For Quick Alerts
ALLOW NOTIFICATIONS  
For Daily Alerts

ಸ್ವಿಗ್ಗಿಯಿಂದ ಬೆಂಗಳೂರಿನಲ್ಲಿ 'ಇನ್‌ಸ್ಟಾಮಾರ್ಟ್'ಗೆ ಚಾಲನೆ: 'ನಾಳೆ ಬಾ' ಎಂಬ ಮಾರುಕಟ್ಟೆ ಅಭಿಯಾನ

|

ದಿನಸಿ ಸಾಮಗ್ರಿಗಳನ್ನು ತಕ್ಷಣವೇ ತಲುಪಿಸುವ ಹಾಗೂ ಸ್ವಿಗ್ಗಿ ಪ್ರಾಯೋಜಿತ 'ಇನ್‌ಸ್ಟಾಮಾರ್ಟ್‌' ಸೇವೆಯನ್ನು ಪ್ರಚುರಪಡಿಸುವ ಹೊಸ ರೀತಿಯ 'ನಾಳೆ ಬಾ' ಎಂಬ ಮಾರುಕಟ್ಟೆ ಅಭಿಯಾನವನ್ನು ಸ್ವಿಗ್ಗಿ ಬೆಂಗಳೂರಿನಲ್ಲಿ ಆರಂಭಿಸಿದೆ.

 

ಸರಕು ಖಾಲಿಯಾಗುವುದು ಹಾಗೂ ಸಾಮಗ್ರಿಗಳನ್ನು ಸುಲಭವಾಗಿ ತಲುಪಿಸುವ ಸ್ಲಾಟ್‌ಗಳನ್ನು ಪಡೆಯುವುದು ಭಾರತದ ನಗರದ ಗ್ರಾಹಕರ ಪಾಲಿಗೆ ದುಃಸ್ವಪ್ನದಂತೆ. ಸಾಮಾಜಿಕ ಅಂತರ ಕಾಪಾಡಬೇಕಾದ ಹಾಗೂ ದಿನಸಿ ಸಾಮಾಗ್ರಿ ತಲುಪಿಸುವುದಕ್ಕೆ ಆ್ಯಪ್‌ಗಳನ್ನು ಅವಲಂಬಿಸಬೇಕಾದ ಇಂದಿನ ದಿನಗಳಲ್ಲಂತೂ ಇದರ ಅಗತ್ಯ ಇನ್ನೂ ಹೆಚ್ಚಾಗಿದೆ.

 

ಬೆಂಗಳೂರಿಗರ ಈ ಆತಂಕಗಳನ್ನು ಅರ್ಥ ಮಾಡಿಕೊಂಡು ಇದಕ್ಕೆ ಪರಿಹಾರ ರೂಪಿಸಲು ಸ್ವಿಗ್ಗಿ ದಿನಸಿ ಸಾಮಗ್ರಿಗಳನ್ನು 30ರಿಂದ 45 ನಿಮಿಷಗಳ ಒಳಗೆ ತಲುಪಿಸುವ ಅತ್ಯಾಧುನಿಕ ಇನ್‌ಸ್ಟಾಮಾರ್ಟ್‌ ಅನ್ನು ಪರಿಚಯಿಸಿದ್ದು, ಇದನ್ನು ಮನೆಮಾತಾಗಿಸಲು ' ನಾಳೆ ಬಾ' ಎಂಬ ಪ್ರಚಾರ ಅಭಿಯಾನ ಆರಂಭಿಸಿದೆ.

