For Quick Alerts
ALLOW NOTIFICATIONS  
For Daily Alerts

ಮಾರ್ಚ್ 1ರಿಂದ ಲಾಟರಿಗೆ ಒಂದೇ ರೀತಿ ತೆರಿಗೆ; ಎಷ್ಟು ಪರ್ಸೆಂಟ್ ಗೊತ್ತಾ?

|

ಇದೇ ಮಾರ್ಚ್ 1ರಿಂದ ಅನ್ವಯ ಆಗುವಂತೆ ಲಾಟರಿಗೆ ಏಕರೂಪದಲ್ಲಿ 28 ಪರ್ಸೆಂಟ್ ವಿಧಿಸಲಾಗುತ್ತದೆ. ಈ ದರ ಮಾರ್ಚ್ 1ರಿಂದ, ರಾಜ್ಯ ಸರ್ಕಾರಗಳು ಹಾಗೂ ಅಧಿಕೃತವಾಗಿ ಲಾಟರಿ ನಡೆಸುವಂತಹದ್ದಕ್ಕೆ ಅನ್ವಯಿಸುತ್ತದೆ. ಕಳೆದ ಡಿಸೆಂಬರ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿತ್ತು.

ಲಾಟರಿಗಳ ಮೇಲೆ ತೆರಿಗೆ ದರ ಏರಿಕೆ ಮಾಡುವುದು ಹಾಗೂ ಏಕರೂಪದ ದರ ವಿಧಿಸುವುದು ಆ ತೀರ್ಮಾನವಾಗಿತ್ತು. ಮಾರ್ಚ್ 1, 2020ರಿಂದ ಲಾಟರಿ ಟಿಕೆಟ್ ಖರೀದಿ ಮಾಡುವವರು 28 ಪರ್ಸೆಂಟ್ ಜಿಎಸ್ ಟಿ ಕಟ್ಟಬೇಕಾಗುತ್ತದೆ.

ಕಂದಾಯ ಇಲಾಖೆಯಿಂದ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಲಾಟರಿ ಟಿಕೆಟ್ ಪೂರೈಸುವುದಕ್ಕೆ 14 ಪರ್ಸೆಂಟ್ ಜಿಎಸ್ ಟಿ ದರ ವಿಧಿಸಿ, ತಿದ್ದುಪಡಿ ಮಾಡಲಾಗಿದೆ. ಅದೇ ಪ್ರಮಾಣದಲ್ಲಿ ರಾಜ್ಯ ಸರ್ಕಾರಗಳು ಕೂಡ ತೆರಿಗೆ ವಿಧಿಸುತ್ತದೆ. ಇದರ ಪರಿಣಾಮವಾಗಿ ಲಾಟರಿ ಮೇಲಿನ ಜಿಎಸ್ ಟಿಯನ್ನು 28 ಪರ್ಸೆಂಟ್ ಗೆ ಏರಿಕೆ ಮಾಡಲಾಗಿದೆ.

ಮಾ. 1ರಿಂದ ಲಾಟರಿಗೆ ಒಂದೇ ರೀತಿ ತೆರಿಗೆ; ಎಷ್ಟು ಪರ್ಸೆಂಟ್ ಗೊತ್ತಾ?

ಸದ್ಯಕ್ಕೆ ರಾಜ್ಯ ಸರ್ಕಾರದ ಸಂಸ್ಥೆಗಳು ನಡೆಸುವ ಲಾಟರಿಗೆ 12 ಪರ್ಸೆಂಟ್ ಜಿಎಸ್ ಟಿ ಇದೆ. ಇನ್ನು ರಾಜ್ಯ ಸರ್ಕಾರದ ಅನುಮತಿ ಪಡೆದ ಅಧಿಕೃತ ಸಂಸ್ಥೆಗಳು ನಡೆಸುವ ಲಾಟರಿಗೆ 28 ಪರ್ಸೆಂಟ್ ಜಿಎಸ್ ಟಿ ಇದೆ. ಏಕರೂಪದ ತೆರಿಗೆ ವಿಧಿಸುವಂತೆ ಲಾಟರಿ ವಲಯದಿಂದ ಬೇಡಿಕೆ ಬಂದಿತ್ತು. ಆ ನಂತರ ಸಚಿವರ ಸಮಿತಿಯೊಂದನ್ನು ರಚಿಸಿ, ಜಿಎಸ್ ಟಿ ದರದ ಬಗ್ಗೆ ಸಲಹೆ ನೀಡಲು ಕೇಳಲಾಗಿತ್ತು.

ಮಹಾರಾಷ್ಟ್ರದ ಹಣಕಾಸು ಸಚಿವ ಸುಧೀರ್ ಮುಂಗಂಟಿವೀರ್ ನೇತೃತ್ವದ ಸಮಿತಿಯು, ಲಾಟರಿ ಮೇಲೆ 18 ಅಥವಾ 28 ಪರ್ಸೆಂಟ್ ಜಿಎಸ್ ಟಿ ವಿಧಿಸಲು ಶಿಫಾರಸು ಮಾಡಿತ್ತು.

English summary

Uniform Rate Of GST On Lotteries From March 1st

Uniform rate of 28 percent GST on state and state authorised lotteries from March 1st. Here is the complete details.
Story first published: Monday, February 24, 2020, 9:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X