಹಿಸಲಿದೆ. ಆದ್ದರಿಂದಾಗಿ ಬೆಲೆ 1,755 ರೂಪಾಯಿಗೆ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಶೇರ್‌ಖಾನ್ ಹೇಳಿದೆ.

 ಇಲ್ಲಿ ಗಮನಿಸಿ

ಇಲ್ಲಿ ಗಮನಿಸಿ

ಶೇರ್‌ಖಾನ್‌ನ ಬ್ರೋಕರೇಜ್ ವರದಿಯಿಂದ ಈ ಷೇರುಗಳನ್ನು ಆಯ್ಕೆ ಮಾಡಲಾಗಿದೆ. ಲೇಖನದ ಆಧಾರದ ಮೇಲೆ ನೀವು ಯಾವುದೇ ನಿರ್ಧಾರವನ್ನು ಕೈಗೊಂಡರೂ ಅದರಿಂದ ಉಂಟಾಗುವ ನಷ್ಟಕ್ಕೆ ಗ್ರೇನಿಯಮ್ ಸಂಸ್ಥೆಯಾಗಲಿ ಅಥವಾ ಲೇಖಕರಾಗಲಿ, ಸಂಬಂಧಿತ ಬ್ರೋಕರೇಜ್ ಸಂಸ್ಥೆಯಾಗಲಿ ಜವಾಬ್ದಾರರಾಗಿರುವುದಿಲ್ಲ.

English summary

Stocks To Buy: Year-End Stock Picks That Could Reap Quick Gains In 2023, Details in Kannada

Here are a few stocks that are good stocks to buy for potential gains in 2023. Year-End Stock Picks That Could Reap Quick Gains In 2023, Details in Kannada.
Story first published: Tuesday, December 13, 2022, 15:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X