For Quick Alerts
ALLOW NOTIFICATIONS  
For Daily Alerts

ಶಾಪಿಂಗ್ ಮಾಲ್, ಧಾರ್ಮಿಕ ಸ್ಥಳ, ರೆಸ್ಟೋರೆಂಟ್ ಗಳಿಗೆ ಹೊಸ ನಿಯಮ

|

ಶಾಪಿಂಗ್ ಮಾಲ್, ಧಾರ್ಮಿಕ ಸ್ಥಳ- ಸಾನ್ನಿಧ್ಯಗಳು, ರೆಸ್ಟೋರೆಂಟ್ ಗಳು ಇನ್ನೇನು ತೆರೆಯುವುದಕ್ಕೆ ಮೂರು ದಿನ ಬಾಕಿ ಇದೆ. ಅಂದರೆ ಸೋಮವಾರದಿಂದ (ಜೂನ್ 8, 2020) ಕಾರ್ಯ ಚಟುವಟಿಕೆ ಶುರು ಮಾಡಲಿವೆ. ಕೊರೊನಾದಿಂದ ಸುದೀರ್ಘ ಸಮಯ ಲಾಕ್ ಡೌನ್ ನಲ್ಲಿದ್ದ ಇವುಗಳ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಗೃಹ ವ್ಯವಹಾರಗಳ ಸಚಿವಾಲಯ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ.

ಆದರೆ, ಈ ಎಲ್ಲವನ್ನೂ ಕಂಟೇನ್ ಮೆಂಟ್ ಪ್ರದೇಶದಲ್ಲಿ ಆರಂಭಿಸಲು ಇನ್ನೂ ಅನುಮತಿ ಸಿಕ್ಕಿಲ್ಲ. ಅದರ ಆಚೆಗೆ ಮಾತ್ರ ತೆಗೆಯಲು ಒಪ್ಪಿಗೆ ನೀಡಲಾಗಿದೆ. ಅದರಲ್ಲೂ ಶಾಪಿಂಗ್ ಮಾಲ್ ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಮಕ್ಕಳ ಆಟಕ್ಕೆ ಅಂತ ಮೀಸಲಾದ ಸ್ಥಳಗಳು ಹಾಗೂ ಚಿತ್ರಮಂದಿರಗಳು ತೆರೆಯುವುದಿಲ್ಲ.

 

ಆರ್ಥಿಕತೆ 1.5 ಪರ್ಸೆಂಟ್ ಕುಗ್ಗಬಹುದು ಎನ್ನುತ್ತಿದೆ ಆರ್ ಬಿಐ ಸಮೀಕ್ಷೆ

ಇನ್ನು ಧಾರ್ಮಿಕ ಸ್ಥಳಗಳ ಪುನರಾರಂಭಕ್ಕೆ ಕಠಿಣ ನಿಬಂಧನೆಗಳೊಂದಿಗೆ ಅನುಮತಿ ನೀಡಲಾಗಿದೆ. ವಿಗ್ರಹ- ಮೂರ್ತಿ, ಪವಿತ್ರ ಗ್ರಂಥಗಳು ಇತ್ಯಾದಿಗಳನ್ನು ಮುಟ್ಟುವಂತಿಲ್ಲ. ದೊಡ್ಡ ಪ್ರಮಾಣದ ಸಭೆ- ಸಮಾರಂಭಗಳಿಗೆ ನಿಷೇಧ ಮುಂದುವರಿದಿದೆ. ರೆಕಾರ್ಡ್ ಆಗಿರುವ ಭಕ್ತಿಗೀತೆ, ಶ್ಲೋಕಗಳನ್ನು ಹಾಕಬಹುದು. ಆದರೆ ಗುಂಪುಗಳಲ್ಲಿ ಹಾಡುವುದು, ಶ್ಲೋಕ ಪಠಣ ಮಾಡುವಂತಿಲ್ಲ. ಇನ್ನು ಭಕ್ತರಿಗೆ ಪ್ರಸಾದ ವಿತರಣೆ, ಪವಿತ್ರ ಜಲ ಸಿಂಪಡಣೆ ಇತ್ಯಾದಿಗಳನ್ನು ಧಾರ್ಮಿಕ ಸ್ಥಳಗಳಲ್ಲಿ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.

ರೆಸ್ಟೋರೆಂಟ್ ಗಳಲ್ಲಿ ಹೇಗಿರಬೇಕು ವ್ಯವಸ್ಥೆ?

ರೆಸ್ಟೋರೆಂಟ್ ಗಳಲ್ಲಿ ಹೇಗಿರಬೇಕು ವ್ಯವಸ್ಥೆ?

