For Quick Alerts
ALLOW NOTIFICATIONS  
For Daily Alerts

ಬ್ರಿಟನ್‌ನ ಏಷ್ಯನ್ ಸಿರಿವಂತರ ಪಟ್ಟಿಯಲ್ಲಿ ರಿಷಿ ಸುನಕ್; ಟಾಪ್-10 ಲಿಸ್ಟಲ್ಲಿ ಯಾರಿದ್ದಾರೆ?

|

ಲಂಡನ್, ನ. 25: ಬ್ರಿಟನ್‌ನ ಈ ವರ್ಷದ ಏಷ್ಯನ್ ಶ್ರೀಮಂತರ ಪಟ್ಟಿ ಪ್ರಕಟವಾಗಿದೆ. ನೂತನ ಪ್ರಧಾನಿ ರಿಷಿ ಸುನಕ್ ಮತ್ತವರ ಪತ್ನಿ ಅಕ್ಷತಾ ಮೂರ್ತಿ ಮೊದಲ ಬಾರಿಗೆ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಸುನಕ್ ದಂಪತಿ 790 ಮಿಲಿಯನ್ ಪೌಂಡ್ (ಸುಮಾರು 7,790 ಕೋಟಿ ರೂ) ಆಸ್ತಿ ಹೊಂದಿದ್ದು ಈ ಏಷ್ಯನ್ ಸಿರಿವಂತರ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದ್ದಾರೆ.

ಈಸ್ಟರ್ನ್ ಐ ನಿಯತಕಾಲಿಕೆಯು 'ಏಷ್ಯನ್ ರಿಚ್ ಲಿಸ್ಟ್' ಅನ್ನು ಪ್ರತೀ ವರ್ಷವೂ ಪ್ರಕಟಿಸುತ್ತದೆ. ಇದರಲ್ಲಿ ಬ್ರಿಟನ್‌ನಲ್ಲಿರುವ ಏಷ್ಯನ್ ಮೂಲದ ಸಮುದಾಯದವರಲ್ಲಿ 101 ಅತಿ ಶ್ರೀಮಂತರನ್ನು ಗುರುತಿಸಿ ಪಟ್ಟಿ ಮಾಡುತ್ತದೆ. ಈ ವರ್ಷದ ಪಟ್ಟಿಯಲ್ಲಿ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ದಂಪತಿ ಜೊತೆಗೆ ಇನ್ನೂ ನಾಲ್ವರು ಮೊದಲ ಬಾರಿಗೆ ಸ್ಥಾನ ಪಡೆದಿದ್ದಾರೆ.

ಆರ್ಥಿಕ ಬೆಳವಣಿಗೆ ವಿಚಾರದಲ್ಲಿ ಚೀನಾಗಿಂತ ಭಾರತ ಉತ್ತಮ ಎಂದು ಮೂಡೀಸ್ ಹೇಳಲು ಏನು ಕಾರಣ?ಆರ್ಥಿಕ ಬೆಳವಣಿಗೆ ವಿಚಾರದಲ್ಲಿ ಚೀನಾಗಿಂತ ಭಾರತ ಉತ್ತಮ ಎಂದು ಮೂಡೀಸ್ ಹೇಳಲು ಏನು ಕಾರಣ?

ಕಳೆದ ವರ್ಷದ ಪಟ್ಟಿಯಲ್ಲಿ 16 ಬಿಲಿಯನೇರ್‌ಗಳಿದ್ದರು. ಈ ಬಾರಿ 16 ಬಿಲಿಯನೇರ್‌ಗಳಾಗಿದ್ದಾರೆ. ಈ ಪಟ್ಟಿಯಲ್ಲಿರುವ ಶ್ರೀಮಂತರ ಒಟ್ಟು ಆಸ್ತಿ ಗಣಿಸಿದರೆ 113.2 ಬಿಲಿಯನ್ ಪೌಂಡ್ (ಸುಮಾರು 11.17 ಲಕ್ಷ ಕೋಟಿ ರೂಪಾಯಿ) ಆಗುತ್ತದೆ.

