For Quick Alerts
ALLOW NOTIFICATIONS  
For Daily Alerts

ಭಾರತ, ಚೀನಾ ವಿರುದ್ಧ ಅಮೆರಿಕ ಸೆನೆಟರ್ ವಾಗ್ದಾಳಿ

|

ಚೀನಾ ಹಾಗೂ ಭಾರತದಂಥ ದೇಶಗಳು ಎರಡು ದಶಕಗಳ ಕಾಲ ಬಹಳ ಪಡೆದು, ಶ್ರೀಮಂತವಾಗಿವೆ. ಆದರೆ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳುವುದಕ್ಕೆ ನಿರಾಕರಿಸುತ್ತವೆ ಎಂದು ಯು.ಎಸ್. ಸೆನೆಟರ್ ವೊಬ್ಬರು ಆರೋಪ ಮಾಡಿದ್ದಾರೆ. ಆ ಮೂಲಕ ವಿಶ್ವ ವಾಣಿಜ್ಯ ಸಂಸ್ಥೆ ಅಸಮತೋಲನ ಆಗುತ್ತಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪ ಸೂಕ್ತವಾಗಿದೆ ಎಂದಿದ್ದಾರೆ.

 

ಸೆನೆಟರ್ ಚುಕ್ ಗ್ರಾಸ್ಲೆ ಬುಧವಾರ ಈ ಹೇಳಿಕೆ ನೀಡಿದ್ದಾರೆ. ಇನ್ನು ಭವಿಷ್ಯದ ಯಾವುದೇ ವ್ಯವಹಾರದಲ್ಲೂ ವಿಶೇಷ ಸ್ಥಾನಮಾನ ಪಡೆಯಲು ತಾವು ಅರ್ಹರು. ಏಕೆಂದರೆ ನಮ್ಮದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎನ್ನುತ್ತವೆ ಎಂದು ಕೂಡ ಸೆನೆಟರ್ ಹೇಳಿದ್ದಾರೆ.

ಏಪ್ರಿಲ್- ಜೂನ್: US ಆರ್ಥಿಕತೆ 33% ಇಳಿಕೆ- ಸಾರ್ವಕಾಲಿಕ ಹೀನಾಯ ಕುಸಿತಏಪ್ರಿಲ್- ಜೂನ್: US ಆರ್ಥಿಕತೆ 33% ಇಳಿಕೆ- ಸಾರ್ವಕಾಲಿಕ ಹೀನಾಯ ಕುಸಿತ

ಚೀನಾ ಹಾಗೂ ಭಾರತದಂಥ ದೇಶಗಳನ್ನು ಕ್ಯಾಮರೂನ್ ದೇಶದ ಥರ ಪರಿಗಣಿಸುವುದು ಹಾಸ್ಯಾಸ್ಪದ. ಆದ್ದರಿಂದ ಈ ಅಸಮತೋಲನದ ಬಗ್ಗೆ ಡೊನಾಲ್ಡ್ ಟ್ರಂಪ್ ನಿರ್ಧಾರ ಹಾಗೂ ವಿಶ್ವ ವಾಣಿಜ್ಯ ಸಂಸ್ಥೆಯನ್ನು ಪ್ರಸ್ತುತ ಇರುವಂತೆ ಮಾಡುವುದನ್ನು ನಾನು ಮೆಚ್ಚುತ್ತೇನೆ ಎಂದಿದ್ದಾರೆ.

