For Quick Alerts
ALLOW NOTIFICATIONS  
For Daily Alerts

ಟ್ರಂಪ್ ಅವಧಿಯಲ್ಲಿ ಈ ಅಮೆರಿಕನ್ ಶ್ರೀಮಂತರ ಗಳಿಕೆ ಎಷ್ಟು ಹೆಚ್ಚಾಗಿದೆ ಗೊತ್ತಾ?

|

ಯುಎಸ್ ನಲ್ಲಿ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಬಹುತೇಕ ಪಕ್ಕಾ ಆಗಿದೆ. ಶತಕೋಟ್ಯಧಿಪತಿ ಡೊನಾಲ್ಡ್ ಟ್ರಂಪ್ ಅವರನ್ನು ಮಣಿಸಿ, ಯುನೈಟೆಡ್ ಸ್ಟೇಟ್ಸ್ ಗೆ ನಲವತ್ತಾರನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 2016ರಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಮೇಲೆ ಅಮೆರಿಕದ ಬಿಲಿಯನೇರ್ ಗಳ ನಿವ್ವಳ ಆಸ್ತಿ ಭಾರೀ ಹೆಚ್ಚಳ ಆಗಿದೆ.

ಡೊನಾಲ್ಡ್ ಟ್ರಂಪ್ ಯುಎಸ್ ಅಧ್ಯಕ್ಷರಾಗಿ ಆಯ್ಕೆ ಆದಾಗ ಅಮೆರಿಕದಲ್ಲಿನ ಈ ಎಲ್ಲ ಶತಕೋಟ್ಯಧಿಪತಿಗಳ ಒಟ್ಟು ಆಸ್ತಿ 2.9 ಲಕ್ಷ ಕೋಟಿ ಅಮೆರಿಕನ್ ಡಾಲರ್ ಇತ್ತು. ಫೋರ್ಬ್ಸ್ ನಿಂದ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಯುಎಸ್ ಗೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆ ಆದ ನಂತರ ಈ ಬಿಲಿಯನೇರ್ ಗಳ ಆಸ್ತಿ ಮೌಲ್ಯದಲ್ಲಿ ಎಷ್ಟು ಹೆಚ್ಚಾಗಿದೆ ಎಂಬ ವಿವರ ಅಕ್ಟೋಬರ್ 19, 2020ಕ್ಕೆ ಅನ್ವಯಿಸುವಂತೆ ಪಟ್ಟಿ ಇಲ್ಲಿದೆ.

ಟ್ರಂಪ್ ಅವಧಿಯಲ್ಲಿ ಈ ಅಮೆರಿಕನ್ ಶ್ರೀಮಂತರ ಗಳಿಕೆ ಎಷ್ಟು ಹೆಚ್ಚಾಗಿದೆ

* ಜೆಫ್ ಬೆಜೋಸ್: ಅಮೆಜಾನ್ ಸಿಇಒ- ಸದ್ಯದ ಆಸ್ತಿ 18,900 ಕೋಟಿ ಅಮೆರಿಕನ್ ಡಾಲರ್- ಹೆಚ್ಚಳವಾದ ಆಸ್ತಿ ಮೊತ್ತ 12,100 ಕೋಟಿ ಯುಎಸ್ ಡಿ.

* ಇಲಾನ್ ಮಸ್ಕ್: ಸ್ಪೇಸ್ ಎಕ್ಸ್ ಸಿಇಒ : ಸದ್ಯದ ಆಸ್ತಿ- 9000 ಕೋಟಿ ಅಮೆರಿಕನ್ ಡಾಲರ್- ಹೆಚ್ಚಳವಾದ ಆಸ್ತಿ ಮೊತ್ತ 7900 ಕೋಟಿ ಯುಎಸ್ ಡಿ.

* ಸ್ಟೀವ್ ಬಾಲ್ಮರ್: ಮೈಕ್ರೋಸಾಫ್ಟ್ ಮಾಜಿ ಸಿಇಒ- ಸದ್ಯದ ಆಸ್ತಿ 7300 ಕೋಟಿ ಅಮೆರಿಕನ್ ಡಾಲರ್- ಹೆಚ್ಚಳವಾದ ಆಸ್ತಿ ಮೊತ್ತ 4400 ಕೋಟಿ ಯುಎಸ್ ಡಿ.