ಹಿಂದೂಜಾ ಕುಟುಂದವರು ಸತತ ಎಂಟನೇ ಬಾರಿ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಇವರ ಒಟ್ಟು ಆಸ್ತಿ 30.5 ಬಿಲಿಯನ್ ಪೌಂಡ್ (ಸುಮಾರು 3 ಲಕ್ಷ ಕೋಟಿ ರೂ) ಇದೆ. ಕಳೆದ ವರ್ಷಕ್ಕಿಂತ ಈ ವರ್ಷ ಇವರ ಆಸ್ತಿ ಬಹುತೇಕ ಶೇ. 10ರಷ್ಟು ಏರಿಕೆ ಆಗಿದೆ. ಲಂಡನ್‌ನ ವೆಸ್ಟ್‌ಮಿನ್ಸ್‌ಟರ್ ಪಾರ್ಕ್ ಪ್ಲಾಜಾ ಹೋಟೆಲ್‌ನಲ್ಲಿ ಬುಧವಾರ ರಾತ್ರಿ ನಡೆದ 24ನೇ ವಾರ್ಷಿಕ ಏಷ್ಯನ್ ಬ್ಯುಸಿನೆಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಲಂಡನ್ ಮೇಯರ್ ಸಾದಿಖ್ ಖಾನ್ ಅವರು ಹಿಂದೂಜಾ ಕುಟುಂಬದ ಸದಸ್ಯೆ ರಿತು ಛಾಬ್ರಿಯಾಗೆ 'ಏಷ್ಯನ್ ರಿಚ್ ಲಿಸ್ಟ್ 2022' ಪ್ರತಿಯನ್ನು ನೀಡಿ ಗೌರವಿಸಿದರು.

ಕ್ರೆಡಿಟ್ ಕಾರ್ಡ್, ಯುಪಿಐ ಮೂಲಕ ತೆರಿಗೆ ಪಾವತಿಸುವುದು ಹೇಗೆ? ಕ್ರೆಡಿಟ್ ಕಾರ್ಡ್, ಯುಪಿಐ ಮೂಲಕ ತೆರಿಗೆ ಪಾವತಿಸುವುದು ಹೇಗೆ?

ಬ್ರಿಟನ್‌ನ ಟಾಪ್-10 ಏಷ್ಯನ್ ಶ್ರೀಮಂತರು

1) ಹಿಂದೂಜಾ ಫ್ಯಾಮಿಲಿ: 30.5 ಬಿಲಿಯನ್ ಪೌಂಡ್
2) ಲಕ್ಷ್ಮಿ ಮಿತ್ತಲ್ ಕುಟುಂಬ: 12.8 ಬಿಲಿಯನ್ ಪೌಂಡ್
3) ಪ್ರಕಾಶ್ ಲೋಹಿಯಾ ಫ್ಯಾಮಿಲಿ: 8.8 ಬಿಲಿಯನ್ ಪೌಂಡ್
4) ನಿರ್ಮಲ್ ಸೇಠಿಯಾ: 6.5 ಬಿಲಿಯನ್ ಪೌಂಡ್
6) ಜುಬೇರ್ ಮತ್ತು ಮೋಹ್ಸಿನ್ ಇಸ್ಸಾ: 4.75 ಬಿಲಿಯನ್ ಪೌಂಡ್
7) ಸಿಮೋನ್ ಅರೋರ, ಬಾಬ್ಬಿ ಮತ್ತು ರಾಬಿನ್ ಅರೋರಾ: 2.6 ಬಿಲಿಯನ್ ಪೌಂಡ್
8) ಸೈರಸ್ ವಾಂಡ್ರೆವಾಲ ಮತ್ತು ಪತ್ನಿ ಪ್ರಿಯಾ: 2.4 ಬಿಲಿಯನ್ ಪೌಂಡ್
9) ಸರ್ ಅನ್ವರ್ ಪರ್ವೇಜ್ ಕುಟುಂಬ: 1.9 ಬಿಲಿಯನ್ ಪೌಂಡ್
10) ಜಸ್ಮಿಂದರ್ ಸಿಂಗ್ ಕುಟುಂಬ: 1.5 ಬಿಲಿಯನ್ ಪೌಂಡ್