ಚೀನಾ, ಟರ್ಕಿ, ಭಾರತದ ವಿರುದ್ಧ ವಾಗ್ದಾಳಿ

ಚೀನಾ, ಟರ್ಕಿ, ಭಾರತದ ವಿರುದ್ಧ ವಾಗ್ದಾಳಿ

ವಿಶ್ವ ವಾಣಿಜ್ಯ ಸಂಸ್ಥೆಯು "ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು" ಎಂಬ ಸ್ಥಾನಮಾನವನ್ನು ಹೇಗೆ ವ್ಯಾಖ್ಯಾನ ಮಾಡುತ್ತದೆ ಎಂದು ಕಳೆದ ವರ್ಷ ಟ್ರಂಪ್ ಪ್ರಶ್ನೆ ಮಾಡಿದ್ದರು. ‌ಚೀನಾ, ಟರ್ಕಿ ಹಾಗೂ ಭಾರತವನ್ನು ಗಮನದಲ್ಲಿ ಇಟ್ಟುಕೊಂಡು ಈ ಪ್ರಶ್ನೆ ಕೇಳಿದ್ದರು. ಜಾಗತಿಕ ವ್ಯಾಪಾರ ನಿಯಮಗಳಲ್ಲಿ ಈ ದೇಶಗಳು ಕೆಲವು ವಿನಾಯಿತಿಗಳನ್ನು ಪಡೆಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ವಿಶ್ವ ವಾಣಿಜ್ಯ ಸಂಸ್ಥೆಯ ಹುಳುಕನ್ನು ಬಳಸಿಕೊಂಡು ತಮಗೆ ಬೇಕಾದಂತೆ ಅನುಕೂಲ ಪಡೆಯುತ್ತಿದ್ದ ದೇಶಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದರು.

ಟ್ರಂಪ್ ನಿರ್ಧಾರ ಸರಿಯಿದೆ

ಟ್ರಂಪ್ ನಿರ್ಧಾರ ಸರಿಯಿದೆ

ವಿಶ್ವ ವಾಣಿಜ್ಯ ಸಂಸ್ಥೆಗೆ ಇಪ್ಪತ್ತೈದು ವರ್ಷ ಆಗಿದೆ. ನಾವು ಈಗಲೂ ವ್ಯಾಪಾರದ ಉದಾರೀಕರಣದಲ್ಲಿ ಪ್ರಮುಖ ಬದಲಾವಣೆ ನೋಡಬೇಕಿದೆ. ಆದ್ದರಿಂದ ಸಂಸ್ಥೆಯಲ್ಲಿ ಬದಲಾವಣೆ ಆಗಬೇಕಿದೆ ಎಂದು ಟ್ರಂಪ್ ಹೇಳಿದ್ದಾರೆ. ಇತರ ದೇಶಗಳ ತೆರಿಗೆ ದರ ಮತ್ತು ಅಡೆತಡೆಗಳು ಹೆಚ್ಚಾಗಿವೆ ಎಂದು ಹೇಳಿದ್ದಾರೆ. ಅವರು ಹೇಳಿರುವುದು ಸರಿಯಾಗಿದೆ ಎಂದು ಗ್ರಾಸ್ಲೆ ಹೇಳಿದ್ದಾರೆ.

ವಿಶ್ವ ವಾಣಿಜ್ಯ ಸಂಸ್ಥೆಯ ಹುಳುಕಿನ ದುರುಪಯೋಗ
 

ವಿಶ್ವ ವಾಣಿಜ್ಯ ಸಂಸ್ಥೆಯ ಹುಳುಕಿನ ದುರುಪಯೋಗ

ಮತ್ತೊಬ್ಬ ಸೆನೆಟರ್ ರಾಯ್ ವೈಡನ್ ಕೂಡ ಮಾತನಾಡಿ, ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ ಸುಧಾರಣೆಗಳು ಆಗಬೇಕಿದೆ. ಎರಡು ದಶಕಕ್ಕೂ ಹಿಂದೆ ರೂಪಿಸಲಾದ ನಿಯಮಗಳನ್ನು ಬದಲಿಸಬೇಕಿದೆ ಎಂದಿದ್ದಾರೆ. ನಿರ್ದಿಷ್ಟವಾಗಿ ಚೀನಾ ವಿರುದ್ಧ ವಾಗ್ದಾಳಿ ನಡೆಸಿ, ವಿಶ್ವ ವಾಣಿಜ್ಯ ಸಂಸ್ಥೆಯ ಹುಳುಕನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

English summary

US Lawmaker Alleges India For Not Taking Responsibilities Despite Getting Richer

India, China getting richer by WTO rules, but not taking responsibilities, alleged by US lawmaker.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X