For Quick Alerts
ALLOW NOTIFICATIONS  
For Daily Alerts

ತಮಿಳು ನಟ ವಿಜಯ್‌ಗೆ ಐಟಿ ಶಾಕ್: 65 ಕೋಟಿ ರುಪಾಯಿ ವಶ

|

ತಮಿಳು ಚಿತ್ರರಂಗದ ಪ್ರಬಲ ಫೈನಾನ್ಷಿಯರ್ ಮನೆ ಸೇರಿದಂತೆ 38 ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ 65 ಕೋಟಿ ರುಪಾಯಿ ವಶಪಡಿಸಿಕೊಳ್ಳಲಾಗಿದೆ.

 

ಮಧುರೈ ಮೂಲದ ಫೈನಾನ್ಶಿಯರ್ ಅನ್ಬು ಚೆಳಿಯಾನ್‍ನ ಆಸ್ತಿಪಾಸ್ತಿಗಳ ಶೋಧ ಕೈಗೊಂಡಿರುವ ಐಟಿ ಅಧಿಕಾರಿಗಳು ವಿವಿಧೆಡೆ 65 ಕೋಟಿ ರುಪಾಯಿ ವಶಪಡಿಸಿಕೊಂಡಿದ್ದಾರೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಬಿಗಿಲ್ ಸಿನಿಮಾ ಸೂಪರ್ ಹಿಟ್ ಆಗಿದ್ದು, ಚಿತ್ರದ ಕಲೆಕ್ಷನ್ 180 ಕೋಟಿ ರುಪಾಯಿ ಗಳಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಚಿತ್ರದ ಕಲೆಕ್ಷನ್ ಬಗ್ಗೆ ವಿವರಣೆ ಪಡೆಯಲು ಈ ಹಿಂದೆ ಐಟಿ ಇಲಾಖೆ ಸಮನ್ಸ್ ಜಾರಿ ಮಾಡಿತ್ತು.

ತಮಿಳು ನಟ ವಿಜಯ್‌ಗೆ ಐಟಿ ಶಾಕ್: 65 ಕೋಟಿ ರುಪಾಯಿ ವಶ

ತಮಿಳು ನಟ ವಿಜಯ್‌ಗೆ ಸಿನಿಮಾ ಶೂಟಿಂಗ್ ಸೆಟ್‌ನಲ್ಲೇ ಈ ಹಿಂದೆ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅಧಿಕಾರಿಗಳು ಫೈನಾನ್ಷಿಯರ್ ಅನ್ಬು ಚೆಲಿಯಾನ್ ಮತ್ತು ವಿಜಯ್ ನಡುವಿನ ಲೆಕ್ಕವಿಲ್ಲದ ವಹಿವಾಟುಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಹೇಳಲಾಗಿದೆ. ನಂತರ ಚೆನ್ನೈನ ಹೊರಗಿನ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ನಟನ ಮನೆಯ ಮೇಲೆ ದಾಳಿ ನಡೆಸಲಾಯಿತು. ವಿಜಯ್ ಅವರನ್ನು ಇಂದು ಪ್ರಶ್ನಿಸಲಾಗುತ್ತಿದೆ.

ಐಟಿ ದಾಳಿ ಬಗ್ಗೆ ವಿಜಯ್ ಪ್ರತಿಕ್ರಿಯೆ ನೀಡಿ, ಕಳೆದ ವಾರ ಕೂಡ ಐಟಿ ಅಧಿಕಾರಿಗಳ ನನ್ನ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದರು. ನನ್ನ ಕುಟುಂಬ ಹಾಗೂ ಸಿಬ್ಬಂದಿ ಅಧಿಕಾರಿಗಳ ಶೋಧ ಕಾರ್ಯಕ್ಕೆ ಸಹಕರಿಸಿದ್ದಾರೆ. ಸದ್ಯ ವಿವರಣೆಯ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದರು.

English summary

Tamil Actor Vijay IT Shock 65 Crore Found

Officials of the Income Tax Department found Rs 65 crore during raids on a powerful financier in the Tamil film industry
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X