ಬ್ರಿಟನ್‌ನ ಏಷ್ಯನ್ ಸಿರಿವಂತರ ಪಟ್ಟಿಯಲ್ಲಿ ರಿಷಿ ಸುನಕ್

ಈ ಟಾಪ್ 10 ಪಟ್ಟಿಯಲ್ಲಿ ಭಾರತೀಯ ಮೂಲದವರೇ ಏಳೆಂಟು ಮಂದಿ ಇರುವುದು ವಿಶೇಷ. 101 ಮಂದಿಯ ಪಟ್ಟಿಯಲ್ಲಿ ಬಹಳ ಮಂದಿ ಭಾರತೀಯ ಮೂಲದವರಿದ್ದಾರೆ. ಪಾಕಿಸ್ತಾನೀ ಮೂಲದವರೂ ಕೆಲವರಿದ್ದಾರೆ. ಅಂಥವರಲ್ಲಿ ರಾಜಾ ಅದಿಲ್ ಮೊದಲ ಬಾರಿಗೆ ಈ ಪಟ್ಟಿಗೆ ಪದಾರ್ಪಣೆ ಮಾಡಿದ್ದಾರೆ. ಇವರು ಫ್ರಾಂಚೈಸಿ ಬ್ಯುಸಿನೆಸ್‌ನಲ್ಲಿ ಸಿದ್ಧಹಸ್ತರೆನಿಸಿದ್ದಾರೆ. ಬರ್ಗರ್ ಕಿಂಗ್, ಕೆಎಫ್‌ಸಿ, ಕೋಸ್ಟಾ ಕಾಫಿ, ಟ್ಯಾಕೋ ಬೆಲ್, ಎನಿಟೈಮ್ ಫಿಟ್ನೆಸ್ ಮೊದಲಾದ ಹೋಟೆಲ್, ರೆಸ್ಟೋರೆಂಟ್‌ಗಳ ಫ್ರಾಂಚೈಸಿ ಪಡೆದು ನಿರ್ವಹಣೆ ಮಾಡುತ್ತಾರೆ.

ಭಾರತ ಮೂಲದ ಮೂನ್‌ಪಾಲ್ ಸಿಂಗ್ ಗ್ರೆವಾಲ್ ಅವರು ಬ್ರಿಟನ್‌ನಲ್ಲಿ ಡಾಮಿನೋಸ್ ಪಿಜ್ಜಾದ ಅತಿದೊಡ್ಡ ಫ್ರಾಂಚೈಸಿ ಎನಿಸಿದ್ದಾರೆ. ಡಾ. ನಿಕೇಶ್, ದಾನೇಶ್, ಸಂಜಯ್ ಗಾಧಿಯಾ, ಅಪೂರ್ವ್ ಬಾಗ್ರಿ, ಸುರೀಂದರ್ ಅರೋರಾ, ರಂಜಿತ್ ಬೋಪಾರನ್ ಸೇರಿದಂತೆ ಹಲವರು ಈ 101 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಹಣಕ್ಕಿಂತ ಶ್ರಮಕ್ಕೆ ಬೆಲೆ ಎಂದ ಸುನಕ್

ಬ್ರಿಟನ್‌ನ ನೂತನ ಪ್ರಧಾನಿ ರಿಷಿ ಸುನಕ್ ಅವರು ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ಅಳಿಯ ಎಂಬುದು ಬಹುತೇಕರಿಗೆ ಗೊತ್ತಾಗಿರುವ ಸಂಗತಿ. ಇವರು ಬ್ರಿಟನ್ ಪ್ರಧಾನಿ ರೇಸ್‌ಗೆ ನಿಂತಾಗಲೇ ಶ್ರೀಮಂತಿಕೆ ವಿಚಾರದಲ್ಲಿ ಎಲ್ಲರ ಕಣ್ಣು ಕುಕ್ಕಿತ್ತು. ಬ್ರಿಟನ್ ರಾಜಕಾರಣಿಗಳ ಪೈಕಿ ಅತಿದೊಡ್ಡ ಶ್ರೀಮಂತ ಎನಿಸಿದ್ದರು. ಈ ಕಾರಣಕ್ಕೆ ಬಹಳ ಮಂದಿ ಟೀಕೆ ಮಾಡಿದ್ದುಂಟು. ಬ್ರಿಟನ್ ರಾಣಿಗಿಂತಲೂ ಅಕ್ಷತಾ ಮೂರ್ತಿ ಶ್ರೀಮಂತೆ ಎನ್ನುವ ವ್ಯಂಗ್ಯವೂ ಹೊರಹೊಮ್ಮಿತ್ತು.

