TCS: ಲೇಆಫ್‌ನಿಂದ ಐಟಿ ವಿಲವಿಲ! AI ಅಬ್ಬರ, ಟೆಕ್ ಷೇರುಗಳು ಕುಸಿತ.. ಎಐ ಇಷ್ಟು ಕೆಲಸ ಮಾಡ್ತಾ?
ಭಾರತೀಯ ಐಟಿ ವಲಯಕ್ಕೆ ದೊಡ್ಡ ಶಾಕ್..! ಹೌದು, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಇತ್ತೀಚೆಗೆ ಘೋಷನೆಯನ್ನು ಮಾಡಿದ ಉದ್ಯೋಗ ವಜಾದ ನಿರ್ಧಾರವು ಐಟಿ ವಲಯದಲ್ಲಿ ನಡುಕವನ್ನು ಸೃಷ್ಟಿಮಾಡಿದೆ.ಲಕ್ಷಾಂತರ ಯುವಕ-ಯುವತಿಯ ಐಟಿ ಉದ್ಯೋಗದ ಕನಸು ಭಸ್ಮವಾಗುತ್ತಿದೆ.ಈ ನಿರ್ಧಾರ ಐಟಿ ಆಸಕ್ತರ ಆತಂಕಕ್ಕೆ ಕಾರಣವಾಗಿದೆ. ಒಳ್ಳೆಯ ವೇತನ, ಕಾರ್ಪೊರೇಟ್ ಜೀವನ ಶೈಲಿ ಬೇಕು ಎಂದು ಆಯ್ಕೆ ಮಾಡಿಕೊಳ್ಳತ್ತಿದ್ದವರಿಗೆ ನಿರಾಸೆಯ ಜೊತೆ ಮುಂದೇನು ಎನ ಚಿಂತೆ ಕೂಡ ಕಾಡತೊಡಗಿದೆ. ಟಿಸಿಎಸ್ ವಜಾಗಳು ಪ್ರಸ್ತುತ ಭಾರತೀಯ ಐಟಿಯನ್ನು ಅಲುಗಾಡಿಸುತ್ತಿವೆ
ಹೌದು, ಟಿಸಿಎಸ್ ತನ್ನ ಜಾಗತಿಕ ಕೆಲಸದ ಒತ್ತಡ ಮತ್ತು ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜನ್ಸ್ ಎಐ (AI) ತಂತ್ರಜ್ಞಾನಗಳ ಅಳವಡಿಕೆಯಿಂದ ಮಾರ್ಚ್ 2026ರೊಳಗಾಗಿ ಸುಮಾರು 12,000 ಉದ್ಯೋಗಗಳನ್ನು ಉದ್ಯೋಗದಿಂದ ವಜಾ ಮಾಡಲು ಪ್ಲಾನ್ ಮಾಡಿಕೊಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿ ವಿಶ್ವಾದ್ಯಂತ 6.13 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಐಟಿ ದೈತ್ಯ ಕಂಪನಿಗಳಲ್ಲಿ ಒಂದಾಗಿದೆ. ಇದು ಕಂಪನಿಯ ಒಟ್ಟು ಉದ್ಯೋಗದ ಶೇಕಡಾ 2 ರಷ್ಟಿದೆ.

ಈ ಹೊಸ ಉದ್ಯೋಗ ಕಡಿತಗಳು ವಿಶೇಷವಾಗಿ ಮಧ್ಯಮ ಮತ್ತು ಹಿರಿಯ ಮಟ್ಟದ ಉದ್ಯೋಗಿಗಳ ಮೇಲೆ ಹೆಚ್ಚಿನ ಪ್ರಭಾವನ್ನು ಬೀರಿದೆ.ಕಂಪನಿಯ ಯೋಜನಾ ವ್ಯವಸ್ಥಾಪಕರೂ ಸಹ AIಗೆ ಹೊಂದಿಕೊಳ್ಳದಿದ್ದರೆ ಉದ್ಯೋಗ ಭದ್ರತೆಯಿಲ್ಲದಂತೆ ಆಗಬಹುದು.
