For Quick Alerts
ALLOW NOTIFICATIONS  
For Daily Alerts

ಮೊದಲ ತ್ರೈಮಾಸಿಕದಲ್ಲಿ US ಆರ್ಥಿಕತೆ 33% ಇಳಿಕೆ: ಸಾರ್ವಕಾಲಿಕ ಹೀನಾಯ ಕುಸಿತ

|

ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ಯು.ಎಸ್. ಆರ್ಥಿಕತೆಯು ವಾರ್ಷಿಕ ದರ 33% ಇಳಿಕೆ ಆಗಿದೆ. ಯಾವುದೇ ತ್ರೈಮಾಸಿಕದಲ್ಲಿ ದಾಖಲಾಗಿರುವ ಹೀನಾಯ ಆರ್ಥಿಕ ಕುಸಿತ ಇದು. ಕೊರೊನಾ ಬಿಕ್ಕಟ್ಟು ತಲೆದೋರಿದ ಮೇಲೆ ವ್ಯಾಪಾರ- ವ್ಯವಹಾರ ಮುಚ್ಚಲಾಗಿತ್ತು ಹಾಗೂ ಹತ್ತಾರು ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ನಿರುದ್ಯೋಗ ಪ್ರಮಾಣವು 14.7 ಪರ್ಸೆಂಟ್ ಗೆ ಏರಿಕೆ ಆಗಿದೆ ಎಂದು ಗುರುವಾರ ಯು.ಎಸ್. ಸರ್ಕಾರ ತಿಳಿಸಿದೆ.

ಜರ್ಜರಿತವಾದ ಅಮೆರಿಕದ ಆರ್ಥಿಕತೆ: ಮತ್ತಷ್ಟು ಹದಗೆಡುವ ಮುನ್ಸೂಚನೆಜರ್ಜರಿತವಾದ ಅಮೆರಿಕದ ಆರ್ಥಿಕತೆ: ಮತ್ತಷ್ಟು ಹದಗೆಡುವ ಮುನ್ಸೂಚನೆ

ವಾಣಿಜ್ಯ ಇಲಾಖೆಯು ಜಿಡಿಪಿ ಎಷ್ಟು ಕಡಿಮೆ ಎಂಬುದನ್ನು ಅಂದಾಜು ಮಾಡಿದೆ. 1947ರಿಂದ ಈಚೆಗೆ ದಾಖಲಾಗಿರುವ ಅತ್ಯಂತ ದೊಡ್ಡ ಮಟ್ಟದ ಜಿಡಿಪಿ ಕುಸಿತ ಇದು. ಈ ಹಿಂದೆ ತುಂಬ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದ್ದು 1958ರಲ್ಲಿ. ಆಗ ಜಿಡಿಪಿ 10 ಪರ್ಸೆಂಟ್ ಕುಸಿದಿತ್ತು. ಆ ಸಂದರ್ಭದಲ್ಲಿ ಐಸೆನ್ ಹೋವರ್ ಅಮೆರಿಕ ಅಧ್ಯಕ್ಷರಾಗಿದ್ದರು.