ಸ್ವಿಗ್ಗಿಯಿಂದ ಬೆಂಗಳೂರಿನಲ್ಲಿ 'ಇನ್‌ಸ್ಟಾಮಾರ್ಟ್'ಗೆ ಚಾಲನೆ

ಈ ಅಭಿಯಾನವು ಬೆಂಗಳೂರು ನಗರ ಸಿಲಿಕಾನ್‌ ಸಿಟಿ ಎಂಬ ಗುರುತಿಸಿಕೊಳ್ಳುವ ಮುನ್ನ 1990ರ ದಶಕದಲ್ಲಿ ಈ ನಗರದಲ್ಲಿ ದಂತಕತೆಯಾಗಿದ್ದ 'ನಾಳೆ ಬಾ' ಪ್ರಸಂಗದಿಂದ ಸ್ಫೂರ್ತಿ ಪಡೆದಿದೆ. ಈ ಕಟ್ಟುಕತೆಯ ಪ್ರಕಾರ ಒಬ್ಬಳು ಮಾಟಗಾತಿಯು ರಾತ್ರಿ ವೇಳೆ ನಗರದ ಬೀದಿಬೀದಿಗಳಲ್ಲಿ ಅಲೆದಾಡುತ್ತಾ, ಮನೆ ಮನೆಯ ಬಾಗಿಲು ತಟ್ಟುತ್ತಿರುತ್ತಾಳೆ. ಉಪಾಯದಿಂದ ಆಕೆಯನ್ನು ತಮ್ಮ ಮನೆಯ ಹೊಸ್ತಿಲಿನಿಂದಲೇ ಆಚೆ ಕಳುಹಿಸಲು ಇಲ್ಲಿನ ನಿವಾಸಿಗಳು ತಮ್ಮ ಮನೆಯ ಬಾಗಿಲಿನಲ್ಲಿ ಹಾಗೂ ಗೋಡೆಗಳಲ್ಲಿ 'ನಾಳೆ ಬಾ' ಎಂದು ಬರೆಯುತ್ತಿದ್ದರು. ಇದನ್ನು ಓದಿ ಆಕೆ ವಾಪಾಸ್‌ ಹೋಗುತ್ತಾಳೆ. ಮರುದಿನ ಮತ್ತೆ ಬಂದಾಗಲೂ ಅದೇ ಸಂದೇಶವು ಕಾಣಿಸುತ್ತದೆ. ಈ ಪ್ರಕ್ರಿಯೆ ಹೀಗೆಯೇ ಮುಂದುವರಿಯುತ್ತದೆ ಎಂಬುದು ಜನರ ನಂಬಿಕೆಯಾಗಿತ್ತು. ಬಾಲಿವುಡ್‌ನ ಪ್ರಖ್ಯಾತ 'ಸ್ತ್ರೀ' ಚಲನಚಿತ್ರವೂ ಇದೇ ಪರಿಕಲ್ಪನೆಯನ್ನು ಆಧರಿಸಿದೆ.

‌ಸಾಮಾಗ್ರಿಗಳನ್ನು ಮನೆಗೆ ಸುಲಭವಾಗಿ ತರಿಸಿಕೊಳ್ಳುವ ಸ್ಲಾಟ್‌ಗಳು ಸಿಗದೆ ಪರದಾಡುತ್ತಿರುವ ಹಾಗೂ ಬಹುತೇಕ ಸಲ ಮರುದಿನ ಸಾಮಾಗ್ರಿ ತಲುಪಿಸುವ ಸ್ಲಾಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಗ್ರಾಹಕರ ಭಯಾನಕ ಸಂಕಟವನ್ನು ಸ್ವಿಗ್ಗಿ ಮನಗಂಡಿದೆ. ಈ ಜನಪ್ರಿಯ ಸಾಂಸ್ಕೃತಿಕ ಪ್ರಸಂಗವನ್ನು ಜಾಣ್ಮೆಯಿಂದ ಬಳಸಿಕೊಂಡಿರುವ ಸ್ವಿಗ್ಗಿ, 'ಸಾಮಾಗ್ರಿಗಳನ್ನು ಮನೆಗೆ ತಲುಪಿಸುವ ಯಾವುದೇ ಸ್ಲಾಟ್‌ಗಳು ಇವತ್ತು ಲಭ್ಯವಿಲ್ಲ' ಎನ್ನುವ ಮೂಲಕ ಪ್ರಸ್ತುತ ಕಾಲದಲ್ಲೂ ಗ್ರಾಹಕರು ಅನುಭವಿಸುತ್ತಿರುವ ಆಧುನಿಕ ದುಃಸ್ವಪ್ನದ ತೀವ್ರತೆಯನ್ನು ಕಟ್ಟಿಕೊಟ್ಟಿದೆ.

ಈ ಅಭಿಯಾನದ ಉದ್ದೇಶವು ಇಂದಿನ ಗ್ರಾಹಕರ ಆಗುಹೋಗುಗಳಿಗೆ ಸ್ಪಂದಿಸುವುದು ಹಾಗೂ ಸಾಮಾಗ್ರಿಗಳನ್ನು ಮನೆಗೆ ತರಿಸಿಕೊಳ್ಳುವ ಸ್ಲಾಟ್‌ಗಾಗಿ ನಾಳೆಯವರೆಗೆ ಕಾಯಬೇಕಾಗುತ್ತದೆಯೇನೋ ಎಂಬುವರ ಆತಂಕಕ್ಕೆ ಪರಿಹಾರ ಹುಡುಕುವುದೇ ಆಗಿದೆ. ಇನ್‌ಸ್ಟಾಮಾರ್ಸ್‌ ಮೂಲಕ ಗ್ರಾಹಕರಿಗೆ ಅನುಕೂಲ ಕಲ್ಪಿಸುವುದು ಹಾಗೂ ಆಧುನಿಕ ಕಾಲದ 'ನಾಳೆ ಬಾ' ಎಂಬ ಚಕ್ರವ್ಯೂಹದಿಂದ ಅವರಿಗೆ ಬಿಡುಗಡೆ ನೀಡುವುದೇ ಸ್ವಿಗ್ಗಿಯ ಆಶಯ.

English summary

Swiggy Started Nale Ba Yojana In Bengaluru

Instamart powered by Swiggy delivers unparalleled convenience to consumers. With instant deliveries (30 – 45 minutes), day and night serviceability (7 am - 1 am) and 1500+ unique products across.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X