ಟ್ವಿಟ್ಟರ್ ಖಾತೆಯಲ್ಲಿ ಬ್ಲ್ಯೂ ಟಿಕ್‌ಗೆ ನೀವು ತೆರೆಬೇಕಾದೀತು ಮಾಸಿಕ 20 ಡಾಲರ್!
ಟ್ಟಿಟ್ಟರ್‌ನ ಹೊಸ ಮಾಲೀಕರಾದ ಎಲಾನ್ ಮಸ್ಕ್ ತನ್ನ ಮಾಲೀಕತ್ವದಲ್ಲಿ ಟ್ವಿಟ್ಟರ್‌ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲು ಆರಂಭ ಮಾಡಿದ್ದಾರೆ. ಈಗ ವೆರಿಫಿಕೇಶನ್‌ಗೂ ಶುಲ್ಕವನ್ನು ವಿಧಿಸಲು ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಅದು ಕೂಡಾ ಮಾಸಿಕ ಶುಲ್ಕ!
ಸಾಮಾನ್ಯವಾಗಿ ಟ್ವಿಟ್ಟರ್‌ನಲ್ಲಿ ಖಾತೆಯು ಅಧಿಕೃತವೆಂದಾದರೆ ಆ ಖಾತೆಯಲ್ಲಿ ಬ್ಲ್ಯೂ ಟಿಕ್ ಇರುತ್ತದೆ. ಆದರೆ ಇನ್ನು ಮುಂದೆ ಬ್ಲ್ಯೂ ಟಿಕ್‌ಗಾಗಿ ಖಾತೆದಾರರು ಮಾಸಿಕವಾಗಿ 20 ಡಾಲರ್ ಪಾವತಿ ಮಾಡಬೇಕಾಗಬಹುದು. ಅದೇ ಸಮಯದಲ್ಲಿ ಚಂದಾದಾರಿಕೆ ಸೇವೆಯ ವೆಚ್ಚವನ್ನು ನಾಲ್ಕು ಪಟ್ಟು ಹೆಚ್ಚಿಸುತ್ತದೆ.
ಈ ನಡುವೆ ಹಲವಾರು ಮಂದಿ ನಮ್ಮ ಖಾತೆಯನ್ನು ನೀವು ಪರಿಶೀಲಿಸುವುದೇ ಬೇಡ ಎಂದು ತಿಳಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಕಳೆದ ವಾರದಿಂದ ಹಲವಾರು ಬದಲಾವಣೆಗಳನ್ನು ನಡೆಸಲಾಗುತ್ತಿದೆ. ಎಲಾನ್ ಮಸ್ಕ್ ತಾನು ಸಂಸ್ಥೆಯ ಮಾಲೀಕತ್ವವನ್ನು ವಹಿಸುವ ಮುನ್ನವೇ ಬದಲಾವಣೆ ಮಾಡುವ ಬಗ್ಗೆ ಸುಳಿವನ್ನು ನೀಡಿದ್ದರು.

ಬಳಕೆದಾರರು ತಮ್ಮ ಪರಿಶೀಲಿಸಿದ ಟ್ವಿಟ್ಟರ್ ಖಾತೆಗಾಗಿ ಅಂದರೆ ಬ್ಲ್ಯೂ ಟಿಕ್‌ಗಾಗಿ ಶೀಘ್ರದಲ್ಲೇ ಪಾವತಿ ಮಾಡಬೇಕಾಗುತ್ತದೆ. ಅಂದರೆ ಮಾಸಿಕ ಆಧಾರದಲ್ಲಿ ಈ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
ಈ ಹಿಂದೆ ಎಷ್ಟಿತ್ತು ಶುಲ್ಕ?
ಟ್ವಿಟ್ಟರ್‌ನಲ್ಲಿ ಬ್ಲ್ಯೂ ಟಿಕ್ ಪಡೆಯಬೇಕಾದರೆ ಅಂದರೆ ನಿಮ್ಮ ಖಾತೆಯನ್ನು ಅಧಿಕೃತ ಎಂದು ಘೋಷಿಸಬೇಕಾದರೆ ಈ ಹಿಂದೆ ಮಾಸಿಕವಾಗಿ 4.99 ಡಾಲರ್ ಪಾವತಿ ಮಾಡಬೇಕಾಗಿತ್ತು. ಆದರೆ ಈಗ ಅದನ್ನು ಮೂರು ಪಟ್ಟು ಹೆಚ್ಚಳ ಮಾಡಲು ಸಂಸ್ಥೆ ನಿರ್ಧಾರ ಮಾಡಿದೆ ಎಂದು ವರದಿಯಾಗಿದೆ. ಅಂದರೆ ನಿಮ್ಮದು ಅಧಿಕೃತ ಖಾತೆಯಾದರೆ ಮಾಸಿಕವಾಗಿ 19.99 ಡಾಲರ್ ಪಾವತಿ ಮಾಡಬೇಕಾಗುತ್ತದೆ. ಇದು ನೆಟ್‌ಫ್ಲಿಕ್ಸ್‌ನ ಪ್ರಿಮಿಯಂ ಚಂದಾದಾರಿಕೆಗೆ ಸರಿಸುಮಾರು ಆಗಿದೆ.
ಈ ಹೊಸ ನೀತಿ ಪ್ರಾರಂಭವಾದ ಬಳಿಕ ಬಳಕೆದಾರರು ಚಂದಾದಾರರಾಗಲು ಅಥವಾ ತಮ್ಮ ನೀಲಿ ಟಿಕ್ ಅನ್ನು ಕಳೆದುಕೊಳ್ಳಲು 90 ದಿನಗಳನ್ನು ಹೊಂದಿರುತ್ತಾರೆ. ಇನ್ನು ಪ್ರಸ್ತುತ ಕೆಲವು ದೇಶಗಳಲ್ಲಿ ಟ್ವಿಟ್ಟರ್‌ನಲ್ಲಿ ಬ್ಲ್ಯೂ ಟಿಕ್ ಇಲ್ಲ. ಯುಎಸ್, ಕೆನಡಾ, ಆಸ್ಟ್ರೇಲಿಯಾ, ಅಥವಾ ನ್ಯೂಜಿಲೆಂಡ್‌ನಲ್ಲಿ ಬ್ಲ್ಯೂ ಟಿಕ್ ಇಲ್ಲ. ಆ ದೇಶಗಳಲ್ಲಿ ಯಾವ ರೀತಿ ನಿಯಮ ಬರಲಿದೆ ಎಂಬುವುದು ತಿಳಿದಿಲ್ಲ.