ಸತತ 11 ವರ್ಷಗಳ ಕಾಲ ವಿಸ್ತರಣೆಗೆ ತಡೆ

ಸತತ 11 ವರ್ಷಗಳ ಕಾಲ ವಿಸ್ತರಣೆಗೆ ತಡೆ

2020ರ ಜನವರಿಯಿಂದ ಮಾರ್ಚ್ ತ್ರೈಮಾಸಿಕದಲ್ಲಿ ಐದು ಪರ್ಸೆಂಟ್ ಇಳಿಕೆಯಾಗಿತ್ತು. ಸತತ 11 ವರ್ಷಗಳ ಕಾಲ ವಿಸ್ತರಣೆ ಆಗುತ್ತಲೇ ಸಾಗಿದ್ದ ಯುನೈಟೆಡ್ ಸ್ಟೇಟ್ಸ್ ಆರ್ಥಿಕತೆ ಮೊದಲ ಬಾರಿಗೆ ಅಧಿಕೃತವಾಗಿ ಹಿಂಜರಿತಕ್ಕೆ ಪ್ರವೇಶ ಪಡೆದಿತ್ತು. ಗ್ರಾಹಕರು ಖರ್ಚು ಮಾಡುವುದರಿಂದ ಹಿಂದೆ ಸರಿದಿದ್ದಕ್ಕೆ ಈ ಸ್ಥಿತಿ ಉದ್ಭವಿಸಿತ್ತು. ಒಟ್ಟಾರೆ ಆರ್ಥಿಕ ಚಟುವಟಿಕೆಯ 70% ಮೇಲೆ ಈ ಪ್ರಭಾವ ಆಗಿತ್ತು.

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾರೀ ಕುಸಿತ

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾರೀ ಕುಸಿತ

ಪ್ರವಾಸೋದ್ಯಮ ಸ್ಥಗಿತವಾಗಿ, ರೆಸ್ಟೋರೆಂಟ್, ಬಾರ್, ಮನರಂಜನಾ ಸ್ಥಳಗಳು ಮುಚ್ಚಿದ್ದರಿಂದಾಗಿ ಗ್ರಾಹಕರು ಖರ್ಚು ಮಾಡುವ ಪ್ರಮಾಣ ವಾರ್ಷಿಕವಾಗಿ ದರ 34% ಕುಸಿದಿತ್ತು. ಇದರ ಪರಿಣಾಮವಾಗಿ ವ್ಯವಹಾರ ಹೂಡಿಕೆ ಹಾಗೂ ರಿಯಲ್ ಎಸ್ಟೇಟ್ ನಲ್ಲಿ ಭಾರೀ ಕುಸಿತವಾಗಿದೆ. ಸರ್ಕಾರದಿಂದ ಖರ್ಚಿನ ಪ್ರಮಾಣ ಕಡಿಮೆ ಆಗಿದೆ. ಏಕೆಂದರೆ ತೆರಿಗೆ ಸಂಗ್ರಹವೇ ಕಡಿಮೆ ಆಗಿದೆ. ಇನ್ನು ಎಷ್ಟೋ ವ್ಯವಹಾರಗಳು ಮುಚ್ಚಲಾಗಿದೆ.

ಹತ್ತಾರು ಲಕ್ಷ ಉದ್ಯೋಗ ನಷ್ಟ

ಹತ್ತಾರು ಲಕ್ಷ ಉದ್ಯೋಗ ನಷ್ಟ

ಈ ಆರ್ಥಿಕ ಹಿಂಜರಿತದಿಂದ ಹತ್ತಾರು ಲಕ್ಷ ಉದ್ಯೋಗ ನಷ್ಟವಾಗಿದೆ. ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ನಿರುದ್ಯೋಗ ಅನುಕೂಲಗಳನ್ನು ಪಡೆಯಲು ಯು.ಎಸ್.ನಲ್ಲಿ ಅರ್ಜಿ ಹಾಕಿಕೊಂಡಿದ್ದಾರೆ. ಈ ವರ್ಷದ ನವೆಂಬರ್ ನಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಇದೆ. ಅಕ್ಟೋಬರ್ ಕೊನೆಗೆ ಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆ ಇದೆ. ಆದರೆ ಕೊರೊನಾ ಬಿಕ್ಕಟ್ಟು ಅಮೆರಿಕದಲ್ಲಿ ಪೂರ್ತಿ ಸರಿ ಹೋಗುವ ತನಕ ಆರ್ಥಿಕತೆ ಚೇತರಿಕೆ ನಿರೀಕ್ಷೆ ಮಾಡುವುದು ಕಷ್ಟ.

English summary

U.S. Economy Shrank 33 Percent In Last Quarter

Due to Corona virus economic impact U.S. economy shrank 33% in April to June quarter. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X