For Quick Alerts
ALLOW NOTIFICATIONS  
For Daily Alerts

ಟ್ರಂಪ್ ಖಾತೆ ಬಂದ್, ಟ್ವಿಟ್ಟರ್ ಷೇರು ಕುಸಿತ, ಭಾರಿ ನಷ್ಟ

|

ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಟ್ವಿಟ್ಟರ್‌ನಿಂದ ಗೇಟ್ ಪಾಸ್ ನೀಡಿದ್ದ ಟ್ವಿಟ್ಟರ್ ಸಂಸ್ಥೆ ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ ಅನುಭವಿಸಿದೆ. ಟ್ರಂಪ್ ಪರ ಬೆಂಬಲಿಗರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಟ್ವಿಟ್ಟರ್ ಕೇಂದ್ರ ಕಚೇರಿಯ ಹೊರಭಾಗದಲ್ಲಿ ಸೋಮವಾರ ಬೃಹತ್ ಪ್ರತಿಭಟನೆಯನ್ನು ನಡೆಸಿದ್ದಾರೆ. ಟ್ರಂಪ್ ಬೆಂಬಲಿಗರು ಸಾಮಾಜಿಕ ಜಾಲತಾಣ ಸಂಸ್ಥೆಗಳ ಮೇಲೆ ವಿವಿಧ ರೀತಿಯಲ್ಲಿ ದಾಳಿ ನಡೆಸುವ ಆತಂಕ ಎದುರಾಗಿದೆ. ಟ್ವಿಟ್ಟರ್ ಹಾಗೂ ಫೇಸ್ಬುಕ್ ಸಂಸ್ಥೆ ಉದ್ಯೋಗಿಗಳಿಗೆ ಸುರಕ್ಷಿತವಾಗಿರುವಂತೆ ಸೂಚನೆ ನೀಡಲಾಗಿದೆ.

ಕ್ಯಾಪಿಟಲ್ ಹಿಲ್ಸ್ ಮುತ್ತಿಗೆ, ಪ್ರತಿಭಟನೆ ಸಂದರ್ಭದಲ್ಲಿ ಟ್ರಂಪ್ ಟ್ವೀಟ್ ಮೂಲಕ ತಮ್ಮ ಬೆಂಬಲಿಗರಿಗೆ ಉತ್ತೇಜನ ನೀಡಿದ್ದಲ್ಲದೆ, ಪ್ರಚೋದನಕಾರಿ ವಿಡಿಯೋ ಸಂದೇಶಗಳನ್ನು ಹಾಕಿಕೊಂಡಿದ್ದರು. ಟ್ರಂಪ್ ನಡೆಯಿಂದ ಟ್ವಿಟ್ಟರ್ ಸುರಕ್ಷತೆ, ದೇಶದ ಭದ್ರತೆಗೆ ತೊಂದರೆಯಾಗಲಿದೆ ಎಂಬ ಕಾರಣ ನೀಡಿ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಇಂಡೋ ಅಮೆರಿಕನ್, ಟ್ವಿಟ್ಟರ್ ಪರ ವಕೀಲೆ ವಿಜಯಾ ಗದ್ದೆ ಬಂದ್ ಮಾಡಿಸಿದ್ದರು.

ಟ್ರಂಪ್ ಖಾತೆ ಬಂದ್, ಟ್ವಿಟ್ಟರ್ ಷೇರು ಕುಸಿತ, ಭಾರಿ ನಷ್ಟ

ಆದರೆ ಈ ನಿರ್ಧಾರದಿಂದ ಟ್ವಿಟ್ಟರ್ ನಲುಗಿ ಹೋಗಿದೆ. ಒಂದೇ ದಿನದಲ್ಲಿ ಅಮೆರಿಕದ ಮಾರುಕಟ್ಟೆಯಲ್ಲಿ ಟ್ವಿಟ್ಟರ್ ಸುಮಾರು 5 ಸಾವಿರ ಕೋಟಿ ರೂಪಾಯಿ ಕಳೆದುಕೊಂಡಿದೆ ಎಂಬ ವರದಿ ಬಂದಿದೆ. ಟ್ವಿಟ್ಟರ್ ಸಂಸ್ಥೆ ಷೇರುಗಳು ಶೇ 12ರಷ್ಟು ಕುಸಿತ ಕಂಡಿವೆ. ಒಟ್ಟಾರೆ 5 ಬಿಲಿಯನ್ ಯುಎಸ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಟ್ವಿಟ್ಟರ್ ಕಳೆದುಕೊಂಡಿದೆ. 88 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಟ್ರಂಪ್ ಅತ್ಯಂತ ಪ್ರಭಾವಿ ಬಳಕೆ ದಾರರಾಗಿದ್ದರು.

English summary

Twitter Loses 5 Billion Dollar market value After Banning Trump

Twitter loses 5 billion dollars of its market value after banning Trump permanently from Twitter.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X