ಈ ಬಗ್ಗೆ ಪ್ರಧಾನಿ ರಿಷಿ ಸುನಕ್ ಈ ರೀತಿ ಪ್ರತಿಕ್ರಿಯಿಸುತ್ತಾರೆ: "ನಮ್ಮ ದೇಶದಲ್ಲಿ (ಬ್ರಿಟನ್), ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇದೆ ಎನ್ನುವುದಕ್ಕಿಂತ ನಿಮ್ಮ ವ್ಯಕ್ತಿತ್ವ ನಿಮ್ಮ ಕೆಲಸಗಳ ಮೂಲಕ ನಿಮ್ಮನ್ನು ಅಳೆಯುತ್ತಾರೆ. ನಾನೇನು ಮಾಡಿದ್ದೇನೆ ಎಂದು ಜನರು ನೋಡಿದ್ದಾರೆ. ಕಷ್ಟದ ಸಂದರ್ಭದಲ್ಲಿ ಚಾನ್ಸಲರ್ (ಹಣಕಾಸು ಸಚಿವ) ಆಗಿ ನಾನು ಹೇಗೆ ಕೆಲಸ ಮಾಡಿದ್ದೇನೆ ಎಂದು ಎಲ್ಲರಿಗೂ ಗೊತ್ತು" ಎಂದಿದ್ದಾರೆ.

ತಮ್ಮ ಶ್ರೀಮಂತಿಕೆ ಬಗ್ಗೆ ಮಾತನಾಡಿದ ರಿಷಿ ಸುನಕ್, "ನಾನು ಹುಟ್ಟುತ್ತಲೇ ಹೀಗಿರಲಿಲ್ಲ. ವಿಭಿನ್ನ ಪರಿಸ್ಥಿತಿಯಲ್ಲಿ ಬೆಳೆದು ಬಹಳ ಶ್ರಮ ಪಟ್ಟು ಈ ಹಂತಕ್ಕೆ ಬಂದಿದ್ದೇನೆ. ಅದಕ್ಕಾಗಿ ನನಗೆ ಹೆಮ್ಮೆ ಇದೆ. ಬಹಳ ಶ್ರಮ ಪಟ್ಟು ತಮಗೆ ಹಾಗೂ ಕುಟುಂಬಕ್ಕೆ ಉತ್ತಮ ಜೀವನ ಕಲ್ಪಿಸುವ ಜನರನ್ನು ಬೆಂಬಲಿಸಿ ಸಂಭ್ರಮಿಸುವ ದೇಶ ನಮ್ಮದಾಗಬೇಕು. ಇಂಥ ಮಾನವೀಯ ಮೌಲ್ಯವನ್ನು ಬೆಂಬಲಿಸುವಂತಹ ಸರ್ಕಾರ ಕಟ್ಟುವುದು ನನ್ನ ಅಸೆ" ಎಂದು ರಿಷಿ ಸುನಕ್ ಈಸ್ಟರ್ನ್ ಐಗೆ ತಿಳಿಸಿದ್ದಾರೆ.

ಬ್ರಿಟನ್‌ನಲ್ಲಿ ಟೈಮ್ಸ್ ಗ್ರೂಪ್ ಸೇರಿದಂತೆ ಹಲವು ಸಂಸ್ಥೆಗಳು ಶ್ರೀಮಂತರ ಪಟ್ಟಿಗಳನ್ನು ನಿಯಮಿತವಾಗಿ ಪ್ರಕಟಿಸುತ್ತಲೇ ಇರುತ್ತವೆ. ಇದರಲ್ಲಿ ಏಷ್ಯನ್ ಮೂಲದ ಬ್ರಿಟನ್ ಶ್ರೀಮಂತರ ಪಟ್ಟಿಯೂ ಇದೆ. ಟೈಮ್ಸ್‌ನವರು ಕೆಲ ತಿಂಗಳ ಹಿಂದೆ ಪ್ರಕಟಿಸಿದ ಪಟ್ಟಿಯಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂಮ್ದಾರ್ ಮೊದಲಾದವರೂ ಇದ್ದಾರೆ.

English summary

UK's Asian Rich List 2022: Hinduja Family Top Again, Rishi Sunak Debuts

British Prime Minister Rishi Sunak and his wife Akshata Murty have made their debut on the UK's 'Asian Rich List 2022' topped by the Hinduja family.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X