For Quick Alerts
ALLOW NOTIFICATIONS  
For Daily Alerts

ನರೇಂದ್ರ ಮೋದಿ ನನ್ನ ಸ್ನೇಹಿತ, ಭಾರತಕ್ಕೆ ಹೋಗಲು ಎದುರು ನೋಡುತ್ತಿದ್ದೇನೆ: ಟ್ರಂಪ್

|

ಅಮೆರಿಕಾ ಅಧ್ಯಕ್ಷ ಡೊನಾಲ್ಟ್‌ ಟ್ರಂಪ್ ಅವರು ಇದೇ ತಿಂಗಳ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು, ಭಾರತಕ್ಕೆ ಬರಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಭಾರತಕ್ಕೆ ತಮ್ಮ ಮೊದಲ ಅಧಿಕೃತ ಪ್ರವಾಸವಾಗಿ ಫೆಬ್ರವರಿ 24, 25ರಂದು ಭೇಟಿ ನೀಡಲಿದ್ದಾರೆ ಎಂದು ಈಗಾಗಲೇ ಅಮೆರಿಕದ ವೈಟ್ ಹೌಸ್ ಘೋಷಣೆ ಮಾಡಿದೆ. ಡೊನಾಲ್ಡ್ ಟ್ರಂಪ್ ಜತೆಗೆ ಪತ್ನಿ ಮೆಲಿನಾ ಕೂಡ ಇರಲಿದ್ದಾರೆ. ದೆಹಲಿ ಹೊರತುಪಡಿಸಿ, ಗುಜರಾತ್ ನ ಅಹಮದಾಬಾದ್ ಗೆ ಕೂಡ ಟ್ರಂಪ್ ಭೇಟಿ ನೀಡಲಿದ್ದಾರೆ. ಈ ಭೇಟಿ ವೇಳೆಯಲ್ಲಿ ವ್ಯೂಹಾತ್ಮಕ ದ್ವಿಪಕ್ಷೀಯ ಸಹಭಾಗಿತ್ವ ಬಲಪಡಿಸಲಾಗುವುದು ಎಂದು ತಿಳಿಸಲಾಗಿದೆ.

ಮೋದಿ ನನ್ನ ಸ್ನೇಹಿತ, ಭಾರತಕ್ಕೆ ಹೋಗಲು ಎದುರು ನೋಡುತ್ತಿದ್ದೇನೆ

''ನಾನು ಭಾರತಕ್ಕೆ ಹೋಗಲು ಎದುರು ನೋಡುತ್ತಿದ್ದೇನೆ. "ಅವರು (ಪ್ರಧಾನಿ ನರೇಂದ್ರ ಮೋದಿ) ನನ್ನ ಸ್ನೇಹಿತ. ಅವರು ಮಹಾನ್ ಸಂಭಾವಿತ ವ್ಯಕ್ತಿ" ಎಂದು ಟ್ರಂಪ್ ಓವಲ್ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಭಾರತದೊಂದಿಗಿನ ಸಂಭಾವ್ಯ ವ್ಯಾಪಾರ ಒಪ್ಪಂದದ ಕುರಿತ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, "ನಾವು ಸರಿಯಾದ ಒಪ್ಪಂದವನ್ನು ಮಾಡಿಕೊಳ್ಳಬಹುದಾದರೆ" ಅದನ್ನು ಮಾಡುತ್ತೇವೆ ಎಂದು ಹೇಳಿದರು.

ನಾನು ಭಾರತಕ್ಕೆ ಹೋದಾಗ ವಿಮಾನ ನಿಲ್ದಾಣದಿಂದ ಹೊಸ ಕ್ರೀಡಾಂಗಣಕ್ಕೆ 5 ರಿಂದ 7 ಮಿಲಿಯನ್ ಜನರು ಸ್ವಾಗತಿಸುತ್ತಾರೆ ಎಂದು ಮೋದಿ ಭರವಸೆ ನೀಡಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಮುಂಬರುವ ಪ್ರವಾಸದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಅಮೆರಿಕಾ ಅಧ್ಯಕ್ಷರು ವಾರಾಂತ್ಯದಲ್ಲಿ ಮೋದಿಯೊಂದಿಗೆ ಮಾತನಾಡಿದ್ದರು ಮತ್ತು ಸಂಭಾಷಣೆಯ ಸಮಯದಲ್ಲಿ, ಅವರನ್ನು ವಿಮಾನ ನಿಲ್ದಾಣದಿಂದ ಕ್ರಿಕೆಟ್ ಕ್ರೀಡಾಂಗಣದವರೆಗೆ ಲಕ್ಷಾಂತರ ಜನರು ಸ್ವಾಗತಿಸುವುದಾಗಿ ಪ್ರಧಾನಿ ಹೇಳಿದ್ದಾರೆ.

English summary

US President Trump Says He Is Looking Forward To Visit India

US President Donald Trump has said he is looking forward to his visit to India later this month
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X