AI ಪ್ರಭಾವ
ಟಿಸಿಎಸ್ ಉದ್ಯೋಗ ಕಡತಕ್ಕೆ ಆರ್ಟಿಫಿಷಿಯಲ್ ಇಂಟೆಲಿಜನ್ಸ್ (AI) ತಂತ್ರಜ್ಞಾನಗಳ ಅಳವಡಿಕೆಯೇ ಕಾರಣ ಎಂದು ಹೇಳಿಕೊಂಡಿದೆ. ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಲು ಭವಿಷ್ಯದ ಬದಲಾವಣೆಗಳಿಗೆ ಸಿದ್ಧರಾಗಲು ಕಂಪನಿಯು ತನ್ನ ಕಾರ್ಯಪಡೆಯಲ್ಲಿ ಬದಲಾವಣೆಗಳು ಮತ್ತು ಸೇರ್ಪಡೆಗಳನ್ನು ಮಾಡುತ್ತಿದೆ. ಈ ಸಂದರ್ಭದಲ್ಲಿ, ಬೆಂಚ್ ನೀತಿಯನ್ನು ಸಹ ಬಹಳ ಕಟ್ಟುನಿಟ್ಟಾಗಿ ಮಾಡಲಾಗಿದೆ. ಒಂದು ವರ್ಷದಲ್ಲಿ 35 ದಿನಗಳಿಗಿಂತ ಹೆಚ್ಚು ಕಾಲ ಒಂದು ಯೋಜನೆಯಿಂದ ಉದ್ಯೋಗಿ ಗೈರುಹಾಜರಾಗಿದ್ದರೆ, ಅವರನ್ನು ಮರು ನಿಯೋಜಿಸದ ಹೊರತು ಕಂಪನಿಯಿಂದ ಹೊರಗೆ ಕಳುಹಿಸಲಾಗುತ್ತದೆ.
ಷೇರು ಮಾರುಕಟ್ಟೆಯ ಮೇಲೆ ಪ್ರಭಾವ
ಉದ್ಯೋಗಿಗಳ ವಜಾದ ಘೋಷಣೆಯ ನಂತರ ಷೇರುಮಾರುಕಟ್ಟೆಯಲ್ಲಿ ಟಿಸಿಎಸ್ ಸೇರಿದಂತೆ ಇನ್ಫೋಸಿಸ್, ವಿಪ್ರೋ, ಎಚ್‌ಸಿಎಲ್ ಟೆಕ್ ಮುಂತಾದ 37 ಪ್ರಮುಖ ಐಟಿ ಕಂಪನಿಗಳ ಷೇರುಗಳು ಕುಸಿತವನ್ನು ಕಂಡಿದ್ಧೇವೆ.ಮಾರುಕಟ್ಟೆಯಈ ಬೆಳವಣಿಗೆಯು ಉದ್ಯೋಗ ಭದ್ರತೆಗಯ ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ.
ಈ ಉದ್ಯೋಗಿಗಳ ವಜಾದ ಬಗ್ಗೆ ಉದ್ಯೋಗಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು,ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಷೇಕ್ ಸುರ್ ಪ್ರತಿಕ್ರಿಯೆಯನ್ನು ಈ ರೀತಿಯಾಗಿ ನೀಡಿದ್ದಾರೆ. ಒಂದು ಕಾಲದಲ್ಲಿ ಟಿಸಿಎಸ್ ಸರ್ಕಾರಿ ಕೆಲಸದಂತೆ ಭದ್ರತೆ ಇತ್ತು ಎಂದು ಭಾವಿಸಿದ್ದೆವು, ಆದರೆ ಈಗ ಯಾರಿಗೂ ಖಾತ್ರಿ ಇಲ್ಲ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಸಲಹೆಗಾರ ಕಾನನ್ ಬಹ್ಲ್, ಈ ಟಿಸಿಎಸ್ಉದ್ಯೋಗಿಗಳ ವಜಾತೀರ್ಮಾನವು ಎಲ್ಲಾ ಉದ್ಯೋಗಿಗಳಿಗೆ ಎಚ್ಚರಿಕೆಯ ಸಂದೇಶವಾಗಿದೆ" ಎಂದು ಹೇಳಿದ್ದಾರೆ. ಅವರು AI ಮತ್ತು ಹೊಸ ತಂತ್ರಜ್ಞಾನಗಳಲ್ಲಿ ಕೌಶಲ್ಯ ಅಭಿವೃದ್ಧಿ ಅಗತ್ಯ ಎಂದು ಎಚ್ಚರಿಕೆಯನ್ನು ಸಹ ನೀಡಿದ್ಧಾರೆ.
ಎಲ್ಲಿ ನೋಡಿದ್ದರೂ ಇತ್ತೀಚಿಗೆ ದೊಡ್ಡ ದೊಡ್ಡ ಕಂಪನಿ ಲೇ ಆಫ್ ಗಳೇ ಮಾಡುತ್ತೀವೆ.ಮುಂದಿನ ದಿನಗಳಲ್ಲಿ ತಂತ್ರಜ್ಞಾನ ವಲಯ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುವುದನ್ನು ಕಾದುನೋಡಬೇಕಿದೆ.


Click it and Unblock the Notifications



