For Quick Alerts
ALLOW NOTIFICATIONS  
For Daily Alerts

ಯುಎಸ್ H-1B ವೀಸಾಗೆ ಅರ್ಜಿ ಹಾಕಿಕೊಂಡ ಟಾಪ್ 10 ಕಂಪೆನಿಗಳಿವು

|

ಯು.ಎಸ್.ನಲ್ಲಿ ಎಚ್ 1ಬಿ ವೀಸಾಗಳ ನಿಯಮ ಕಠಿಣ ಮಾಡಿದರೆ ಭಾರತದಲ್ಲಿನ ಐಟಿ ಕಂಪೆನಿಗಳು ಪತರಗುಟ್ಟುವುದು ಏಕೆ? ಹೀಗೊಂದು ಪ್ರಶ್ನೆ ಹಲವರ ಮನಸ್ಸಿನಲ್ಲಿ ಇದ್ದಿರಬಹುದು. ಅದಕ್ಕೆ ಉತ್ತರ ಸಿಗುವಂಥ ವರದಿ ಇದು. ನಿಮಗೆ ಗೊತ್ತಿರಲಿ, 2020ರ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ ಅತಿ ಹೆಚ್ಚು ವೀಸಾ ಅರ್ಜಿಗಳನ್ನು ಸಲ್ಲಿಸಿವೆ ಕ್ವಾಲ್ ಕಾಮ್, ಇನ್ಫೋಸಿಸ್ ಹಾಗೂ ಕಾಗ್ನಿಜಂಟ್ ಕಂಪೆನಿಗಳು. ಇದು ಯು.ಎಸ್. ನಿಂದಲೇ ಬಿಡುಗಡೆ ಆಗಿರುವ ಅಂಕಿ- ಅಂಶ.

ಕೊರೊನಾ ಹಾಗೂ ಎಚ್‌1 ಬಿ ವೀಸಾ ಬಗ್ಗೆ ನಂದನ್ ನಿಲೇಕಣಿ ಮಾತುಗಳುಕೊರೊನಾ ಹಾಗೂ ಎಚ್‌1 ಬಿ ವೀಸಾ ಬಗ್ಗೆ ನಂದನ್ ನಿಲೇಕಣಿ ಮಾತುಗಳು

ಇನ್ನು ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ ಸಲ್ಲಿಕೆ ಆಗಿರುವ ವೀಸಾ ಅರ್ಜಿಗಳ ಸಂಖ್ಯೆ 1,85,298. ಈ ವೀಸಾ ಅರ್ಜಿಯಲ್ಲಿ H-1B ಕೂಡ ಒಳಗೊಂಡಿದೆ. ಕೆಲವು ಅರ್ಜಿಗಳು ಮುಂದಿನ ಆರ್ಥಿಕ ವರ್ಷಕ್ಕಾಗಿ ಈಗಲೇ ಸಲ್ಲಿಕೆ ಆಗಿವೆ. H-1B ವೀಸಾಕ್ಕಾಗಿ ಅರ್ಜಿ ಹಾಕಿಕೊಂಡವರ ಪೈಕಿ ಯಾವ ವೃತ್ತಿಯವರು ಹೆಚ್ಚು ಎಂಬುದರ ವಿವರ ಹೀಗಿದೆ.

* ಸಾಫ್ಟ್ ವೇರ್ ಡೆವಲಪರ್ಸ್, ಆಪ್ಸ್

* ಕಂಪ್ಯೂಟರ್ ಸಿಸ್ಟಮ್ ಎಂಜಿನಿಯರ್ಸ್/ಆರ್ಕಿಟೆಕ್ಟ್ಸ್

* ಸಾಫ್ಟ್ ವೇರ್ ಡೆವಲಪರ್ಸ್, ಸಿಸ್ಟಮ್. ಸಾಫ್ಟ್ ವೇರ್

* ಕಂಪ್ಯೂಟರ್ ಸಿಸ್ಟಮ್ ಅನಲಿಸ್ಟ್ಸ್

* ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್, ಕಂಪ್ಯೂಟರ್ ಹೊರತುಪಡಿಸಿ

* ಮ್ಯಾನೇಜ್ ಮೆಂಟ್ ಅನಲಿಸ್ಟ್ಸ್

* ಕಂಪ್ಯೂಟರ್ ಅಂಡ್ ಇನ್ಫರ್ಮೇಷನ್ ಸಿಸ್ಟಮ್ ಮ್ಯಾನೇಜರ್ಸ್

* ಆಪರೇಷನ್ ರೀಸರ್ಚ್ ಅನಲಿಸ್ಟ್ಸ್

* ಕಂಪ್ಯೂಟರ್ ಪ್ರೋಗ್ರಾಮರ್ಸ್

* ಸಾಂಖ್ಯಿಕ ತಜ್ಞರು

ಯುಎಸ್ H-1B ವೀಸಾಗೆ ಅರ್ಜಿ ಹಾಕಿಕೊಂಡ ಟಾಪ್ 10 ಕಂಪೆನಿಗಳಿವು

ಅರ್ಜಿ ಸಲ್ಲಿಸಿದ ಟಾಪ್ ಟೆನ್ ಕಂಪೆನಿಗಳ ಪಟ್ಟಿ ಹೀಗಿದೆ
* ಕ್ವಾಲ್ ಕಾಮ್ ಟೆಕ್ನಾಲಜೀಸ್

* ಇನ್ಫೋಸಿಸ್

* ಕಾಗ್ನಿಜಂಟ್ ಟೆಕ್ನಾಲಜಿ ಸಲ್ಯೂಷನ್ಸ್

* ಯುಎಸ್ ಕಾರ್ಪೊರೇಷನ್

* ಡೆಲಾಯಿಟ್ ಕನ್ಸಲ್ಟಿಂಗ್

* ಅಮೆಜಾನ್.ಕಾಮ್ ಸರ್ವೀಸಸ್

* ಒರಾಕಲ್ ಅಮೆರಿಕ

* ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್

* ಝೆನ್ಸರ್ ಟೆಕ್ನಾಲಜೀಸ್

* NVIDIA ಕಾರ್ಪೊರೇಷನ್

* ಗೂಗಲ್

ಯು.ಎಸ್. ವಲಸಿಗ ಸಂಸ್ಥೆಯು ಮೂವತ್ತೈದು ಸಾವಿರ ಅರ್ಜಿಗಳನ್ನು ಶಾಶ್ವತ ಉದ್ಯೋಗ ಕಾರ್ಯಕ್ರಮದ ಅಡಿಯಲ್ಲಿ ಪ್ರಮಾಣೀಕೃತ ಮಾಡಿದೆ. ಅಥವಾ ಉದ್ಯೋಗದಾತರ ಪ್ರಾಯೋಜಕತ್ವ ಗ್ರೀನ್ ಕಾರ್ಡ್ ನೀಡಿದೆ. ಅದರಲ್ಲಿ ಅರ್ಧಕ್ಕೂ ಹೆಚ್ಚು ಅರ್ಜಿಗಳು ಭಾರತೀಯ ನಾಗರಿಕದು. ಅಮೆರಿಕ ಪೌರತ್ವ ಅತಿ ಹೆಚ್ಚು ಪ್ರಮಾಣದಲ್ಲಿ ಹೊಂದಿದ ದೇಶ ಭಾರತ. ಆ ನಂತರದ ಸ್ಥಾನದಲ್ಲಿ ಚೀನಾ ಹಾಗೂ ಮೆಕ್ಸಿಕೋ ಇದೆ.

English summary

Top 10 Companies who Applied for US H-1B Visa

Here is the list of top 10 companies applied for US H- 1B visa.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X