* ಮಾರ್ಕ್ ಝುಕರ್ ಬರ್ಗ್: ಫೇಸ್ ಬುಕ್ ಸಿಇಒ- ಸದ್ಯದ ಆಸ್ತಿ 9600 ಕೋಟಿ ಅಮೆರಿಕನ್ ಡಾಲರ್- ಹೆಚ್ಚಳವಾದ ಆಸ್ತಿ ಮೊತ್ತ 4400 ಕೋಟಿ ಯುಎಸ್ ಡಿ.

* ಡ್ಯಾನ್ ಗಿಲ್ಬರ್ಟ್: ಕ್ವಿಕನ್ ಲೋನ್ಸ್ ಸ್ಥಾಪಕ- ಸದ್ಯದ ಆಸ್ತಿ 4400 ಕೋಟಿ ಅಮೆರಿಕನ್ ಡಾಲರ್- ಹೆಚ್ಚಳವಾದ ಆಸ್ತಿ ಮೊತ್ತ 3900 ಕೋಟಿ ಯುಎಸ್ ಡಿ.

* ಬಿಲ್ ಗೇಟ್ಸ್: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ- ಸದ್ಯದ ಆಸ್ತಿ 11,700 ಕೋಟಿ ಅಮೆರಿಕನ್ ಡಾಲರ್- ಹೆಚ್ಚಳವಾದ ಆಸ್ತಿ ಮೊತ್ತ 3500 ಕೋಟಿ ಯುಎಸ್ ಡಿ.

* ಅಲೈಸ್ ವಾಲ್ಟನ್: ವಾಲ್ ಮಾರ್ಟ್- ಸದ್ಯದ ಆಸ್ತಿ 6,700 ಕೋಟಿ ಅಮೆರಿಕನ್ ಡಾಲರ್- ಹೆಚ್ಚಳವಾದ ಆಸ್ತಿ ಮೊತ್ತ 3300 ಕೋಟಿ ಯುಎಸ್ ಡಿ.

ಶ್ರೀಮಂತ ಅಮೆರಿಕನ್ ಆಗಿ ಮುಂದುವರಿದ ಬೆಜೋಸ್, ನಷ್ಟದಲ್ಲಿ ಟ್ರಂಪ್ಶ್ರೀಮಂತ ಅಮೆರಿಕನ್ ಆಗಿ ಮುಂದುವರಿದ ಬೆಜೋಸ್, ನಷ್ಟದಲ್ಲಿ ಟ್ರಂಪ್

* ಜಿಮ್ ವಾಲ್ಟನ್: ವಾಲ್ ಮಾರ್ಟ್- ಸದ್ಯದ ಆಸ್ತಿ 6,700 ಕೋಟಿ ಅಮೆರಿಕನ್ ಡಾಲರ್- ಹೆಚ್ಚಳವಾದ ಆಸ್ತಿ ಮೊತ್ತ 3200 ಕೋಟಿ ಯುಎಸ್ ಡಿ.

* ರಾಬ್ ವಾಲ್ಟನ್: ವಾಲ್ ಮಾರ್ಟ್- ಸದ್ಯದ ಆಸ್ತಿ 6,600 ಕೋಟಿ ಅಮೆರಿಕನ್ ಡಾಲರ್- ಹೆಚ್ಚಳವಾದ ಆಸ್ತಿ ಮೊತ್ತ 3200 ಕೋಟಿ ಯುಎಸ್ ಡಿ.

* ಲ್ಯಾರಿ ಎಲಿಸನ್: ಒರಾಕಲ್ ಕಾರ್ಪೊರೇಷನ್ ಮುಖ್ಯಸ್ಥ ಮತ್ತು ಸಹ ಸಂಸ್ಥಾಪಕ- ಸದ್ಯದ ಆಸ್ತಿ 7,900 ಕೋಟಿ ಅಮೆರಿಕನ್ ಡಾಲರ್- ಹೆಚ್ಚಳವಾದ ಆಸ್ತಿ ಮೊತ್ತ 3000 ಕೋಟಿ ಯುಎಸ್ ಡಿ.

English summary

These Billionaires Gained Most Money During Donald Trump Presidency In US

During Donald Trump presidency in US these billionaires gained most. Here is the list.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X