ರೆಸ್ಟೋರೆಂಟ್ ಗಳಿಗೂ ಕೆಲವು ಸೂಚನೆಗಳನ್ನು ನೀಡಲಾಗಿದೆ. ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಸೇವೆಯನ್ನು ಪ್ರೋತ್ಸಾಹಿಸಲು ಸೂಚಿಸಲಾಗಿದೆ. ಗ್ರಾಹಕರ ಮನೆ ಬಾಗಿಲಿಗೆ ಆಹಾರ ಪದಾರ್ಥಗಳನ್ನು ಒದಗಿಸುವ ವ್ಯವಸ್ಥೆ ಮಾಡಲು ತಿಳಿಸಲಾಗಿದೆ. ಹಾಗೆ ಮನೆಗಳಿಗೆ ತಲುಪಿಸುವವರ ಥರ್ಮಲ್ ಸ್ಕ್ರೀನಿಂಗ್ ಆಗಬೇಕು. ಅದೇ ರೀತಿ ರೆಸ್ಟೋರೆಂಟ್ ಗಳಲ್ಲಿ ಆಸನ ವ್ಯವಸ್ಥೆ ಮಾಡುವಾಗ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಒಟ್ಟು ಸಾಮರ್ಥ್ಯದ ಶೇಕಡಾ ಐವತ್ತರಷ್ಟು ಗ್ರಾಹಕರಿಗೆ ಮಾತ್ರ ಅನುವು ಮಾಡಿಕೊಡಲು ಸೂಚಿಸಲಾಗಿದೆ. ಬಟ್ಟೆಯ ನ್ಯಾಪ್ಕಿನ್ ಬದಲಿಗೆ ಉತ್ತಮ ಗುಣಮಟ್ಟದ ಡಿಸ್ ಪೋಸಬಲ್ ಪೇಪರ್ ನ್ಯಾಪ್ಕಿನ್ ಗೆ ಉತ್ತೇಜನ ನೀಡಲಾಗಿದೆ.

ಕಚೇರಿಯಲ್ಲಿ ಹೇಗಿರಬೇಕು ನಿಯಮ?

ಕಚೇರಿಯಲ್ಲಿ ಹೇಗಿರಬೇಕು ನಿಯಮ?

ಕಚೇರಿಗಳ ವಿಚಾರಕ್ಕೆ ಬಂದರೆ ವರ್ಕ್ ಸ್ಟೇಷನ್, ಕಾರಿಡಾರ್, ಎಲಿವೇಟರ್ ಮತ್ತು ಮೆಟ್ಟಿಲು, ಪಾರ್ಕಿಂಗ್ ಸ್ಥಳ, ಕೆಫಟೇರಿಯಾ, ಮೀಟಿಂಗ್ ರೂಮ್, ಕಾನ್ಫರೆನ್ಸ್ ಹಾಲ್ ಗಳಲ್ಲಿ ಕಾರ್ಯ ನಿರ್ವಹಣೆ ಬಹಳ ಹತ್ತಿರದಲ್ಲಿ ಇರುತ್ತದೆ. ಇನ್ನು ಕಚೇರಿ ಸಮಯ, ಊಟ ಹಾಗೂ ಕಾಫಿ ಬಿಡುವಿನ ವೇಳೆಯಲ್ಲಿ ಜನ ಸಂದಣಿ ಹೆಚ್ಚಿರುತ್ತದೆ. ಯಾವುದೇ ಮಳಿಗೆ, ಸ್ಟಾಲ್ ಗಳು, ಕೆಫಟೇರಿಯಾ ಮುಂತಾದವು ಕಚೇರಿ ಒಳಗಿರಲಿ ಅಥವಾ ಹೊರಗಿರಲಿ ಎಲ್ಲ ಸಮಯದಲ್ಲೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ಇನ್ನು ಉದ್ಯೋಗಿಗಳಿಗೆ ಆಸನ ವ್ಯವಸ್ಥೆ ಮಾಡುವಾಗಲೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಲಿಫ್ಟ್, ಏರ್ ಕಂಡೀಷನರ್ ಇತ್ಯಾದಿ ನಿಯಮಗಳು
 

ಲಿಫ್ಟ್, ಏರ್ ಕಂಡೀಷನರ್ ಇತ್ಯಾದಿ ನಿಯಮಗಳು

ಲಿಫ್ಟ್ ನಲ್ಲಿ ಜನರ ಸಂಖ್ಯೆಗೆ ಮಿತಿ ವಿಧಿಸಬೇಕು. ಏರ್ ಕಂಡೀಷನರ್ ಗಳಿಗೆ ತಾಪಮಾನ ನಿಗದಿ ಮಾಡುವಾಗ 24- 30 ಡಿಗ್ರಿ ಸೆಲ್ಷಿಯಸ್ ಮಧ್ಯೆ ಇರಬೇಕು. ಇನ್ನು ಹ್ಯುಮಿಡಿಟಿ 40ರಿಂದ 70 ಪರ್ಸೆಂಟ್ ಮಧ್ಯೆ ಇರಬೇಕು. ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ಗಾಳಿ ಬರುವಂತಿರಬೇಕು. ಪಾರ್ಕಿಂಗ್ ಸ್ಥಳದಲ್ಲಿ ಜನರನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಅಷ್ಟೇ ಅಲ್ಲ, ಅದರ ಆಚೆ ಕೂಡ ಸಮರ್ಪಕವಾದ ನಿರ್ವಹಣೆಯನ್ನು ಖಾತ್ರಿ ಮಾಡಿಕೊಳ್ಳಬೇಕು. ಅರವತ್ತೈದು ವರ್ಷದ ಮೇಲ್ಪಟ್ಟವರು, ಆರೋಗ್ಯ ಸಮಸ್ಯೆ ಇರುವವರು ಹಾಗೂ ಗರ್ಭಿಣಿಯರು ಮನೆಯಲ್ಲಿ ಇರಬೇಕು. ಅಗತ್ಯ ಆರೋಗ್ಯ ಸೇವೆಗಳನ್ನು ಹೊರತುಪಡಿಸಿ, ಇನ್ಯಾವುದಕ್ಕೂ ಮನೆ ಬಿಟ್ಟು ಬಾರದಂತೆ ಸೂಚಿಸಲಾಗಿದೆ.

English summary

Unlock 1: SOP For Religious Places, Restaurants, Offices Etc

Standard Operation Procedure instruction by ministry of home affairs for religious place, restaurants and office etc during unlock 1.
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more