For Quick Alerts
ALLOW NOTIFICATIONS  
For Daily Alerts

ಪರಶಿವನಿಗಾಗಿ ಟಿಕೆಟ್ ಬುಕ್ ಮಾಡಿ, ಸೀಟ್ ಮೀಸಲಿಟ್ಟ ರೈಲ್ವೆ

|

ಇದೇ ಮೊದಲ ಬಾರಿಗೆ ರೈಲಿನಲ್ಲಿ ದೇವರಿಗೆ ಟಿಕೆಟ್ ಕಾಯ್ದಿರಿಸಲಾಗಿದೆ. ಎರಡು ರಾಜ್ಯಗಳ ಮೂರು ಜ್ಯೋತಿರ್ಲಿಂಗಗಳನ್ನು ತಲುಪುವ ಕಾಶಿ ಮಹಾಕಾಲ್ ಎಕ್ಸ್ ಪ್ರೆಸ್ ಗೆ ಭಾನುವಾರ ವಾರಾಣಸಿಯಿಂದ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಿದ್ದಾರೆ. ಅಂದ ಹಾಗೆ ಈ ರೈಲಿನ ಮುಖ್ಯ ಆಕರ್ಷಣೆಯಾದ ಆ ಶಿವನಿಗೆ ಶಾಶ್ವತವಾದ ಪ್ರಾಮುಖ್ಯವನ್ನು ಒದಗಿಸಲು ರೈಲ್ವೆ ಅಧಿಕಾರಿಗಳು ಒಂದು ಆಲೋಚನೆ ಮಾಡಿದರು.

 

ಆ ಪ್ರಕಾರವಾಗಿ, ಸೀಟ್ ನಂಬರ್ 64, ಬೋಗಿ B5 ಅನ್ನು ಆ ದೇವರಿಗಾಗಿಯೇ ಖಾಲಿ ಇರಿಸಲಾಯಿತು ಎಂದು ಉತ್ತರ ರೈಲ್ವೆಯ ವಕ್ತಾರ ದೀಪಕ್ ಕುಮಾರ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

 

ರೈಲ್ವೆ ಇಲಾಖೆಯಿಂದ ಐಆರ್ ಸಿಟಿಸಿ ಮೂಲಕವಾಗಿ ಆರಂಭಿಸಲಾದ ಮೂರನೇ ಕಾರ್ಪೊರೇಟ್ ರೈಲು ಇದು. ಉತ್ತರಪ್ರದೇಶದ ವಾರಾಣಸಿಯಿಂದ ಮಧ್ಯಪ್ರದೇಶದ ಇಂದೋರ್ ಮಧ್ಯೆ ಈ ರೈಲು ಚಲಿಸುತ್ತದೆ. ಇದಕ್ಕೆ ಕಾಶಿ ಮಹಾಕಾಲ್ ಎಕ್ಸ್ ಪ್ರೆಸ್ ಎಂದು ಹೆಸರನ್ನು ಇಡಲಾಗಿದೆ.

ಪರಶಿವನಿಗಾಗಿ ಟಿಕೆಟ್ ಬುಕ್ ಮಾಡಿ, ಸೀಟ್ ಮೀಸಲಿಟ್ಟ ರೈಲ್ವೆ

ಇದೇ ಮೊದಲ ಬಾರಿಗೆ ಶಿವನಿಗಾಗಿ ಸೀಟು ಕಾಯ್ದಿರಿಸಿ, ಅದನ್ನು ಖಾಲಿ ಬಿಡಲಾಗಿತ್ತು. ಆ ಸೀಟ್ ನಲ್ಲಿ ದೇವಾಲಯದ ಮಾದರಿಯನ್ನೂ ರೂಪಿಸಲಾಗಿತ್ತು. ಏಕೆಂದರೆ ಆ ಸೀಟು ಮಧ್ಯಪ್ರದೇಶದ ಉಜ್ಜೈನ್ ನ ಮಹಾಕಾಲನಿಗೆ ಮೀಸಲಾಗಿದೆ ಎಂದು ಉಳಿದ ಪ್ರಯಾಣಿಕರಿಗೆ ಗೊತ್ತಾಗಲಿ ಎಂದು ಹೀಗೆ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಮುಂದೆ ಈ ರೈಲಿನಲ್ಲಿ ಹೀಗೆ ಶಾಶ್ವತವಾಗಿ ಮಾಡಲಾಗುತ್ತದೆಯಾ ಎಂಬ ನಿರ್ಧಾರ ತೆಗೆದುಕೊಂಡಿಲ್ಲ. ಈ ರೈಲಿನಲ್ಲಿ ಭಕ್ತಿ ಸಂಗೀತ, ಪ್ರತಿ ಬೋಗಿಯಲ್ಲಿ ಇಬ್ಬರು ಖಾಸಗಿ ಗಾರ್ಡ್ ಗಳು, ಸಸ್ಯಾಹಾರವನ್ನು ಮಾತ್ರ ಪೂರೈಕೆ ಮಾಡಲಾಗುತ್ತದೆ. ಇದು ಪೂರ್ತಿಯಾಗಿ 3AC ಸೌಕರ್ಯವನ್ನು ಹೊಂದಿದ್ದು, ವಾರದಲ್ಲಿ ಮೂರು ದಿನ ವಾರಾಣಸಿ ಮತ್ತು ಇಂದೋರ್ ಮಧ್ಯೆ ಸಂಚರಿಸುತ್ತದೆ.

ಪರಶಿವನಿಗಾಗಿ ಟಿಕೆಟ್ ಬುಕ್ ಮಾಡಿ, ಸೀಟ್ ಮೀಸಲಿಟ್ಟ ರೈಲ್ವೆ

ಈ ರೈಲು ವಾರಾಣಸಿ ಮತ್ತು ಇಂದೋರ್ ಮಧ್ಯೆ ಲಖನೌ ಮೂಲಕ ಸಂಚರಿಸುತ್ತದೆ. 1131 ಕಿ.ಮೀ. ಕವರ್ ಮಾಡುತ್ತದೆ. ವಾರಾಣಸಿ ಮತ್ತು ಇಂದೋರ್ ಮಧ್ಯೆ ಪ್ರಯಾಗ್ ರಾಜ್ ಮೂಲಕ 1102 ಕಿ.ಮೀ. ಸಂಚರಿಸಲು 19 ಗಂಟೆ ಸಮಯ ತೆಗೆದುಕ್ಒಳ್ಳುತ್ತದೆ.

English summary

Ticket Booked And Seat Reserved For Deity In Train First Time

In Varanasi Mahakal express train train ticket booked and seat reserved for deity Shiva. Here is the complete details.
Story first published: Monday, February 17, 2020, 9:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X