For Quick Alerts
ALLOW NOTIFICATIONS  
For Daily Alerts

ಚೀನಾ ಜೊತೆಗೆ ವ್ಯಾಪಾರ ನಡೆಸಲು ಯಾವುದೇ ಆಸಕ್ತಿಯಿಲ್ಲ: ಡೊನಾಲ್ಡ್‌ ಟ್ರಂಪ್

|

ಅಮೆರಿಕಾ ಚೀನಾ ವ್ಯಾಪಾರ ಒಪ್ಪಂದದ ಬಗ್ಗೆ ಮರು ಮಾತುಕತೆ ನಡೆಸುವುದನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿದ್ದಾರೆ. ಹಾಂಗ್ ಕಾಂಗ್‌ನ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, ಪತ್ರಿಕಾಗೋಷ್ಠಿಯಲ್ಲಿ ಚೀನಾ ಜೊತೆಗಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಚೀನಾ ಮರು ಮಾತುಕತೆ ನಡೆಸಲು ಬಯಸುತ್ತದೆಯೇ? ನೀವು ಅದರಲ್ಲಿ ಆಸಕ್ತಿ ಹೊಂದಿದ್ದೀರಾ? ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್ ಚೀನಾದೊಂದಿಗೆ ಯಾವುದೇ ರೀತಿಯ ವ್ಯಾಪಾರ ಒಪ್ಪಂದಕ್ಕೆ ಶ್ವೇತಭವನ ಸಿದ್ಧವಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.

'' ಅಲ್ಲವೇ ಅಲ್ಲ. ಸ್ವಲ್ಪ ಮಟ್ಟಿಗೂ ಸಹ ಇಲ್ಲ. ನನಗೆ ಯಾವುದೇ ಆಸಕ್ತಿ ಇಲ್ಲ, ನಾವು ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ನಾನು ಅವರಲ್ಲಿ ಕೇಳಿದ್ದೇನೆ, ಅವರು ವ್ಯಾಪಾರ ಮಾತುಕತೆಯನ್ನು ಮತ್ತೆ ತೆರೆಯಲು ಬಯಸುತ್ತಾರೆ. ಏಕೆಂದರೆ ಅವರಿಗೆ ಉತ್ತಮ ವ್ಯವಹಾರವಾಗಿದೆ'' ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಚೀನಾ ಜೊತೆಗೆ ವ್ಯಾಪಾರ ನಡೆಸಲು ಯಾವುದೇ ಆಸಕ್ತಿಯಿಲ್ಲ: ಟ್ರಂಪ್

ಕಳೆದ ಹಲವು ದಶಕಗಳಿಂದ ಅಮೆರಿಕಾದ ಲಾಭವನ್ನು ಪಡೆದುಕೊಳ್ಳುದ್ದರು. ಏಕೆಂದರೆ ಈ ಹಿಂದೆ ಅದನ್ನು ಮಾಡಲು ಅವರಿಗೆ ಅವಕಾಶ ನೀಡಲಾಯಿತು ಎಂದು ತಿಳಿಸಿದ ಟ್ರಂಪ್ ಮುಂದೆ ಈ ರೀತಿಯ ಅವಕಾಶ ನೀಡಲಾಗುವುದಿಲ್ಲ, ನನಗೆ ಇದರ ಬಗ್ಗೆ ಆಸಕ್ತಿ ಇಲ್ಲ. ಅವರು ಸಹಿ ಮಾಡಿದ ಒಪ್ಪಂದಕ್ಕೆ ಅವರು ಬದ್ಧರಾಗಿರುತ್ತಾರೆಯೇ ಎಂಬುದನ್ನು ನೋಡಬೇಕಿದೆ ಎಂದಿದ್ದಾರೆ.

ಜನವರಿಯಲ್ಲಿ ಅಮೆರಿಕಾ-ಚೀನಾ ವ್ಯಾಪಾರ ಒಪ್ಪಂದದ ಪ್ರಕಾರ ಬೀಜಿಂಗ್ 2020-2021ರಲ್ಲಿ ಯುಎಸ್ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಕನಿಷ್ಠ 200 ಬಿಲಿಯನ್ ಯುಎಸ್ ಡಾಲರ್‌ಗಳನ್ನು ಖರೀದಿಸಲು ಒಪ್ಪಿಕೊಂಡಿತು. ಈ ವರ್ಷ ಯುಎಸ್‌ನಿಂದ ಚೀನಾಕ್ಕೆ 76.7 ಬಿಲಿಯನ್ ಮತ್ತು 2021 ರಲ್ಲಿ 123.3 ರಫ್ತು ಇದರಲ್ಲಿ ಸೇರಿದೆ.

ಆದರೆ ಚೀನಾ ಒಪ್ಪಂದದ ಪ್ರಕಾರ ನಡೆದುಕೊಳ್ಳದಿದ್ದರೆ, ಇತರೆ ದೇಶಗಳೊಂದಿಗೆ ಅವರು ಹೇಗೆ ತಾನೆ ವ್ಯಾಪಾರ ಮುಂದುವರಿಸಲು ಸಾಧ್ಯ ಎಂದು ಇತ್ತೀಚೆಗಷ್ಟೇ ಅಮೆರಿಕಾ ಖಜಾನೆ ಕಾರ್ಯದರ್ಶಿ ಮೆನುಚಿನ್ ಎಚ್ಚರಿಸಿದ್ದರು.

English summary

Trump Says Not Interested In China Trade Deal

United States President Donald Trump says he is opposed to renegotiating the US-China "Phase One" trade deal
Story first published: Tuesday, May 12, 2020, 16:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X